ಸುರಪುರ: ಪೂರ್ವ ಕಾಲದಿಂದಲು ಆಚರಣೆಯಲ್ಲಿರುವ ಯೋಗ ಪದ್ದತಿ ಇತ್ತಿಚಿಗೆ ಹೆಚ್ಚು ಪ್ರಚಾರಪಡೆದಿದ್ದು ಯೋಗ ಮಾಡುವುದರಿಂದ ರೋಗಮುಕ್ತವಾಗಿ ಬದುಕಬಹುದು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ. ಎಂ.ಎನ್.ವೆಂಕಟೇಶ ಹೇಳಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನೆಹರು ಯುವಕೇಂದ್ರ ಕಲಬುರಗಿ ಹಾಗು ಸಗರನಾಡು ಯುವಕ ಸಂಘ ಕನ್ನೆಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ದಿನಮಾನಗಳಲ್ಲಿ ಒತ್ತಡದ ಜಂಜಾಟದಲ್ಲಿ ಬದುಕುತ್ತಿರುವ ಮನುಷ್ಯ ನೆಮ್ಮದಿ ಮತ್ತು ಆರೋಗ್ಯ ಹಾಳು ಮಾಡಿಕೊಂಡಿದ್ದಾನೆ.ಆಹಾರ ಪದ್ದತಿ, ದೈನಂದಿನ ಚಟುವಟಿಕೆ ನಮ್ಮನ್ನು ರೋಗ ಗ್ರಸರ‍್ತನ್ನಾಗಿಸುತ್ತಿವೆ. ಇವೆಲ್ಲವುಗಳಿಗೆ ಸೂಕ್ತ ಪರಿಹಾರವೆಂದರೆ ಯೋಗ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ಶಿಭಿರದಲ್ಲಿ ಪಾಲ್ಗೊಂಡಿದ್ದರು, ಶಿವಕುಮಾರ ಸ್ವಾಮಿ, ಶಿವಶರಣಪ್ಪ ಹೆಡಿಗಿನಾಳ, ಮಲ್ಲಿಕಾರ್ಜುನ ಕೊಂಗಂಡಿ, ಸಂತೋಷ ಹೆಡಿಗಿನಾಳ, ವಿರೇಶ ಹಳಿಮನಿ ಸೇರಿದಂತೆ ಇತರರು ಇದ್ದರು, ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಬಲಭಿಮ ಪಾಟೀಲ್ ನಿರೂಪಿಸಿದರು, ಮೌನೇಶ ಐನಾಪುರ ಸ್ವಾಗತಿಸಿದರು, ಬಸ್ಸು ಚನ್ನಪಟ್ನ ವಂದಿಸಿದರು.