ಸೃಷ್ಟಿಯ ಜೀವಿಗಳಲ್ಲಿ ಪರಸ್ಪರ ಸಮತೋಲನದ ಸಂಬಂಧವಿರುವ ಬುದ್ಧಿವಂತ ಪ್ರಾಣಿ ಮನುಷ್ಯ. ತನ್ನ ಬದುಕಿನಲ್ಲಿಯೆ ಇನ್ನು ಅಸಮತೋಲನವನ್ನು ಇಟ್ಟುಕೊಂಡಿದ್ದಾನೆ.
ಹೆಣ್ಣು-ಗಂಡು ಎಂದು ತಾರತಮ್ಯ ಮಾಡುತ್ತಿದ್ದಾನೆ, ಅಸಮಾನತೆ ಅತಿರೇಕವಾಗಿ ಪ್ರಕೃತಿಯ ಅಸಮತೋಲನದಿಂದ ಇಂಥ ಅನಾಹುತವಾಗು ತ್ತಿದೇ. ಅದಕ್ಕಿಂತಲೂ ಹೆಚ್ಚಿನದಾದ ಅನಾಹುತಗಳು ಮನುಷ್ಯನ ಬದುಕಿನಲ್ಲಿ ಉಂಟಾ ಗುತ್ತಿರುವದು ನಾವೆಲ್ಲ ನೋಡುತ್ತಿದ್ದೇವೆ.
ಹೆಣ್ಣು ಮುನಿದರೆ ಮಾರಿ ಎನ್ನುವದು ಎಲ್ಲರಿಗೂ ತಿಳಿದ ವಿಷಯವೇ: ಹೆಣ್ಣು ಒಂದು ಜೀವ ತನ್ನಂತೆಯೇ ಉಸಿರಾಡು ತ್ತಾಳೆ , ಊಟ ಮಾಡುತ್ತಾರೆ, ಮಲಗುತ್ತಾರೆ , ಎಂಬ ಪರಿಜ್ಞಾನ ಪುರುಷನು ಕಳೆದುಕೊಂಡಿದ್ದಾನೆ ಎಂದು ಅನಿಸುತ್ತದೆ. ಹೆಣ್ಣನ್ನು ಅಸ್ಪೃಶ್ಯರಂತೆ ಉಪಚರಿಸುತ್ತಾನೆ, ಎಷ್ಟು ಅಸಹ್ಯವಾಗಿ ಹೆಣ್ಣನ್ನು ಕೀಳಿರಿಮೆ ದೃಷ್ಟಿಯಿಂದ ನೋಡುತ್ತಾನೆ , ಒಬ್ಬ ಗುರು ಮಹಿಳೆ ಮಂತ್ರಗಳನ್ನು ಉಚ್ಚರಿಸಬಾರದು ಎಂದು ಹೇಳಿಕೆ ನೀಡುವವರಿಗೆ ಮಹಿಳೆಯ ಸುತ್ತ ಇಂತಹ ಕೀಳಿರಿಮೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ.
ತ್ರಿವಿಧದಾಸೋಹಿ ಶ್ರೀ ಮಹಾಂತಪ್ಪಗಳವರು
*ಅಸಮಾನತೆಯನ್ನು ಬಿತ್ತುವ ಈ ಕ್ರಮವನ್ನು ಸಮಾಜ ಮುನಿಸ ಬೇಕೆ*??
ತಾನು ಜನಿಸಿರುವುದು ಒಂದು ಹೆಣ್ಣಿನಿಂದಲೇ ಎಂಬ ಕನಿಷ್ಠ ಅರಿವು ಈ ಪುರುಷ ಮಹಾರಥಿ ಗಳಿಗೆ ಇಲ್ಲವೆಂದಮೇಲೆ ಸಾಮಾನ್ಯರ ಪಾಡೇನು ??ಇದಕ್ಕೆಲ್ಲ ಕಾರಣ ಕೀಳರಿಮೆ. ಪುರುಷಪ್ರಧಾನ ವ್ಯವಸ್ಥೆಯ ಸಮಾಜ ತನ್ನ ಸ್ವಾರ್ಥಕ್ಕೆ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾಡಿಕೊಂಡಿರುವುದು ಕಂಡಿದ್ದೇವೆ.
ಸ್ತ್ರೀ ಶಕ್ತಿಯಿಂದಲೇ ನಮ್ಮ ಸಂಸ್ಥಾನಕ್ಕೆ ಯಶಸ್ಸು : ಡಾ ದಾಕ್ಷಾಯಿಣಿ ಅವ್ವಾಜಿ
ಇಂಥದನ್ನು ರಕ್ಷಿಸಿಕೊಂಡು ಬರುತ್ತಿರುವ ಕೊಳಕು ಮನಸ್ಸುಗಳನ್ನು ಕಾಣುತ್ತಿದ್ದೇವೆ.
ಹೆಣ್ಣಿಗೆ ಮಾತ್ರ ಧರ್ಮಪತ್ನಿ ಎಂಬ ಪಟ್ಟಕಟ್ಟಿ ನಾಲ್ಕು ಗೋಡೆಗಳ ನಡುವೆ ಕೊಡಿಸಿ ಹೊರಗೆ ಮರೆಯುವ ಗಂಡಸುತನ ಪತಿಯಾಗಲು ಎಂದಾದರೂ ಬಯಸಿದ್ದಾನೆಯೆ ???ಹೆಣ್ಣು- ಹುಣ್ಣು ಹೊಸ್ತಿಲು ದಾಟಬಾರದು ಹೇಳಿದ್ದನ್ನು ಕೇಳಿಕೊಂಡು ಅಡುಗೆಮನೆಯಲ್ಲಿ ಬಿದ್ದಿರಬೇಕು. ವಿದ್ಯಾವಂತರಾದರೆ ಗುಲಾಮಳಂತೆ ಇರಬೇಕು, ಹೀಗೆ ಹತ್ತು ಹಲವು ಅವಮಾನ ಲಕ್ಷಣಗಳನ್ನು ವಿಧಿಸುವ ಮಡಿವಂತಿಕೆಯನ್ನು ಗಲ್ಲುಗಂಬಕೆ ಒಡ್ಡಬೇಕು.
ಜಗತ್ತಿನ ಇತರ ಕೆಲವು ಧರ್ಮಗಳು ಸ್ತ್ರೀಯರನ್ನು ಸೆರೆಮನೆಯ ಸರಳುಗಳ ಹಿಂದೆ ಇಡುವಂತೆ ನೋಡಿಕೊಂಡಿವೆ. ಈ ಕಾಲದಲ್ಲೂ ಅವಳು ಪರದೆಯ ಹಿಂದೆ ಬದುಕಬೇಕಾದ ದಾರುಣ ಸ್ಥಿತಿ ಇದೆ. ಪರದೇಶಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿದ್ದರೂ ಧಾರ್ಮಿಕ ಸ್ವಾತಂತ್ರ್ಯ ಮಾತ್ರ ಕೊಟ್ಟಿಲ್ಲ. ಯಾವ ಕಾರಣಕ್ಕಾಗಿ ಮಹಿಳೆಯರನ್ನ ಹೀಗೆ ಧರ್ಮದಿಂದ ದೂರ ಇಡಲಾಗಿದೆ??
ಏಪ್ರಿಲ್ ೧೦ರ ವರೆಗೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಿ: ಶಾಸಕ ರಾಜುಗೌಡ
ಮಹಿಳೆಯರ ಮೇಲಿನ ಇಂಥ ಕೀಳು ಭಾವನೆಯನ್ನು ತೊಲಗಿಸುವ ಪ್ರಯತ್ನಗಳು ನಡೆದಿವೆ ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್, ದಯಾನಂದ್ ಸರಸ್ವತಿ, ಸ್ವಾಮಿ ವಿವೇಕಾನಂದ ಜ್ಯೋತಿಬಾ ಫುಲೆ, ಮಹಾತ್ಮ ಗಾಂಧಿ ,ಮುಂತಾದ ಮಹನೀಯರೂ ಬಸವಣ್ಣನವರು, ಬಸವಾದಿ ಶರಣರು ಮೊಟ್ಟಮೊದಲು ಸ್ತ್ರೀ ಸಮಾನತೆಗಾಗಿ ಬಹಳಷ್ಟು ಹೋರಾಟ ಮಾಡಿದ್ದಾರೆ.
ಈ ವಿಷಯಗಳಲ್ಲಿ ಜನಗಳಿಗೆ ಸಾಕಷ್ಟು ವಿವೇಕವನ್ನು ಹೇಳಿ ಅಲ್ಲಲ್ಲಿ ಜಾಗೃತಿಯನ್ನುಂಟು ಮಾಡಿದ್ದಾರೆ. ಆದರೆ ಅವರೆಲ್ಲರ ಹೋರಾಟ ಅವರವರ ಕಾಲಕ್ಕೆ ಮತ್ತು ನಿಶ್ಚಿತ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.
ಸ್ತ್ರೀ ಸಮಾನತೆಯ ಹೋರಾಟ ದೇಶಾದ್ಯಂತ ಒಂದು ದೊಡ್ಡ ಸಮಸ್ಯೆಯಾಗಿ ಅಥವಾ ಪ್ರಕರಣವಾಗಿ ಮೂಡಿಬರಲೇ ಇಲ್ಲ. ಈಗ ಎಲ್ಲಾ ಕಡೆ ಮಹಿಳಾ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಸಮಾಧಾನದ ಸಂಗತಿ.
ನೂರಾರು ಕೂಲಿಕಾರರಿಂದ ತಾಲೂಕು ಪಂಚಾಯತಿಗೆ ಮುತ್ತಿಗೆ
ಆಗಿಹೋದ ಎಲ್ಲಾ ಸಮಾಜ ಸುಧಾರಕ ರಿಂದ ಹೆಚ್ಚು ಪರಿಣಾಮಕಾರಿಯಾಗಿ ಆಂದೋಲನವನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿದ್ದರೆ 12ನೇ ಶತಮಾನದ ಶರಣರು. ವಿಶೇಷವಾಗಿ ಬಸವಣ್ಣನವರು ಸ್ತ್ರೀ ಸಮಾನತೆ ಯನ್ನು ತಮ್ಮ ಚಳುವಳಿಯ ಮುಖ್ಯ ಉದ್ದೇಶವಾಗಿಟ್ಟುಕೊಂಡು ಆಕೆಗೆ ಸಮಾನ ಸ್ಥಾನಮಾನ ಸವಲತ್ತುಗಳನ್ನು ಕಲ್ಪಿಸಿ ಕೊಡುವುದರ ಜೊತೆಗೆ ಅತ್ಯಂತ ಸೊಗಸಾದ ಗಂಭೀರವಾದ ವಚನಗಳನ್ನು ರಚಿಸುವ ಮಟ್ಟಕ್ಕೆ ಬೆಳೆಯಿಸಿ ವಚನಕಾರ್ತಿಯರ ಸಮೂಹವನ್ನೇ ಸೃಷ್ಟಿಸಿದರು.
ಅತ್ಯಂತ ಕೆಳ ವರ್ಗದ ಮಹಿಳೆ ಕೂಡ ಶರಣೆಯಾಗಿ ವಚನ ರಚಿಸಿದನ್ನು ನಾವು ಕಾಣುತ್ತೇವೆ.
ಬೊಂತಾದೇವಿ .ಮುಕ್ತಾಯಕ್ಕ ಲಕ್ಕಮ್ಮ, ಅಕ್ಕಮಹಾದೇವಿ ರೇವಮ್ಮ ,ಸಂಕವ್ವ ,ಇನ್ನು ಹಲವಾರು ಶರಣರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು .
ಬಜೆಟ್ ನಲ್ಲಿ ರಾಯಚೂರು ವಿವಿಗೆ ಕಡೆಗಣನರ: SFI ಆಕ್ರೋಶ
ಅಷ್ಟೇ ಅಲ್ಲ ತಮಗೆ ಸರಿಸಮಾನವಾದ ಸ್ಥಾನ ಕಲ್ಪಿಸಿ ಆಲೋಚಿಸುವುದನ್ನು ಅನುಭವಗಳನ್ನು ಅಭಿವ್ಯಕ್ತಿಸುವುದಕ್ಕೆ ಕಲಿಸಿದಂತಹ ಕೆಲ ಸಂದರ್ಭಗಳಲ್ಲಿ ಪ್ರಶ್ನಿಸುವ ಮಟ್ಟಕ್ಕೆ ಗಂಗಾಂಬಿಕೆ ಅಕ್ಕಮಹಾದೇವಿ ಮುಕ್ತಾಯಕ್ಕ ಮಹಾದೇವಿಯಕ್ಕ ಮುಂತಾದವರು ಬೆಳೆಯದಿದ್ದರು .ಎಂದರೆ ಬಸವಣ್ಣನವರ ಚಳುವಳಿಯ ಸ್ವರೂಪ ವ್ಯಾಪ್ತಿ ಎಂಥದ್ದು ಎಂಬುದು ಅರ್ಥವಾಗುತ್ತದೆ.
ಜಗತ್ತಿನ ಮಹಾಪುರುಷರ ಹಿಂದಿರುವುದು ಸ್ತ್ರೀಶಕ್ತಿ ಎಂಬುದನ್ನು ಅಲ್ಲಗಳೆಯುವಂತಿಲ್ಲ ಸಾಮಾನ್ಯ ಕುಟುಂಬದ ಶಿವಾಜಿಛತ್ರಪತಿ ಆಗಿದ್ದು ಆತನ ತಾಯಿ ಜೀಜಾಬಾಯಿ ಅವರಿಂದ ಮಹಾತ್ಮ ಗಾಂಧೀಜಿ ಯಾಗಿದ್ದು ಕಸ್ತೂರಿ ಬಾ ಅವರಿಂದ. ಪರಮಹಂಸ ಮತ್ತು ವಿವೇಕಾನಂದ ಹಿಂದೆ ಮಾತೆ ಶಾರದಾದೇವಿ. ಬಸವಣ್ಣನವರ ಹಿಂದೆ ಗಂಗಾಂಬಿಕೆ ಮತ್ತು ನೀಲಾಂಬಿಕೆಯವರು . ಇಂತಹ ನೂರಾರು ಉದಾಹರಣೆಗಳು ನಾವು ಕಾಣಬಹುದು.
ಹೀಗೆ ಸಮಾನತೆಯನ್ನು ದೊರಕಿಸಿಕೊಡುವಲ್ಲಿ ಒಂದು ಹೆಣ್ಣು ಹೆಣ್ಣಿಗೆ ವೈರಿ ಎನ್ನುವುದನ್ನು ಬಿಟ್ಟು ಒಬ್ಬರ ಯೆಳಿಗೆಗಾಗಿ ಮತ್ತೊಬ್ಬರು ಶ್ರಮಿಸಬೇಕಾಗಿದೆ.
*ಹೆಣ್ಣು ಸಮಾಜದ ಕಣ್ಣು ಇಡೀ ಜಗತ್ತನ್ನು ತನ್ನ ತೋಳಿನಿಂದ ತೂಗಿ ಜೋಗುಳ ಹಾಡಿ ತೃಪ್ತಿಗೊಳಿಸುವನತವಳು.
ಮಗುವಿಗೆ ಹಾಲುಣಿಸುವುದು ಅಷ್ಟೇ ಅಲ್ಲ, ಮಮಕಾರವನ್ನು ಮತ್ತು ಸಂಸ್ಕಾರವನ್ನು ನೀಡಿ ತನ್ನ ಅಂತಃಕರಣವನ್ನು ಧಾರೆಯೆರೆಯುವವಳು. ಸುಂದರ ಹೆಣ್ಣಿನ ಕರುಣೆಯ ಕಾವೇರಿ ಪ್ರತಿಯೊಬ್ಬ ಪುರುಷ ಮೀಯಬೇಕು.
ಆಗ ಪುರುಷ ನಿಜ ಮನುಷ್ಯನಾಗಲು ಪುರುಷ ಅರ್ಹನಾಗುತ್ತಾನೆ.
ಮಹಿಳೆಯರ ಆರೋಗ್ಯವೇ ದೇಶದ ಭಾಗ್ಯ: ಡಾ. ರಾಜೇಶ್ರೀ
ಸದ್ಯ ಮಹಿಳೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ, ಒಬ್ಬ ಮಹಿಳೆ ಉದ್ಯೋಗಿಯಾಗಿದ್ದಾರೆ ರಾಜಕಾರಣಿಯಾಗಿದ್ದಾರೆ ಧರ್ಮಗುರುವಿನ ಸ್ಥಾನದಲ್ಲಿದ್ದಾಳೆ ಇನ್ನೂ ಬಹುಭಾಗ ಹಳ್ಳಿಗಳಲ್ಲಿ ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಸಮಯವಾಗಿದೆ ಅವಳನ್ನು ನಿವಾರಣೆಯಾಗಬೇಕಾದರೆ ಮಹಿಳಾ ಸಂಘಟನೆಗಳು ಹೆಚ್ಚು ಜಾಗೃತವಾಗಬೇಕಾಗಿದೆ.
ಯಾವುದೇ ಮಹಿಳೆ ಸಂಘಟನೆ ಬಲಗೊಳ್ಳಲು ಮಹಿಳಾ ಮೊದಲು ಶಿಕ್ಷಣ ಪಡೆಯಬೇಕು ಸಂಘಟನೆ ಶಿಕ್ಷಣದಿಂದ ಮಾತ್ರ ಸುಧಾರಣೆಯಾಗಳು ಸಾಧ್ಯ. ದುಷ್ಟಶಕ್ತಿಗಳನ್ನು ನಿಯಂತ್ರಿಸಲು ಕಿತ್ತೂರು ಚೆನ್ನಮ್ಮ ಜಾನ್ಸಿರಾಣಿ ಅವರಂತಗಬೇಕು . ಪರಿಸರಕ್ಕಾಗಿ ತನ್ನ ಬದುಕನ್ನು ಅರ್ಪಿಸಿಕೊಂಡಿರುವ ಮೇಧಾ ಪಾಟ್ಕರ್ ಮತ್ತು ಸಾವಿರಾರು ನಂದ ಜೀವಿಗಳನ್ನು ಸಂತೈಸಿ ಶುಶ್ರೂಷ ಸಿದ ತಾಯಿ ಮದರ್ ತೆರೇಸಾ ವಂತಾಗಬೇಕು. ಹೆಣ್ಣು ಏನೆಲ್ಲಾ ಆಗಿದ್ದಾಳೆ ಎಲ್ಲರೂ ಈಗ ಅವರಂತೆ ಆಗುವ ಅನಿವಾರ್ಯತೆ ಇದೆ. ಆಗ ಮಾತ್ರ ಆದರ್ಶ ಸಮಾಜ ಶರಣರ ಕಂಡ ಕನಸು ನನಸಾದಿತು.
– ಮೇನಕಾ ಪಾಟೀಲ್.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…