ಎಐಡಿವೈಒದಿಂದ ಬೃಹತ್ ಪಂಜಿನ ಮೆರವಣಿಗೆ: ಭಾರತ ಕ್ರಾಂತಿಯ ಸಂಕೇತ: ಮಹೇಶ ನಾಡಗೌಡ

1
54

ಕಲಬುರಗಿ: ಎಐಡಿವೈಒ ಜಿಲ್ಲಾ ಸಮಿತಿಯಿಂದ ಆಯೋಜಿಸಿದ ಬ್ರಿಟಿಷರ ಎದೆ ನಡುಗಿಸಿದ ಮಹಾನ್ ಕ್ರಾಂತಿಕಾರಿಗಳಾದ ಶಹೀದ್ ಭಗತ್‌ಸಿಂಗ್, ರಾಜ್‌ಗುರು, ಸುಖದೇವ್ ರವರ ೯೧ನೇಯ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಈ ಕಾರ್ಯಕ್ರಮವು ನಗರದ ಎಸ್.ವಿ.ಪಿ. ವೃತ್ತದಿಂದ ಪ್ರಾರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಇಂಕ್ವಿಲಾಬ್ ಜಿಂದಾಬಾದ್, ಸಾಮ್ರಾಜ್ಯವಾದ ಮುರ್ದಾಬಾದ್ ಭಗತ್‌ಸಿಂಗ್‌ರ ವಿಚಾರಗಳು ಎಲ್ಲೆಲ್ಲೂ ಹರಡಲಿ, ಭಗತ್‌ಸಿಂಗ್ ನಮ್ಮ ಆದರ್ಶ, ಭಗತ್‌ಸಿಂಗ್ ಕನಸು ನನಸಾಗಲಿ, ಎಂಬ ಘೋಷಣೆಗಳು ಮೊಳಗಿದವು. ಜಿಲ್ಲಾಧಿಕಾರಿಗಳ ಕಛೇರಿಯ ಮಾರ್ಗವಾಗಿ ಮರಳಿ ಪಟೇಲ್ ಸರ್ಕಲ್‌ನಲ್ಲಿ ಕಾರ್ಯಕ್ರಮ ನಡೆಯಿತು.

Contact Your\'s Advertisement; 9902492681

ಎಂ.ಇ.ಎಸ್, ಶಿವಸೇನೆ ಸಂಘಟನೆಗಳು ರದ್ದು ಮಾಡುವಂತೆ ಕರವೇ ಆಗ್ರಹ

ಅವರು ಮುಂದುವರೆದು ಮಾತಾನಾಡುತ್ತ ಭಗತ್‌ಸಿಂಗ್‌ರವರು ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಹೋರಾಟದ ಕಿಚ್ಚನ್ನು ಹೊತ್ತಿಸಿದರು. ಜಲಿಯನ್ ವಾಲಾಬಾಗ್ ಘಟನೆಯಿಂದ ಬ್ರಿಟಿಷರ ವಿರುದ್ಧ ಬಲಿಷ್ಠ ಹೋರಾಟಕ್ಕೆ ಜೀವದ ಹಂಗು ತೊರೆದು ದೇಶಕ್ಕಾಗಿ ಸಮರ್ಪಿಸಿಕೊಂಡರು. ರಾಜಕೀಯ ಸಮಾಜಿಕ, ಸೈದಾಂತಿಕವಾಗಿ ಸ್ಪಷ್ಟ ನಿಲುವು ಹೊಂದಿದರು. ಈ ದೇಶದಿಂದ ಬ್ರಿಟಿಷರನ್ನು ಓಡಿಸಿದರೆ ಸಾಲದು ಇಲ್ಲಿ ಮತ್ತೋಂದು ಮೂಲಭೂತ ಬದಲಾವಣೆಯ ಅವಶ್ಯಕತೆ ಎಂದು ತೊರಿಸಿಕೊಟ್ಟರು. ಅದೇ ಮಾನವನಿಂದ ಮಾನವನ ಶೋಷಣೆ ನಿಲ್ಲುವ ಸಮಾಜವಾದಿ ಭಾರತ ಎನ್ನುವ ಕ್ರಾಂತಿಯ ಕನಸನ್ನು ಕಂಡಿದರು. ಅವರ ಕನಸು ನನಸಾಗಬೇಕಾದರೆ ಅವರು ನಂಬಿದ ಆದರ್ಶ ವಿಚಾರಗಳು ಇಂದಿನ ಯುವಜನತೆ ಮೈಗೂಡಿಸಿಕೊಂಡು ಪ್ರಸಕ್ತ ಸಮಸ್ಯೆಗಳ ವಿರುದ್ಧ ಜಾತಿ ಧರ್ಮ ಎನ್ನದೇ ಅನ್ಯಾಯದ ವಿರುದ್ಧ ಒಗ್ಗಟಾಗಿ ಧ್ವನಿ ಎತ್ತಿದರೇ ಕ್ರಾಂತಿ ಆಗುವುದು. ಯಾವುದೇ ಸಂದೇಹವಿಲ್ಲವೆಂದು ಕರೆ ನೀಡಿದರು.

ಇನ್ನೋರ್ವ ಭಾಷಣಕಾರರಾಗಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀ ಜಗನ್ನಾಥ ಎಸ್.ಎಚ್. ಮಾತನಾಡಿ, ಭಗತ್‌ಸಿಂಗ್ ಅವರು ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಜೀವ ಕೊಡಲಿಲ್ಲಾ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಕೊಟ್ಟರು. ಅಂತ ಸಾವು ನಮ್ಮೆಲ್ಲರಿಗೂ ಆದರ್ಶವಾಗಿದೆ. ಭಗತ್‌ಸಿಂಗ್ ರವರು ಇಂದಿನ ವಿಧ್ಯಾರ್ಥಿ ಯುವಜನರಿಗೆ ಹೋರಾಟದ ಸ್ಪೂರ್ತಿಯ ಸಂಕೇತವಾಗಿದ್ದಾರೆ ಬಡತನ, ನಿರುದ್ಯೋಗ, ಹಾಗು ಅಸಮಾನತೆ , ಕೋಮುಘರ್ಷಣೆ ವಿರುದ್ದ ಹಾಗೂ ರೈತವಿರೊದಿ ಕರಾಳ ಕೃಷಿ ಕಾಯ್ದಿದೆಯ ವಿರುದ್ದ ಹೊರಾಡಲು ಎಲ್ಲರು ಮುಂದೆ ಬರಬೇಕೆಂದು ಹೇಳಿದರು.

ಭಗತಸಿಂಗ್ ಹುತಾತ್ಮ ದಿನಾಚರಣೆ: ಗಲ್ಗಂಬಕ್ಕೆ ಮುತ್ತಿಟ್ಟ ಭಗತ್‌ಸಿಂಗ್ ಹೋರಾಟದ ಸ್ಪೂರ್ತಿ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಂIಆಙಔ ಜಿಲ್ಲಾ ಅಧ್ಯಕ್ಷರಾದ ನಿಂಗಣ್ಣಾ ಜಂಬಗಿ ವಹಿಸಿ ಮಾತನಾಡಿ ನಮ್ಮ ಸಂಘಟನೆ ನೇತಾಜಿ, ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್‌ರವರ ಉತ್ತರಾಧಿಕಾರಿ ಯುವಜನ ಸಂಘಟನೆ ಂIಆಙಔ ಬಲಪಡಿಸಿ ಎಲ್ಲರೂ ಸೇರಿ ಇಂಥಾ ಮಹಾನ್ ವ್ಯಕ್ತಿಗಳ ಕನಸು ನನಸು ಮಾಡಲು ಪಣತೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಭೀಮಾಶಂಕರ್ ಪಾಣೆಗಾಂವ್, ಸಿದ್ದು ಚೌಧರಿ, ಶರಣು ವಿ ಕೆ, ಸದಸ್ಯರಾದ ಅಂಬಿಕಾ ಎಸ್.ಜಿ, ಈಶ್ವರ್.ಇ.ಕೆ, ಪುಟ್ಟರಾಜ ಲಿಂಗಶೇಟ್ಟಿ, ಬಸವರಾಜ ಬೇಲೂರ್, ಅಜಯ ಗುತ್ತೆದಾರ, ಪ್ರವೀಣ ಬಣಮೀಕರ, ತಿಮ್ಮಯ್ಯ ಮಾನೆ, ರಘು ಪವಾರ್, ಶ್ರೀನಿವಾಸ, ಪಾರ್ವತಿ, ಅನುರಾಧ, ಸಿದ್ದಮ್ಮ ಎಸ್.ಜಿ, ಶಿವಗಣೇಶ ಮಾಳಾ ಹಾಗೂ ಕಾಲೇಜಿನ ವಿದ್ಯಾರ್ಥಿ ಯುವಜನರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here