ಶಹಾಬಾದ: ನಗರಸಭೆಯ ವಾರ್ಡ ನಂ 18 ರ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದ್ದರೂ ಬಿಜೆಪಿಯವರು ಚುನಾವಣಾ ಮತದಾರರ ಪಟ್ಟಿಯಲ್ಲಿ ಹೊರಗಿನವರ ಹೆಸರು ಸೇರ್ಪಡೆ ಮಾಡುತ್ತಿರುವುದನ್ನು ಗಮನಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ತಹಸೀಲ್ದಾರ ಕಚೇರಿಗೆ ತೆರಳಿ ವಿರೋಧ ವ್ಯಕ್ತಪಡಿಸಿ, ಚುನಾವಣಾ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರದಂದು ನಡೆದಿದೆ.
ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆಯ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಷಮ್ ಖಾನ ಮಾತನಾಡಿ, ಈಗಾಗಲೇ ಉಪಚುನಾವಣೆಯ ದಿನಾಂಕವು ನಿಗದಿಯಾಗಿದೆ.ಅಲ್ಲದೇ ಮಾರ್ಚ 10ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ, ಬಿಜೆಪಿಯವರ ಒತ್ತಡದಿಂದ ಮತದಾರರ ಪಟ್ಟಿಯಲ್ಲಿ ಸುಮಾರು 85ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಗಳು ಬೇರೆಯವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ.ಅಲ್ಲದೇ 17ನೇ ವಾರ್ಡನ ಮತದಾರರನ್ನು 18ನೇ ವಾರ್ಡನಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ.ಅಲ್ಲದೇ ಚುನಾವಣಾ ಆಯೋಗದ ನಿಯಮವನ್ನು ಗಾಳಿಗೆ ತೂರಿ, ಚುನಾವಣೆ ಸಮಯದಲ್ಲಿ ಸರ್ವೆ ಮಾಡಿ, ಹೆಸರನ್ನು ಸೇರ್ಪಡೆ ಮಾಡಲು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ
ಅಲ್ಲದೇ ಈ ರೀತಿ ಹೊರಗಿನವರ ಹೆಸರನ್ನು ಸೇರಿಸಿ ಕಪಟತನದಿಂದ ಗೆಲ್ಲಲ್ಲು ಎಲ್ಲಾ ರೀತಿಯ ಕಾನೂನು ಬಾಹಿರ ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಸೇರ್ಪಡೆ ಮಾಡುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದಕ್ಕೆ ಹೆಸರನ್ನು ಸೇರ್ಪಡೆಗೊಳಸುವುದನ್ನು ನಿಲ್ಲಿಸಿದ್ದಾರೆ.
ಈ ಉಪಚುನಾವಣೆ 997 ಮತದಾರರ ಪಟ್ಟಿಯಂತೆ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದರಲ್ಲದೇ, ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ನಾಗರಾಜ ಕರಣಿಕ್, ಡಾ.ಅಹ್ಮದ್ ಪಟೇಲ್, ಮಹ್ಮದ್ ಮಸ್ತಾನ,ಮಹ್ಮದ್ ಅಜರೋದ್ದಿನ್,ಸಾಹೇಬ,ಫಜಲ್ ಪಟೇಲ್,ಅನ್ವರ ಪಾಶಾ ಇತರರು ಇದ್ದರು.