ಹೈದರಾಬಾದ್ ಕರ್ನಾಟಕ

ಆಳಂದನಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಕಾಲ ಕೂಡಿ ಬರುವುದು ಯಾವಾಗ?

  • ಡಾ. ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ರಾಜ್ಯದಲ್ಲಿ ದಲಿತ ಸಂಘರ್ಷ ಹುಟ್ಟಿದ ಮತ್ತು ಆ ಮೂಲಕ ಇಡೀ ಸಮಾಜಕ್ಕೆ ಅಂಬೇಡ್ಕರ್ ಕನಸಿನ‌ ಸಾಮಾಜಿಕ ನ್ಯಾಯ, ವೈಚಾರಿಕ ಪ್ರಜ್ಞೆ, ಸಾಮಾಜಿಕ ಜಾಗೃತಿ ಮೂಡಿಸಿದ ದಲಿತ ಸಂಘರ್ಷ ಸಮಿತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ.

ರಾಜ್ಯದಲ್ಲಿ ೧೯೭೪ರಲ್ಲಿ ಭದ್ರಾವತಿಯಲ್ಲಿ, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಿಂದ ೧೯೮೨ರಿಂದ ಆರಂಭವಾದ ಈ ಸಂಘಟನೆ ಅಂದು ಇಡೀ ರಾಜ್ಯದಲ್ಲೇ ಒಂದು ಹೊಸ ಸಂಚಲನ ಮೂಡಿಸಿದ್ದಂತೂ ನಿಜ! ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶೋತ್ತರಗಳನ್ನು ಈಡೇರಿಸಲು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ರಾಜ್ಯಾದ್ಯಂತ ಸಾಮೂಹಿಕ ಚಳವಳಿ ಹುಟ್ಟಿಕೊಂಡದ್ದು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಿದ ಡಿಎಸ್ ಎಸ್ ಸಂಘಟನೆ ಒಂದು ಹೊಸ ಇತಿಹಾಸ ಕೂಡ ಸೃಷ್ಟಿಸಿರುವುದನ್ನು ನಾವು ಬಲ್ಲೆವು.

ಡಾ: ಈಶ್ವರಯ್ಯ ಮಠ ಜೀವನ ಸಾಧನೆ ನೆನಪೇ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ

ಆದರೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಈವರೆಗೆ ಸ್ಥಾಪನೆಯಾಗಿಲ್ಲ ಎಂಬುದು ಅತ್ಯಂತ ಖೇದದ ವಿಷಯವಾಗಿದೆ. ಡಿಎಸ್ ಎಸ್ ಇಲ್ಲಿಂದಲೇ ಉಗಮವಾಗಿದ್ದರೂ ಅದರ ನಿರ್ಮಾತೃ ಗಳು ಸಹ ಇಲ್ಲಿಯವರೇ ಆಗಿದ್ದರೂ ಈವರೆಗೆ ಜ್ಞಾನದ ಸಂಕೇತವಾಗಿರುವ ಡಾ. ಬಾಬಾ ಸಾಹೇಬರ ಪುತ್ಥಳಿ ಅನಾವರಣಗೊಂಡಿರುವುದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.

ಡಿ.ಜಿ.‌ಸಾಗರ, ಅರ್ಜುನ ಭದ್ರೆ, ಬಸಣ್ಣ ಸಿಂಗೆ,ಮಹಾದೇವ ಧನ್ನಿ, ರವಿ ಮದನಕರ್, ಹಣಮಂತ ಯಳಸಂಗಿ ಮುಂತಾದವರು ಈಗಾಗಲೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕರಿದ್ದರೂ ಈ ಮಹತ್ಕಾರ್ಯ ನೆರವೇರಿಲ್ಲ ಎಂಬುದು ಸರ್ವವಿಧಿತವಾಗಿದೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಮೀಟಿಂಗ್ ಗಳು ಆಗಿದ್ದರೂ ಯಾವುದೇ ಫಲ ನೀಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಹಾಗೆಂದ ಮಾತ್ರಕ್ಕೆ ಇವರ್ಯಾರೂ ಈ ದಿಸೆಯಲ್ಲಿ ಪ್ರಯತ್ನ ಮಾಡಿಲ್ಲ ಎಂದು ಹೇಳಲಿಕ್ಕಾಗದು.

ನೂರಾರು ಕೂಲಿಕಾರರಿಂದ ತಾಲೂಕು ಪಂಚಾಯತಿಗೆ ಮುತ್ತಿಗೆ

ಅದೇಕೋ ಹಲವಾರು ಕಾರಣಗಳಿಂದ ಮುಂದೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಭೆ ಸೇರಿ ಮೂರ್ತಿ ಸ್ಥಾಪನೆ ಕಾರ್ಯಕ್ಕೆ ಮಹೂರ್ತ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ಡಾ. ಬಾಬಾ ಸಾಹೇಬರ ಮೂರ್ತಿ ನಿರ್ಮಾಣವಾಗಿ ವರ್ಷಗಳೇ ಉರುಳಿದ್ದರೂ, ಅದನ್ನು ಸ್ಥಾಪಿಸುವ ಜಾಗಕ್ಕಾಗಿ ಈ ಕಾರ್ಯ ಮುಂದೂಡತ್ತಲೇ ಬರಲಾಗಿದೆ ಎನ್ನಲಾಗಿದೆ.

ಮುಂದಿನ ತಿಂಗಳು (ಏ. ೧೪) ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಇರುವುದರಿಂದ ಅಷ್ಟರಲ್ಲೇನಾದರೂ ಈ ಕಾರ್ಯ ನೆರವೇರಬಹುದೇ ಎಂಬುದು ಅನೇಕರ ಆಶಯವಾಗಿದೆ. ಈ ದಿಸೆಯಲ್ಲಿ ದಲಿತ ಮುಖಂಡರು, ಪ್ರಗತಿಪರರು ಸೇರಿ ಈ ಕಾರ್ಯ ಆಗು ಮಾಡಬೇಕಾಗಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago