ಕಲಬುರಗಿ: ಜನೆವರಿ 30 ರಂದು ಇಲ್ಲಿನ ಲಕ್ಷ್ಮೀ ಲೇಔಟ್ ಕೈಲಾಸ್ ನಗರದಲ್ಲಿ ಒಳಚಂಡಿಯಲ್ಲಿ ಇಳಿದು ಇಬ್ಬರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಲಬುರಗಿ ಜಿಲ್ಲಾಧಿಕಾರಿಗೆ ನೋಟಿ ನೀಡಿದೆ.
ಘಟನೆಗಳು ತಡೆಗಟ್ಟುವ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಗೈಗೊಳುವ ಬಗ್ಗೆ ಆಯೋಗ ಸೂಚಿಸಿ, ಪ್ರಕಟಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಹೋರಾಟಗಾರರಾದ ಎಂ.ಡಿ ರಿಯಾಜ್ ಖತೀಬ್ ಆಯೋಗಕ್ಕೆ ಸಲ್ಲಿಸಿರುವ ದೂರಿನ ಪ್ರತಿ ಸಹ ಡಿಸಿಗೆ ರವಾನಿಸಿದೆ.
ಮ್ಯಾನವಲ್ ಸ್ಕ್ಯಾನ್ವೆಜಿಂಗ್ ದೇಶದಲ್ಲಿ ನ್ಯಾಯಲಯ ನಿಷೇಧ ಹೇರಿದ್ದರೂ ಸಹ ಕದ್ದುಮುಚ್ಚಿ ಮಾಡಲಾಗುತ್ತಿದೆ. ಇದರ ಫಲವಾಗಿ ಜಿಲ್ಲೆಯಲ್ಲಿ ಅಮಾಯಕ ಬಡ ಕುಟುಂಬದ ಇಬ್ಬರು ಸದಸ್ಯರು ಮೃತಟ್ಟಿದ್ದಾರೆ. ಕಾನೂನು ಕಟ್ಟುನಿಟ್ಟಾಗಿ ಜಾರಿ ಮಾಡಿ ತಡೆದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. – ಎಂ. ಡಿ ರಿಯಾಜ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರರ ಕಲಬುರಗಿ