ಚಿಂಚೋಳಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯ ಚಿಂಚೋಳಿ ಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಚಿಂಚೋಳಿಯ ಪತಂಜಲಿ ಯೋಗ ಸಂಸ್ಥೆಯ ತಾಲೂಕಾ ಮುಖ್ಯಸ್ಥರು ಶ್ರೀನಿವಾಸ ಪಾಟೀಲರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಯೋಗ ಸಾಧನೆಯ ಮುಖ್ಯ ಧ್ಯೇಯ ಉದ್ದೇಶ ಮಹತ್ವ ಕುರಿತು ಮಾತನಾಡಿದರು. ನಂತರ ಯೋಗ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರು ಡಾ ಶ್ರೀಶೈಲ ನಾಗರಾಳ ಅವರು ವಹಿಸಿದ್ದರು.
ಯೋಗದ ಕುರಿತು ಮಾತನಾಡಿದರುಮ ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರು, ಗ್ರಾಮೀಣ ಅಭಿವೃದ್ದಿ ವಿಭಾಗದ ಮುಖ್ಯಸ್ಥರು ಡಾ ಸಿ. ವ್ಹಿ. ಕಲಬುರ್ಗಿ ಐಕ್ಯೂಎಸಿ ಸಂಯೋಜಕರು ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ ಮಾಣಿಕಮ್ಮ ಸುಲ್ತಾನಪುರೆ, ಕನ್ನಡ ವಿಭಾಗದ ಅಧ್ಯಾಪಕರು ಶ್ರೀ ಕಾಶಿನಾಥ ಹುಣಜೆ ,ಶ್ರೀ ಬಕ್ಕ ಪ್ರಭು,ಶ್ರೀಶರತ್ ,ಶ್ರೀ ಭೀಮರೆಡ್ಡಿ ಕ್ರೀಡಾ ನಿರ್ದೇಶಕರು, ಶ್ರೀಮತಿ ತೈಮಿನಾಬೇಗಂ ಇತರರು ಉಪಸ್ಥಿತ ರಿದ್ದರು. ಶ್ರೀ ಕಾಶಿನಾಥ ಹುಣಜೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಡಾ ಮಾಣಿಕಮ್ಮ ಸುಲ್ತಾನಪುರೆ ಅವರು ವಂದಿಸಿದರು ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು ಎಂದು ಪ್ರಾಚಾರ್ಯರು ಪ್ರಕಟಿಸಿರುತ್ತಾರೆ.