ಭಾರೀ ಮಳೆ‌ ಸಿಎಂ ಅವರ ಗ್ರಾಮ ವಾಸ್ತವ್ಯ ಮುಂದೂಡಿಕೆ

1
155

ಕಲಬುರಗಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಿನಾಂಕ ೨೨ ರಂದು ಹೇರೂರ್ ( ಬಿ) ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸನ್ಮಾನ್ಯ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಶ್ರೀ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ‌.

ಮುಂದಿನ ಜನತಾ ದರ್ಶನ ಹಾಗೂ ಗ್ರಾಮ‌ವಾಸ್ತವ್ಯದ‌ ದಿನಾಂಕವನ್ನು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಈ ಕುರಿತು ಜೂನ್ 22 ರ ( ಶನಿವಾರ‌) ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಐವಾನ್‌ ಇ ಶಾಹಿ ಅತಿಥಿ ಗೃಹದಲ್ಲಿ ಸನ್ಮಾನ್ಯ ಸಚಿವರು ಪತ್ರಿಕಾಗೋಷ್ಟಿ‌ ನಡೆಸಲಿದ್ದು ತಾವೆಲ್ಲ ಆಗಮಿಸಲು ಕೋರಲಾಗಿದೆ.

1 ಕಾಮೆಂಟ್

  1. ಕಳೆದ ಮೂರು ವಾರಗಳಿಂದ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಬಗ್ಗೆ ಸುದ್ದಿ ಬಿಟ್ಟರೆ ಬೇರೇನೂ ಸುದ್ದಿಗಳನ್ನು ರಾಜ್ಯದಲ್ಲಿ ಇಲ್ಲವೇನು ಅನ್ನುವ ಮಟ್ಟದಲ್ಲಿ ಮಾಧ್ಯಮಗಳು ಪ್ರಚಾರ ಮಾಡಿದರು ……. ಅದಿಕಾರಿಗಳು ಕಚೇರಿಯಲ್ಲಿ ಸಾರ್ವಜನಿಕರು ಸಮಸ್ಯೆಗೆ ಪರಿಹಾರ ನೀಡದೆ ಸನ್ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ನೆಪದಲ್ಲಿ ಹೇರೂರು ಗ್ರಾಮ ಸುತ್ತಿದೆ ಸುತ್ತಿದು …..
    ಲಕ್ಷಾಂತರ ರೂಪಾಯಿ ಖರ್ಚು ಮಾಡಿದೇ ಮಾಡಿದ್ದು ……
    ಜನರು ಮುಖ್ಯಮಂತ್ರಿ ಬರುತ್ತಾರೆ ನಮ್ಮ ಕಷ್ಟ ಸುಖ ಕೇಳುತ್ತಾರೆ ಅಂತ ಸಡಗರ ……
    ಆದರೆ ಒಂದು ಸಣ್ಣ ಮಳೆ ನೆಪದಲ್ಲಿ ಇಡೀ ಕಾರ್ಯಕ್ರಮ ರದ್ದು ಮಾಡಿದ್ದು ಎಷ್ಟು ಸರಿ ????? ಹಾಗಾದರೆ ಇವರಿಗೆ ನಿಜವಾಗಿಯೂ ಜನರ ಮೇಲೆ ಪ್ರೀತಿಯೊ ಅಥವಾ ಬಿಟ್ಟಿ ಪ್ರಚಾರವೋ ????

    ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತೆ ….
    ಆ ಗ್ರಾಮಕ್ಕೆ ಹೋಗಲು ಸಾಧ್ಯವಿಲ್ಲ ಎಂಬಂತೆ ಮುಖ್ಯಮಂತ್ರಿಗಳು ಕಾರ್ಯಕ್ರಮ ರದ್ದು ಮಾಡಿದ್ದು ಸರಿಯಾಗಿ ಕ್ರಮವಲ್ಲಾ …. ಕುಮಾರಸ್ವಾಮಿ ಅವರಿಗೆ ನಿಜವಾಗಿಯೂ ಜನರ ಮೇಲೆ ಪ್ರೀತಿ ಇದ್ದರೆ ಸ್ವಲ್ಪ ಕಷ್ಟ ಪಟ್ಟು ಮಳೆಯಲ್ಲಿ ನೆನೆದು ಜನರ ನಡುವೆ ಬರಬೇಕಾಗಿತ್ತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here