ಶಾಲೆಗಳಲ್ಲೇ ಬಿಸಿಯೂಟ ಸಿದ್ಧಪಡಿಸಿ ಮಕ್ಕಳಿಗೆ ವಿತರಿಸಿ

1
67

ಕಲಬುರಗಿ: ಆರನೇ ತರಗತಿಯಿಂದ 10 ನೇ ತರಗತಿಗಳ ವರೆಗೂ ಶಾಲಾ ತರಗತಿಗಳು ಆರಂಭವಾಗಿರುವದರಿಂದ ಹಿಂದಿನಂತೆ ಬಿಸಿಯೂಟ ಶಾಲೆಗಳಲ್ಲೇ ಸಿದ್ಧಪಡಿಸಿ ನೀಡುವಂತೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ಆಗ್ರಹಕ್ಕೆ ಗುರುವಾರ ಸದನದಲ್ಲಿ ಸ್ಪಂದಿಸಿರುವ ಶಿಕ್ಷಣ ಸಚಿವ ಸುರೇಶ ಕುಮಾರ್ ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ದೇಶನ- ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು ಅಲ್ಲಿಂದ ಅನುಮತಿ ಬಂದ ನಂತರ ಹಿಂದಿನಂತೆಯೇ ಬಿಸಿಯೂಟ ಶಾಲೆಗಳಲ್ಲೇ ಸಿದ್ಧಪಡಿಸಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ ಮಹಾಮಾರಿಯಿಂದಾಗಿ ಬಿಸಿಟೂಯ ಯೋಜನೆಯ ಸ್ವರೂಪ ಬದಲಯಿಸಲಾಗಿದೆಯೇ ಹೊರತು ಯೋಜನೆ ಸ್ಥಗಿತಗೊಂಡಿಲ್ಲ. ವೇಳಾಪಟ್ಟಿಯಂತೆ ಶೈಕ್ಷಣಿಕ ವರ್ಷ ಆರಂಭಿಸಲಾಗದ ಕಾರಣ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಹಿನ್ನೆಲೆÉಯಲ್ಲಿ   ನಿಗದಿತ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ತಯಾರಿಕೆ ವೆಚ್ಚದ ಮೊತ್ತಕ್ಕೆ ಸಮನಾಗಿ ಆಹಾರ ಭದ್ರತಾ ಭತ್ಯೆಯ ರೂಪದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿ ಮಧ್ಯಾಹ್ನದ ಉಪಹಾರ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.

Contact Your\'s Advertisement; 9902492681

ಉಪಚುನಾವಣೆ; ಕಾಂಗ್ರೆಸ್ ಮುಖಂಡರ ಸಭೆ ಶನಿವಾರ

ಆದಾಗ್ಯೂ ಶಾಲೆಗಳಲ್ಲೇ ಅಡುಗೆ ಸಿದ್ಧಪಡಿಸಿ ಮಕ್ಕಳಿಗೆ ಬಿಸಿಟೂಯ ವ್ಯವಸ್ಥೆ ಮಾಡುವ ಬಗ್ಗೆ ಕೇಂದ್ರದ ನುಮತಿ ಕೋರಲಾಗಿದೆ. ಅನುಮತಿ ಬಂದ ನಂತರ ಕೋವಿಡ್- 19 ತಾಂತ್ರಿಕ ಸಲಹಾ ಸಮೀತಿ ಸಲಹೆ ಪಡೆದು ಪರಿಸ್ತಿತಿ ಅವಲೋಕಿಸಿ ಸುಧಾರಣೆ ಕ್ರಮಗಳೊಂದಿಗೆ ಶಾಳೆಗಳಲ್ಲೇ ಬಿಸಿಯೂಟ ಸಿದ್ಧಪಡಿಸುವದನ್ನು ಆರಂಭಿಸಲಾಗುತ್ತದೆ ಎಂದೂ ಸುರೇಶ ಕುಮಾರ್ ಅವರು ಶಾಸಕ ಡಾ. ಅಜಯ್ ಸಿಂಗ್ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here