ಕಲಬುರಗಿ: ನಗರದ ವಾರ್ಡ ನಂ.೪೮ರಲ್ಲಿ ಬರುವ ತಾರಫೈಲ ಹಾಗೂ ಗುಲಾಬವಾಡಿ ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಇವುಗಳ ದುರಸ್ಥಿ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜೈಕನ್ನಡಿಗರ ಸೇನೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇಲ್ಲಿನ ಸಾರ್ವಜನಿಕ ಶೌಚಾಲಯಗಳು ದುರಸ್ಥಿ ಇಲ್ಲದೆ ಹಾಳಾಗಿ ಹೋಗಿರುವುದರಿಂದ ಬಡಾವಣೆಯ ನಾಗರಿಕರು ಮತ್ತು ಮಹಿಳೆಯರು ಬಹಿರ್ದೆ ಸೆಗೆಂದು ರೈಲ್ವ ಹಳಿಯ ಬಳಿ ಹೋಗಿ ಬರುತ್ತಿದ್ದಾರೆ. ಉಪಯೋಗಕ್ಕೆ ಯೋಗ್ಯವಿಲ್ಲದ ಈ ಶೌಚಾಲಯಗಳನ್ನು ದುರಸ್ಥಿ ಕೈಗೊಂಡು ಇದರ ನಿರ್ವಾಹಣೆಯನ್ನು ನೋಡಿ-ಕೊಂಡು ಹೋಗುವ ಮೂಲಕ ಇಲ್ಲಿನ ನಾಗರಿಕರು ವಿಶೇಷವಾಗಿ ಮಹಿಳೆಯರು ಎದುರಿ ಸುತ್ತಿರುವ ಗಂಭೀರವಾದ ಸಮ ಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕು ಎಂದು ತಮ್ಮ ಮನವಿಯಲ್ಲಿ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ: ಕ್ರಮ ಕೈಗೊಳ್ಳದಿದ್ದಲ್ಲಿ ಠಾಣೆಗೆ ಮುತ್ತಿಗೆ: ಮೇಘರಾಜ್
ಈ ಸಂದರ್ಭದಲ್ಲಿ ಶೇಷಗಿರಿ ಮರತೂರಕರ, ಸುನೀಲ ಪಾಣೆಗಾಂವ, ಸಾಗರ ಸಿಂಗೆ, ಅಮರ ಯಾದವ, ಭೀಮಾ ಶೇಖರ ಇದ್ದರು.