ಅಖಂಡ ಭಾರತದ ಕನಸು ಸಾಕಾರಕ್ಕೆ ವಿಶ್ವ ಜ್ಞಾನ್ ದಿವಸ್ ಸ್ಫೂರ್ತಿ: ಪ್ಯಾಟಿ

0
69

ಕಲಬುರಗಿ: ವಿಶ್ವರತ್ನ ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ ೧೪ನ್ನು ವಿಶ್ವಸಂಸ್ಥೆಯು ವಿಶ್ವ ಜ್ಞಾನ ದಿನವನ್ನಾಗಿ ಘೋಷಿಸಿರುವುದನ್ನು ಇಡೀ ಮನುಕುಲವೇ ಸ್ವಾಗತಿಸಿದೆ. ಅದರಲ್ಲಿಯೂ ಭಾರತಿಯರಿಗಂತೂ ವಿಶ್ವಸಂಸ್ಥೆಯ ಘೋಷಣೆಯು ಹೆಮ್ಮೆ ಹಾಗೂ ಗೌರವವನ್ನು ಹೆಚ್ಚಿಸಿದೆ. ಆ ಹಿನ್ನೆಲೆಯಲ್ಲಿ ಅಖಂಡ ಭಾರತದ ಕನಸು ಸಾಕಾರಗೊಳ್ಳಲು ವಿಶ್ವಜ್ಞಾನ ದಿವಸ್ ಸ್ಫೂರ್ತಿ ಆಗಲಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶಾಮರಾವ್ ಪ್ಯಾಟಿ ಅವರು ಬಣ್ಣಿಸಿದ್ದಾರೆ.

ಅಖಂಡ ಭಾರತದ ನಿರ್ಮಾಣದ ಕನಸ್ಸು ಹೊತ್ತೇ ವಿಶ್ವರತ್ನ ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸೇರಿದರು ಎಂಬುದನ್ನು ಅವರ ವಿಚಾರಧಾರೆಗಳಿಂದ ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಡಾ. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದ್ದನ್ನು ಪಕ್ಷಾತೀತವಾಗಿ ಎಲ್ಲ ರಾಷ್ಟ್ರೀಯ ನಾಯಕರು ಬೆಂಬಲಿಸಿದ್ದರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

Contact Your\'s Advertisement; 9902492681

ಹವ್ಯಾಸಿ ಆಪ್ತ ಸಮಾ ಲೋಚಕರ ಅಭ್ಯಾಸ ಪುಸ್ತಕ ಬಿಡುಗಡೆ

ಭಾರತದ ವಿಭಜನೆಯಿಂದ ಸಿಂಧು ನದಿ ನಾಗರಿಕತೆಯ ಕಥೆಯು ಮರೀಚಿಕೆಯಾಯಿತು. ಬ್ಯಾರಿಸ್ಟರ್ ಜಿನ್ನಾ ಅವರ ಮಾತು ಕೇಳಿ ಕಾಂಗ್ರೆಸ್ಸಿನ ಕೆಲ ಪ್ರಭಾವಿ ನಾಯಕರು ಹಾಗೂ ಬ್ರಿಟಿಷರ ಕುಟಿಲ ನೀತಿಯಿಂದ ಭಾರತ ವಿಭಜನೆಯಾಗಿ ಏಳು ದಶಕಗಳು ಕಳೆದರೂ ಈಗಿನ ಪಾಕಿಸ್ತಾನ್ ದೇಶವು ಯಾವುದೇ ಪ್ರಗತಿ ಸಾಧಿಸಿಲ್ಲ ಹಾಗೂ ಅಭಿವೃದ್ಧಿಯನ್ನೂ ಹೊಂದಲಿಲ್ಲ.

ಸಿಂಧು ನದಿ ನಾಗರಿಕತೆ ತಿಳಿಯದೇ ದೇಶದ ಕೆಲ ಪ್ರಭಾವಿ ನಾಯಕರು ಬ್ರಿಟಿಷರ ಮಾತಿಗೆ ಸೊಪ್ಪು ಹಾಕಿ ದೇಶದ ಪ್ರಗತಿ ಕುಂಠಿತಗೊಳಿಸಿ ಅಸಹಾಯಕರಾದರು. ಭಾರತ ವಿಭಜನೆ ಸಂದರ್ಭದಲ್ಲಿ ಭಾರತದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬ್ಯಾರಿಸ್ಟರ್ ಜಿನ್ನಾ ಅವರ ಮಾತು ಕೇಳಿ ಭಾರತ ಇನ್ನೊಂದು ಮಾಡಿ ದಲಿತ ಸ್ಥಾನ ದೇಶ ಹುಟ್ಟು ಹಾಕಿದ್ದರೆ ಏನಾಗುತ್ತಿತ್ತು. ಭಾರತ ಒಡೆದ ಗಾಜಿನಂತೆ ಆಗುತ್ತಿತ್ತು ಎಂದು ಪ್ಯಾಟಿ ಅವರು ಭಾರತದ ಸಮಗ್ರತೆಗೆ ಡಾ. ಅಂಬೇಡ್ಕರ್ ಅವರು ಹೊಂದಿದ್ದ ದಿಟ್ಟ ನಿಲುವಿನ ಕುರಿತು ನಿದರ್ಶನವೊಂದನ್ನು ನೀಡಿದ್ದಾರೆ.

ಅಮರೇಶ ಪಾಟೀಲ ಕಂದಗೋಳಗೆ ಸನ್ಮಾನ

ಡಾ. ಅಂಬೇಡ್ಕರ್ ಅವರ ದೂರದೃಷ್ಟಿ, ಅವರ ವಿಚಾರಶೀಲತೆ ಅರ್ಥ ಮಾಡಿಕೊಂಡರೆ ಹೇಗೆ? “ಸಾಮ್ರಾಟ್ ಅಶೋಕ್”ನು ಅಖಂಡ ಭಾರತದ ಕನಸು ಕಂಡಿದ್ದರು. ಅದೇ ಕನಸನ್ನೂ ಡಾ. ಅಂಬೇಡ್ಕರ್ ಅವರೂ ಕಂಡಿದ್ದರು. ಅದೇ ರೀತಿ ಅವರು ಯಾವುದೇ ಪರಕೀಯ ಧರ್ಮಕ್ಕೆ ಮತಾಂತರ ಹೊಂದದೇ ಬೌದ್ಧ ಧರ್ಮ ಸ್ವೀಕರಿಸಿ ಭಾರತದ ಒಕ್ಕೂಟದಲ್ಲಿ ಇದ್ದು ಸದೃಢ ಭಾರತ, ಸುಂದರ ಭಾರತ, ಅಭಿವೃದ್ಧಿಶೀಲ ಭಾರತದ ಕನಸು ನನಸಾಗಲು ಭಾರತಕ್ಕೆ ಸಂವಿಧಾನ ರಚಿಸಿ ವಿಶ್ವದಲ್ಲಿಯೇ ಭಾರತವು ಮಾದರಿಯ ದೇಶವೆಂದು ಎಲ್ಲರಲ್ಲೂ ಆತ್ಮಾಭಿಮಾನ ಹುಟ್ಟಿಸಿ, ಮತ್ತೆ ಭಾರತವು ಅಖಂಡ ಭಾರತ ದೇಶವಾಗಿ ವಿಶ್ವಕ್ಕೆ ಮಾದರಿಯಾಗುವುದು ಎಂದು ಅಭಿಪ್ರಾಯಪಟ್ಟಿದ್ದರು ಎಂದು ಅವರು ಬಣ್ಣಿಸಿದ್ದಾರೆ.

ಭಾರತ ದೇಶವು ಸುಭದ್ರವಾಗಿರಬೇಕಾದರೆ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಭಾರತದ ಸಂವಿಧಾನ ರಚಿಸಬೇಕೆಂದು ಮಹಾತ್ಮಾ ಗಾಂಧೀಜಿಯವರು ಪ್ರಸ್ತಾಪಿಸಿದ್ದರು. ಅದರಂತೆ ವೀರ ಸಾವರಕರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಹೇಳಿದ ಮಾತು ಸತ್ಯವಾಗುತ್ತದೆ. “ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಬುದ್ಧ ಧರ್ಮಕ್ಕೆ ಅಪ್ಪಿಕೊಂಡಿದ್ದರಿಂದ ನಮಗೆ ಸಂತೋಷವಾದಷ್ಟು ಯಾರಿಗೂ ಸಂತೋಷವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂಗ್ಲೆಂಡ್- ಅಮೇರಿಕಾದಂತಹ ಬೇರೆ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದವರು.

ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಡೆಗಣನೆ: SFI  ರಾಜ್ಯ ಸಮಿತಿ ಟೀಕೆ

ಅಷ್ಟೇ ಅಲ್ಲ ಅಖಂಡ ಭಾರತದ ಬಗ್ಗೆ ತಿಳಿದವರು, ವಿಚಾರಶೀಲರು, ಬೇರೆ ದೇಶದ ಮತ ಧರ್ಮಗಳು ಅವರಿಗೆ ಆಕರ್ಷಣೆ ಮಾಡಿದರೂ ಯಾರ ಮಾತಿಗೆ ಕಿವಿಗೊಡದೇ ಅವರು ಬುದ್ಧ ಧರ್ಮ ಸ್ವೀಕರಿಸಿದ್ದಕ್ಕೆ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ವೀರ ಸಾವರಕರ್ ಅವರು ಹೇಳಿದಂತೆ ಡಾ. ಎಸ್. ರಾಧಾಕೃಷ್ಣನ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ದೇಶ ಭಕ್ತ ಎಂದಿದ್ದರು ಎಂದು ಪ್ಯಾಟಿ ಅವರು ಉಲ್ಲೇಖಿಸಿದ್ದಾರೆ.

ಡಾ. ಅಂಬೇಡ್ಕರ್ ಅವರ ಬಗ್ಗೆ ಗಮನಸಿದರೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದಂದು ವಿಶ್ವಸಂಸ್ಥೆಯು ಏಪ್ರಿಲ್ ೧೪ರಂದು ವಿಶ್ವ ಜ್ಞಾನ ದಿವಸವನ್ನಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದು ಅವರು ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here