ಸುರಪುರ:ನಗರದ ವೀರಪ್ಪ ನಿಷ್ಠಿ ಇಂಜಿನಿರಿಂಗ್ ಕಾಲೇಜು, ಸುರಪುರ, ಶರಣ ಬಸವೇಶ್ವರ ಪ್ರೈಮರಿ ಸ್ಕೂಲ್, ಹೈಸ್ಕೂಲ್ ಮತ್ತು ಪಿ.ಯು.ಕಾಲೇಜು ಹಾಗು ಬಸವರಾಜಪ್ಪ ಅಪ್ಪ ವಾಣಿಜ್ಯ ಮಹಾವಿದ್ಯಾಲಯ,ಎನ್. ಎಸ್.ಎಸ್.ಯೂತ್ ರೇಡ್ ಕ್ರಾಸ್ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೋಗ ಗುರು ಹೆಮರೆಡ್ಡಿ ಪಾಟೀಲ ಕೃಷ್ಣಾಪುರ ಮಾತನಾಡಿ,ಪ್ರತೊಯೊಬ್ಬ ವ್ಯಕ್ತಿಗೆ ಯೋಗ ಎಂಬುದು ಮುಖ್ಯವಾದುದು.ನಿತ್ಯ ಯೋಗ ಮಾಡುವ ಮನುಷ್ಯ ನಿರೋಗಿಯಾಗಿ ಜೀವಿಸಬಲ್ಲ.ಯೋಗ ಎಂಬುದು ಬದುಕಿಗೆ ಔಷಧಿ ಇದ್ದಂತೆ.ಆದ್ದರಿಂದ ಎಲ್ಲರು ಯೋಗ ಮಾಡುವತ್ತ ಗಮನಹರಿಸೋಣ ಎಂದರು.ನಂತರ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಬೇಳಿಗ್ಗೆ ೨ ಘಂಟೆಗಳ ಕಾಲ ಯೋಗ ಅಭ್ಯಾಸವನ್ನು ಮಾಡಿಸುವದರೊಂದಿಗೆ ಯೋಗ ಮಾಡಿಸಿದರು.
ಈ ಸಂದರ್ಭದಲ್ಲಿ ಇಂಜಿನಿರಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ. ರವಿಂದ್ರಕುಮಾರ ನಾಗರಾಳೆ, ಪ್ರೊ ಕೈಲಾಸ್ ಪಾಟೀಲ, ಡಾ. ಅಶೋಕ ಪಾಟೀಲ,ಶರಣಗೌಡ ಬಿರಾದಾರ,ಡಾ:ಅನಿಲಕುಮಾರ ಪಾಟೀಲ , ನಾನಾಗೌಡ ದೆಸಾಯಿ ಹಾಗು ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.