ಕಲಬುರಗಿಯಲ್ಲಿ 30ಕ್ಕೂ ಹೆಚ್ಚು ಹೋರಾಟಗಾರರ ಬಂಧನ

0
58

ಕಲಬುರಗಿ: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿವೆ.

ಈ ಕರೆ ಕಲಬುರಗಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಜಿಲ್ಲಾ ಸಮಿತಿ ಬೆಂಬಲವಾಗಿ ಕಲಬುರಗಿ ಜಿಲ್ಲೆಯಿಂದ ವಿವಿಧ ಸಂಸ್ಥೆ ಕಚೇರಿಗಳ ಸ್ಥಳಾಂತರ ವಿರೋಧಿಸಿ ಬಂದ್ ಕರೆ ನೀಡಿ ಹೋರಾಟ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಸುಮಾರು 30ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ.

Contact Your\'s Advertisement; 9902492681

ಎತ್ತಿನ ಬಂಡಿಗೆ ಸ್ಕೂಟಿ ಡಿಕ್ಕಿ: ಆರೋಗ್ಯ ಕೇಂದ್ರದ ಅಧಿಕಾರಿ ಸ್ಥಳದಲ್ಲೇ ಮೃತ್ಯು

ಕಲಬುರಗಿ ಬಂದ್​ಗೆ ಅನುಮತಿ ನೀಡದ ಪೊಲೀಸರು, ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಹಿನ್ನೆಲೆ ರೈತರ ಬಂಧಿಸಲಾಗಿದೆ.

ಬಂಧನ ಕುರಿತು ಪ್ರತಿಕ್ರಿಯೆ ನೀಡಿರುವ ಹೋರಾಟಗಾರರು, ಈ ಬಂಧನ ಖಂಡನಾರ್ಹ, ಹೋರಾಟ ಹತ್ತಿಕ್ಕುವ ಸಂಚು ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆಗಳಿಗೆ ಕೊವಿಡ್ ಸಮಸ್ಯೆ ಎದುರಾಗಲ್ಲಾ ಅದರ ಬಗ್ಗೆ ನೂರಾರು ಜನ ಗುಂಪಾಗಿ ಪ್ರಾಚಾರ ಬಹಿರಂಗ ಸಭೆ ಸಮಾರಂಭಗಳು ನಡೆಸುತ್ತಾರೆ. ಆದರೆ ಹೋರಾಟ ಮಾತ್ರ ಬಂಧನ ಮಾಡಿ ಹೋರಾಟ ಹತ್ತಿಕ್ಕುವ ಸಂಚಿಗೆ ಬಗ್ಗುವದಿಲ್ಲ.ಮುಂದಿನದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಲು ಕರೆ ನೀಡುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕರಾದ ಶರಣಬಸಪ್ಪ ಮಮಶೇಟ್ಟಿ ತಿಳಿಸಿದ್ದಾರೆ.

ಭಾರತ್ ಬಂದ್: ಕಲಬುರಗಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಎದುರು ಪ್ರತಿಭಟನೆ

ರೈತ ವಿರೋಧಿ ಕರಾಳ ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಇಂದು ಜನತಾ ಬಂದ್ ನಡೆಯಿತು. ಬೆಳಿಗ್ಗೆ ಮುಷ್ಕರದಲ್ಲಿ ಭಾಗವಹಿಸಿದ ಸಂಘಟಕರನ್ನು ಬಂಧಿಸುವ ಮೂಲಕ ಮುಷ್ಕರ ವಿಫಲಗೊಳಿಸಲು ಪ್ರಯತ್ನಿಸಿದ ಬಿಜೆಪಿ ಸರಕಾರದ ನಡೆಯನ್ನು ತೀವ್ರವಾಗಿ ಖಂಡನೀಯ. ರೈತರ ಹೋರಾಟವನ್ನು ಹತ್ತಿಕ್ಕಲು ಪೋಲಿಸರನ್ಬು ಬಳಸಿಕೊಳ್ಳುತ್ತಿರುವ ಬಿಜೆಪಿಯು ದೇಶಕ್ಕೆ ದ್ರೋಹವೆಸಗುತಿದೆ ಬಂದಿದ್ದಾರೆ.

ರೈತ ಹೋರಾಟಗಾರ ರಾಕೇಶ ಟಿಕಾಯತ್ ಅವರ ಮೇಲೂ ಸುಳ್ಳು ಮೊಕದ್ದಮೆ ದಾಖಲಿಸಿದ್ದು ಮತ್ತು ಇಂದಿನ ಹೋರಾಟ ವಿಫಲ ಮಾಡಲುಪ್ರಯತ್ನಿಸಿದ್ದು ಸರಕಾರದ ಸರ್ವಾಧಿಕಾರಿ ಧೋರಣೆ ಆಗಿದೆ. ಆದರೆ ಭಾರತವು ಪ್ರಜಾಪ್ರಭುತ್ವ ದೇಶವಾಗಿದೆ. ಪೋಲಿಸ್ ಲಾಠಿ ಬಂದೂಕಿನಿಂದ ದೇಶದ ಜನತೆಯ ಪ್ರಜಾಪ್ರಭುತ್ವೀಯ ಹಕ್ಕುಗಳನ್ಬು ದಮನಿಸಲಾಗದು. ರೈತರ ಹೋರಾಟವು ಜನತೆಯ ಹೋರಾಟವಾಗಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದ ಹೊರತು ಹೋರಾಟ ನಿಲ್ಲದು. ಹೋರಾಟವು ಮುಂದುವರೆಯಲಿದೆ.

ಸಂವಿಧಾನದ ರಕ್ಷಣೆ ಆಗಲೆ ಬೇಕು, ಕೃಷಿ ವಿರೋಧಿ ಮೂರು ಕಾಯ್ದೆ ಗಳನ್ನು ರದ್ದು ಮಾಡಲೆ ಬೇಕು, ವಿದ್ಯುತ್ ಮಸೂದೆ 2020 ರದ್ದು ಗೊಳಿಸಲೆಬೇಕು, ಕಲಬುರಗಿ ಕಲ್ಯಾಣ ಕರ್ನಾಟಕ ತೊಗರಿ ನಾಡಿಗೆ ದೊರಕ ಬೇಕಾದ ಜವಳಿ ಪಾರ್ಕ್, ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್ ಆಸ್ಪತ್ರೆ, ತೊಗರಿ ತಂತ್ರಜ್ಞಾನ ಪಾರ್ಕ್ ಮತ್ತು ಕುಡಿಯುವ ನೀರು ಖಾಸಗೀಕರಣ ಮಾಡಿದ ಜನ ವಿರೋಧಿ ಮತ್ತು ಕಲಬುರಗಿ ಜಿಲ್ಲೆಗೆ ಕಡೆಗಣಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಿ ಮಹಾ ಮುಷ್ಕರ ಬೆಳಿಗ್ಗೆ 6 ರಿಂದ ಕೇಂದ್ರೀಯ ಬಸ್ ನಿಲ್ದಾಣ ದಲ್ಲಿ ರೊಡಿನ ಮೇಲೆ ಕುಳಿತು ಘೋಷಣೆಗಳು ಮುಗಿಲು ಮುಟ್ಟಿತ್ತು.

ಶರಣಬಸಪ್ಪಾ ಮಮಶೆಟ್ಟಿ, ನಿಲಾ ಕೆ, ಎಸ್ ಆರ್ ಕೊಲ್ಲೂರು, ಮೌಲಾ ಮುಲ್ಲಾ, ಭಿಮಶೆಟ್ಟಿ ಯಂಪಳ್ಳಿ, ಮಹೆಷ ಎಸ್ ಬಿ, ಎಸ್ ಎಮ್ ಶರ್ಮಾ, ಆರ್ ವಿ ದೆಸಾಯಿ, ಸುಧಾಮ ಧನ್ನಿ, ಅರ್ಜುನ ಗೊಬ್ಬುರ, ಜಗದೆವಿ ಚಂದನಕೆರಿ, ಜಗದೆವಿ ನೂಲಕರ, ಅಮಿನಾಬೆಗಂ, ಶೌಕತ್ ಅಲಿ ಆಲೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here