ಕಲಬುರಗಿ: ಕೇಂದ್ರ ಸರ್ಕಾರ ಕೊಡಮಾಡಿದ ೭ ಕೋಟಿ ರೂ.ಗಳನ್ನು ಬೀಜೋತ್ಪಾದಕರಿಗೆ ಸಂದಾಯ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಹೈದ್ರಾಬಾದ್ ಕರ್ನಾಟಕ ಪ್ರಮಾಣಿತ ಬೀಜೋತ್ಪಾದಕರ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿಯನ್ನು ಆರಂಭಿಸಿದರು.
ಬೀಜೋತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹರಸೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಸವರಾಜ್ ಇಂಗಿನ್, ಎಂ.ಎಸ್. ಪಾಟೀಲ್ ನರಿಬೋಳ್, ರಾಜೇಂದ್ರ ಕರೇಕಲ್, ಅಶೋಕ್ ಎಸ್. ನಾಸಿ, ಅಂಬರೇಷ್ ಸಜ್ಜನ್, ಶಿವಶರಣಪ್ಪ ಸಜ್ಜನ್, ನಾಗೇಂದ್ರ ವಿ. ಪಾಟೀಲ್, ವಿದ್ಯಾಸಾಗರ್ ಪಾಟೀಲ್, ನಾಗಣ್ಣ ಭಾಲಖೇಡ್ ಮುಂತಾದವರು ಪಾಲ್ಗೊಂಡಿದ್ದರು.
ಜೂನ್ ೨೨ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಬೇಡಿಕೆಗಳನ್ನು ಇಡೇರಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಹೋಗುವ ಮಾರ್ಗದಲ್ಲಿ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.