ಜಗತ್ತಿನ ದಾರ್ಶನಿಕರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ

0
51

ಶಹಾಪುರ: ಜಗತ್ತಿನ ದಾರ್ಶನಿಕರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದು ಇಂದುಮತಿ ಸಾಲಿಮಠ ನುಡಿದರು.

ಅವರು ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ , ಶಾರದಾಬಾಯಿ ಶರಣಪ್ಪ ಅವಂಟಿಯವರ ನಾಲ್ಕನೆ ಸ್ಮರಣೋತ್ಸವ ನಿಮಿತ್ತ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು-97 ರ ಸಭೆಯಲ್ಲಿ ಬಸವಾದಿ ಶರಣರ ಕ್ರಾಂತಿ ಎಂಬ ವಿಷಯ ಕುರಿತು ಅನುಭಾವ ನೀಡಿದರು.

Contact Your\'s Advertisement; 9902492681

ಪಟ್ಟಭದ್ರ ಶಕ್ತಿಗಳು ಜೋತಿಷ್ಯ, ವಾಸ್ತು,ಪಂಚಾಂಗ, ಸ್ವರ್ಗ- ನರಕಗಳ ಭ್ರಾಮಕ ಲೋಕದಲ್ಲಿ ಇರುವಂತೆ ಹುನ್ನಾರ ಹೂಡಿ ಜನರನ್ನು ವಾಸ್ತವದತ್ತ ಮುಖ ಮಾಡದಂತೆ ತಡೆದರು. ನಿಜವಾದ ಧರ್ಮ ಜನತೆಯಲ್ಲಿ ನಿರ್ಭಯತೆಯನ್ನು ಬೆಳೆಸಬೇಕು. ವೈಚಾರಿಕತೆಯನ್ನು ವೈಜ್ಞಾನಿಕ ಮನೋಭಾವವನ್ನು ಉಂಟು ಮಾಡಬೇಕು. ಆದರೆ ಧರ್ಮದ ವಿಶಾಲಾರ್ಥ ಇಂದು ಮರೆಯಾಗಿ ಭಯವೇ ಧರ್ಮದ ಶಕ್ತಿ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಕಲಬುರಗಿಯಲ್ಲಿ 30ಕ್ಕೂ ಹೆಚ್ಚು ಹೋರಾಟಗಾರರ ಬಂಧನ

ಸಮಾಜ ಪರಿವರ್ತನೆಯ ಹರಕಾರ ಬಸವಣ್ಣನವರು ಪಟ್ಟಭದ್ರರರನ್ನು ಮಟ್ಟ ಹಾಕುವ ಮೂಲಕ ಸಮಾಜದಲ್ಲಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದರು. ಸ್ಥಾವರ ಗುಡಿಯಲ್ಲಿರುವ ದೇವರು ಕೇವಲ ಕೆಲವರ ಸ್ವತ್ತು ಎಂಬುದನ್ನು ಮನಗಾಣಿಸಿದರು. ಜನ ಸಾಮಾನ್ಯರಿಗೆ ಕಾಲೇಕಂಬ ದೇಹವೇ ದೇಗುಲ ಎಂಬ ಅರಿವನ್ನುಂಟು ಮಾಡಿ ಮನುಷ್ಯನನ್ನು ದೇವರ ಎತ್ತರಕ್ಕೆ ಏರಿಸಿದರು ಎಂದು ಸಭೆಗೆ ವಿವರಿಸಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಾಹು ಕಾಲ ಗುಳಿಕ ಕಾಲಗಳನ್ನು ಸೃಷ್ಟಿ ಮಾಡಿದ್ದಾನೆ ಹೊರತು ದೇವರು ಇದನ್ನು ಸೃಜಿಸಲಿಲ್ಲ. ಆಚಾರವೇ ಸ್ವರ್ಗ- ಅನಾಚಾರವೆ ನರಕ ಎನ್ನುವ ಮಾತುಗಳ ಮೂಲಕ ಶರಣರು ಇಂದಿನ ಬದುಕು ವಾಸ್ತವವಾದುದು. ಸತ್ತ ಮೇಲೆ ಸ್ವರ್ಗ ನರಕ ಕಲ್ಪನೆಯನ್ನು ಶರಣರು ಅಲ್ಲಗಳೆಯುತ್ತಾರೆ. ಆಚಾರ ವಿಚಾರ ಸದ್ಗುಣ ಸಂಪನ್ನ ವ್ಯಕ್ತಿತ್ವ ಸ್ವರ್ಗವನ್ನು ಉಂಟು ಮಾಡುತ್ತದೆ. ಕೆಟ್ಟವರ ಗೆಳೆತನ, ಅವಿಚಾರ, ಅಸಂಗತ ನಡವಳಿಕೆಗಳು ನರಕವನ್ನು ಸೃಷ್ಟಿಸುತ್ತವೆ ಎಂದವರು ವಚನಗಳೊಂದಿಗೆ ವಿವರಿಸಿದರು.

ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಎಸ್ ಸಾಜಿದ್ ಆಯ್ಕೆ

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ವಿಶ್ವದ ತುಂಬಾ ಇಂದು ಬಲ ಪಂಥೀಯ ಚಿಂತನೆಗಳ ಕಾರುಬಾರು ನಡೆದಿದೆ. ವಾಸ್ತವವನ್ನು ಮರೆಮಾಚಿ ಭ್ರಾಮಕ ಲೋಕದಲ್ಲಿ ನಮ್ಮನ್ನು ವಿಹರಿಸುವಂಥ ಹೀನ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಬಸವಾದಿ ಶರಣರ ವಚನಗಳ ನೈತಿಕ ಮೌಲ್ಯಗಳ ಬಗೆಗೆ ರಾಜಕಾರಣಿಗಳು ತಿಳಿದುಕೊಂಡಿದ್ದರೆ , ಅವು ಅಂತರ್ಗತವಾಗಿದ್ದರೆ ಅವರು ಹೀನ ಕೃತ್ಯಗಳನ್ನು ಬೆನ್ನು ಹತ್ತಿ ಹೋಗುತ್ತಿರಲಿಲ್ಲ. ಪರ ವಧುವನು ಮಹಾದೇವಿ ಎಂಬೆ, ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ, ಎಂಬ ವಚನದ ಸಾಲು ಅರ್ಥ ಮಾಡಿಕೊಂಡಿದ್ದರೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಉಂಟಾಗುತ್ತಿರಲಿಲ್ಲ ಎಂದವರು ಸಭೆಗೆ ವಿವರಿಸಿದರು.

ಆರಂಭದಲ್ಲಿ ಡಾ.ರವೀಂದ್ರ ಹೊಸ್ಮನಿ ಸ್ವಾಗತಿಸಿದರು. ಚಂದ್ರಕಾಂತ ಗೋಗಿ, ಗಂಗಾಧರ ಹೊಟ್ಟಿ, ನೀಲಪ್ಪ ಚೌದರಿ ನೂರಾರು ಮಕ್ಕಳು ವಚನ ಗೀತೆಯನ್ನು ಹಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ವೇದಿಕೆಯ ಮೇಲೆ ತಾಲೂಕು ಪಂಚಾಯತಿಯ ಸಿ.ಇ.ಓ. ಮೂರ್ತಿ , ಗಂಗೂಬಾಯಿ ಮಲ್ಲಿಕಾರ್ಜುನ ಅವಂಟಿ, ಜ್ಯೋತಿ ಶಿವಕುಮಾರ ಅವಂಟಿ ಇದ್ದರು. ಸಭೆಯಲ್ಲಿ ಅಡಿವೆಪ್ಪ ಜಾಕಾ, ರಾಜಶೇಖರ ನಗನೂರು, ಸಿದ್ಧಲಿಂಗಪ್ಪ ಆನೇಗುಂದಿ, ಶಿವಯೋಗಪ್ಪ ಮುಡಬೂಳ, ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಗುಂಡಣ್ಣ ಕಲಬುರ್ಗಿ, ಸಿದ್ದರಾಮ ಹೆಂಬೇರಾಳ, ಮಹಾಂತೇಶ ಶಹಾಬಾದ, ಹೊನ್ನಾರೆಡ್ಡಿ ವಕೀಲರು, ಗುರುಬಸವಯ್ಯ ಗದ್ದುಗೆ, ನಾಡಗೌಡ ಶಿಕ್ಷಕರು, ತಿಪ್ಪಣ್ಣ ನಾಟೇಕಾರ, ಪ್ರಕಾಶ ರಾಜೂರ, ಡಾ.ಬಸವರಾಜ ಹಾದಿಮನಿ, ಸಿದ್ದರಾಮ ಹೊನ್ಕಲ್, ಶಿವಕುಮಾರ ಕರದಳ್ಳಿ, ಪಂಪಣ್ಣಗೌಡ ಮಳಗ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here