ಮಹಾಶಿವರಾತ್ರಿಯ ನಿಮಿತ್ತ ಪಲ್ಲಕ್ಕಿ ಉತ್ಸವ

0
82

ಶಹಾಬಾದ: ನಗರದ ಸಮೀಪದ ಭಂಕೂರ ಗ್ರಾಮದ ಶಾಂತನಗರದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ  ಮಹಾಶಿವರಾತ್ರಿಯ ನಿಮಿತ್ಯವಾಗಿ ಗುರುವಾರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ೮ ಗಂಟೆಗೆ ಶಂಕರಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಸಣ್ಣೂರ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಮುಂದೆ ಗಂಗಾಸ್ನಾನ ಮಾಡಲಾಯಿತು. ನಂತರ ಅಲ್ಲಿಂದ ಪಲ್ಲಕ್ಕಿಯೊಂದಿಗೆ ವಿವಿಧ ವಾಧ್ಯಗಳೊಂದಿಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಈ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ೧೦ಗಂಟೆಗೆ ಮಹಾರುದ್ರಾಭೀಷೇಕ, ರಾತ್ರಿ ೯ಗಂಟೆಗೆ ಶಹಾಬಾದ ಬಸವ ಸಮಿತಿ ಭಜನಾ ಮಂಡಳಿ ವತಿಯಿಂದ ಭಜನೆ ಜಾಗರಣೆ ಕಾರ್ಯಕ್ರಮ ನಡೆಯಿತು.

Contact Your\'s Advertisement; 9902492681

ಅಹೋರಾತ್ರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಬಾರದ ಅಧಿಕಾರಿಗಳು: ಆಕ್ರೋಶ

ಶುಕ್ರವಾರದಂದು ಬೆಳಿಗ್ಗೆ ೮ ಗಂಟೆಗೆ ಅಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಂತರ ೧೧ ಗಂಟೆಗೆ ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಕಿಶನ ಚವ್ಹಾಣ ತಿಳಿಸಿದ್ದಾರೆ.

ದೇವಸ್ಥಾನ ಕಮಿಟಿಯ ಬಸವರಾಜ ಪೂಜಾರಿ, ಶಿವಪುತ್ರ ಕುಂಬಾರ, ತಿಪ್ಪಣ್ಣರೆಡ್ಡಿ, ಶಿವರಾಯ ಪೂಜಾರಿ, ಸಂತೋಷ ಕುಂಬಾರ, ಅರವಿಂದ ಚವ್ಹಾಣ, ಚಿದಾನಂದ ಕುಂಬಾರ, ಶಿವಪ್ರಕಾಶ ಪೂಜಾರಿ,  ದೀಪಕ ರಾಠೋಡ, ಸಿದ್ರಾಮರೆಡ್ಡಿ, ಲಕ್ಷ್ಮಿಕಾಂತ, ಕಿರಣ ಪೂಜಾರಿ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here