ಶಹಾಬಾದ: ಕನ್ನಡಿಗರ ಸ್ವಾಭಿಮಾನದ ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಕೆಲ ವ್ಯಕ್ತಿಗಳಿಗೆ, ಗುಂಪುಗಳಿಗೆ, ಜಾತಿಗೆ ಮತ್ತು ಒಂದು ಪ್ರದೇಶಕ್ಕೆ ಸೀಮಿತವಾಗಬಾರದು. ಅದು ವಿಶ್ವವ್ಯಾಪಿಯಾಗಿ ಬೆಳಗಬೇಕು ಎಂದು ಕನ್ನಡ ಸಾಹಿತ್ಯ ಪರಿ?ತ್ತು ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿ?ತ್ತು ರಾಜ್ಯಾಧ್ಯಕ್ಷ ಚುನಾವಣೆಗೆ ನಾನೊಬ್ಬ ಸೇವಾ ಆಕಾಂಕ್ಷಿ ಅ?. ದೂರದರ್ಶನ ವಾಹಿನಿಯ ಮಹಾ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದ ನನಗೆ ಅಧಿಕಾರದ ಲಾಲಸೆ ಇಲ್ಲ. ಪುನರ್ವಸತಿಗಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಜನರಿಂದ ದೂರಾಗಿದ್ದ ದೂರದರ್ಶನವನ್ನು ಹೇಗೆ ಸಮೀಪದರ್ಶನವಾಗಿಸಿರಿಸಿದ್ದೆನೋ ಅದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿ?ತ್ತನ್ನು ಜನ ಸಾಮಾನ್ಯರ ಬಳಿ ಕೊಂಡೊಯ್ಯುತ್ತೇನೆ. ಮೇ ೯ ರಂದು ನಡೆಯಲಿರುವ ರಾಜ್ಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಮ್ಮ ವಿಶ್ವಾಸಭರಿತ ಮತ ನೀಡಬೇಕೆಂದು ಪರಿ?ತ್ತಿನ ಮತದಾರರಲ್ಲಿ ವಿನಂತಿಸಿಕೊಂಡರು.
ಸರಕಾರದ ಯೋಜನೆಗಳ ಅಡಿ ಅರ್ಜಿ ಸಲ್ಲಿಸಿದವರಿಗೆ ಸಾಲ ನೀಡಿ ಇಒ ಅಂಬ್ರೇಶ ಸೂಚನೆ
ನಿಮ್ಮೆಲ್ಲರ ಆಶೀರ್ವಾದದಿಂದ ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷನಾದರೆ ವಿಕಲಚೇತನರಿಗೆ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸೈನಿಕರಿಗೆ ಉಚಿತ ಸದಸ್ಯತ್ವ ಒದಗಿಸುತ್ತೇನೆ. ಕನ್ನಡಕ್ಕಾಗಿ ಹಾತೊರೆಯುವವರಿಗೆ ೨೫೦ ರೂ. ಶುಲ್ಕದಲ್ಲಿ ಸದಸ್ಯತ್ವ ನೀಡುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ನಮ್ಮೆಲ್ಲರ ಅನ್ನದ ಭಾ?ಯಾಗಬೇಕು. ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಈ ನೆಲದಲ್ಲಿ ನಿರಂತರವಾಗಿ ಕನ್ನಡದ ಕಹಳೆ ಮೊಳಗಬೇಕು. ಕನ್ನಡ ಸಾಹಿತ್ಯ ಪರಿ?ತ್ತು ಸರ್ಕಾರದ ಅಂಗವಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಸ್ವತ್ತು. ಕನ್ನಡಿಗರೆಲ್ಲರ ಸಹಕಾರದಿಂದ ದೂರದರ್ಶನವನ್ನು ಸ್ವಾಯತ್ತ ಸಂಸ್ಥೆಯಾಗಿ ಬೆಳೆಸಿದಂತೆ ಕನ್ನಡ ಸಾಹಿತ್ಯ ಪರಿ?ತ್ತನ್ನು ಕೂಡ ಅದೇರೀತಿ ಬೆಳೆಸುವ ಉದ್ದೇಶವಿದೆ. ಒಟ್ಟಿನಲ್ಲಿ ಪರಿ?ತ್ತಿನಲ್ಲಿ ಆಮೂಲಾಗ್ರ ಬದಲಾವಣೆ ತರುವ ಯೋಚನೆ ಇದೆ. ಪರಿ?ತ್ತು ಯಾರ ಅವಲಂಬನೆ ಇಲ್ಲದೇ ತನ್ನ ಕಾಲಮೇಲೆ ತಾನು ನಿಲ್ಲಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸುತ್ತೇನೆ. ಕನ್ನಡಕ್ಕಾಗಿ ಕ್ಷಣ ಕ್ಷಣವೂ ದುಡಿಯುವ ಇರಾದೆ ಇದೆ ಎಂದರು.
ಹಿಂಸೆ ಯಾವುದಕ್ಕೂ ಪರಿಹಾರವಲ್ಲ – ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳನ್ನು ಸಂಪರ್ಕಿಸಿ
ಈ ಸಂದರ್ಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಮಾತನಾಡಿ, ನಾಡೋಜ ಡಾ. ಮಹೇಶ ಜೋಶಿ ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ರಾಜಕೀಯ ಸಿದ್ಧಾಂತಗಳಿಂದ ದೂರ ಇದ್ದು ಯಾರ ಪರವೋ ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ತಮ್ಮ ಸೇವೆಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ ದೂರದರ್ಶನ ಇದ್ದಿದ್ದನ್ನು ಸಮೀಪ ದರ್ಶನವನ್ನಾಗಿ ಮಾಡಿ ನಿವೃತಿ ಹೊಂದಿದ್ದಾರೆ. ಅವರು ಸಾಹಿತ್ಯದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದಾರೆ. ಹೀಗಾಗಿ ಈ ಭಾರಿಯ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
,ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಶರಣಗೌಡ ಪಾಟೀಲ ಗೋಳಾ,ಯೋಜನಾ ಪ್ರಾಧೀಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಚಿತ್ತಾಪೂರ ಕಸಾಪ ಅಧ್ಯಕ್ಷ ಕಾಶಿನಾಥ ಗುತ್ತೆದಾರ,ಲೋಹಿತ್ ಕಟ್ಟಿ, ಧನ್ನಾ, ನಾಗಪ್ಪ ಬೆಳಮಗಿ, ಶಂಕರ ಕೋಟನೂರ್ ಸೇರಿದಂತೆ ಅನೇಕರು ಹಾಜರಿದ್ದರು.