ಶರಣಬಸವೇಶ್ವರ ದೇಗುಲಕ್ಕೆ ಪುನೀತರಾಜಕುಮಾರ ಭೇಟಿ

1
107
ಕನ್ನಡ ಚಿತ್ರರಂಗದ ಖ್ಯಾತನಟ ಪುನೀತ ರಾಜಕುಮಾರ ರವಿವಾರ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಆರ್ಶೀವಾದ ಪಡೆದುಕೊಂಡರು.

ಕಲಬುರಗಿ: ೧೯ನೇ ಶತಮಾನದ ಸಂತ ಹಾಗೂ ಸಾಮಾಜಿಕ ಸುಧಾರಣಕಾರನ ಕೃತಗದ್ದುಗೆ ಶ್ರೀ ಶರಬಸವೇಶ್ವರರ ದೇಗುಲಕ್ಕೆ, ಅಪಾರ ಅಭಿಮಾನಿಗಳಿಂದ ’ಅಪ್ಪು’ ಎಂದು ಗುರುತಿಸಿಕೊಂಡ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ ರಾಜಕುಮಾರ ರವಿವಾರ ಭೇಟಿ ನೀಡಿ, ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಆರ್ಶೀವಾದ ಪಡೆದುಕೊಂಡರು.
ಏಪ್ರೀಲ್ ೦೧ರಂದು ರಾಜ್ಯ ಮತ್ತು ವಿದೇಶಗಳಲ್ಲಿ ಬಿಡುಗಡೆಯಾಗಲಿರುವ ’ಯುವ ರತ್ನ’ಚಿತ್ರವನ್ನು ಉತ್ತೇಜಿಸಲು ಪುನೀತರಾಜಕುಮಾರ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದ ಆವರಣವೆಲ್ಲ ’ಅಪ್ಪು’ ಅಭಿಮಾನಿಗಳು ಚೆಲ್ಲಿದ್ದ ಹೂವಿನ ದಳಗಳಿಂದ ಕಂಗೊಳಿಸುತ್ತಿತ್ತು.

ದೇವಾಲಯಕ್ಕೆ ಆಗಮಿಸಿದ್ದ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ದೇವಾಲಯದಲ್ಲಿ ಸ್ವಾಗತಿಸಿಕೊಂಡರು. ದರ್ಶನಕ್ಕೆಂದು ದೇವಾಲಯದ ಆವರಣದಲ್ಲಿ ಸೇಡಂ ಶಾಸಕ ರಾಜ್‌ಕುಮಾರ್ ಪಾಟೀಲ್ ತೆಲ್ಕರ್, ಮಾಜಿ ಮೇಯರ್ ಶರಣು ಮೋದಿ ಸೇರಿದಂತೆ ಇತರರು ಚಲನಚಿತ್ರದ ಮಾದರಿಗಳನ್ನು(mಚಿಣiಟಿee iಜoಟ) ದೇವಸ್ಥಾನದ ಸನ್ನಿಧಿಗೆ ಪಾವತಿಸಲು ಮತ್ತು ನಮಸ್ಕರಿಸಲು ’ಅಪ್ಪು’ ಅವರನ್ನು ಕರೆದೊಯ್ದರು.

Contact Your\'s Advertisement; 9902492681

ಬರಹಗಾರರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು: ಮಾಜಿ ಶಾಸಕ ಬಿ.ಆರ್. ಪಾಟೀಲ

ಕೃತಗದ್ದುಗೆ ನಮಸ್ಕರಿಸಿದ ನಂತರ ಖ್ಯಾತನಟ ಪುನೀತ ರಾಜಕುಮಾರ ಅವರು ದಾಸೋಹಾ ಮಹಾಮನೆಗೆ ಭೇಟಿ ನೀಡಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ಗೌರವ ಸಲ್ಲಿಸಿ, ಆರ್ಶೀವಾದ ಪಡೆದುಕೊಂಡರು. ತದನಂತರ, ಪೂಜ್ಯ ಡಾ.ಅಪ್ಪಾಜಿ ಚಿತ್ರನಟ ಪುನೀತರಾಜಕುಮಾರರಿಗೆ ಶಾಲು ಹೊದಿಸಿ ಮತ್ತು ಫಲಕವನ್ನು ನೀಡಿ ಗೌರವಿಸಿದರು. ಮಾತೋಶ್ರಿ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಶ್ರೀ ಪುನೀತ್ ರಾಜಕುಮಾರ ಅವರನ್ನು ಆರ್ಶೀವಾದಿಸಿದರು. ಸಂಸ್ಥಾನದ ೯ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಸಹೋದರಿಯರಾದ ಕೋಮಲ, ಶಿವಾನಿ ಮತ್ತು ಮಹೇಶ್ವರಿ ಉಪಸ್ಥಿತರಿದ್ದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಅನೀಲ ಕುಮಾರ ಜಿ. ಬಿಡವೆ ಅವರು ಸಂಸ್ಥಾನದ ಶ್ರೀಮಂತ ಸಂಪ್ರದಾಯ ಮತ್ತು ಇತಿಹಾಸ ಹಾಗೂ ಶರಣಬಸವೇಶ್ವರ ಸಂಸ್ಥಾನ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯ ಬಗ್ಗೆ ಚಲನಚಿತ್ರ ತಾರೆಯರಿಗೆ ವಿವರಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಅಧ್ಯಕ್ಷರಾದ ಶ್ರೀ ಚಂದು ಪಾಟೀಲ, ಮೌಲ್ಯಮಾಪನ ಕುಲಸಚಿವರಾದ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಮತ್ತು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here