ಸುರಪುರ: ತಾಲೂಕಿನ ಹೆಮನೂರು ಸರಕಾರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಯಾದಗಿರಿ ಜಿಲ್ಲಾ ಅಂಧತ್ವ ನಿಯಂತ್ರಣ ಘಟಕದ ವತಿಯಿಂದ ವಿಶ್ವ ಗ್ಲಾಕೋಮಾ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಮನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿದ್ದಯ್ಯ ಚಿಕ್ಕಮಠ ಮಾತನಾಡಿ,ಪ್ರತಿಯೊಂದನ್ನು ನೋಡಲು ತಿರುಗಾಡಲು ನಮ್ಮ ಕಣ್ಣುಗಳು ಅತೀ ಮುಖ್ಯವಾಗಿವೆ,ಆದ್ದರಿಂದ ಎಲ್ಲರು ಕಣ್ಣುಗಳ ರಕ್ಷಣೆಯನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ವಾಗಣಗೇರಾ ಗ್ರಾಮ ಪಂಚಾಯತಿ ಭ್ರಷ್ಟಾಚಾರ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ನೇತ್ರ ವೈದ್ಯಾಧಿಕಾರಿ ಡಾ:ಶಮೀಮ ಮಾತನಾಡಿ,ಯಾವುದೇ ರೋಗ ಲಕ್ಷಣ ಇಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಎಂದರೆ ಅದು ಗ್ಲಾಕೋಮಾ ನೇರ ದೃಷ್ಟಿ ಸರಿಯಿದ್ದರೂ ದೃಷ್ಟಿ ವಲಯವು ಕುಗ್ಗುತ್ತಾ ಬರುತ್ತದೆ,40 ವಯಸ್ಸಿನ ನಂತರ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಒಂದು ವೇಳೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯದಿದ್ದಲ್ಲಿ ಶಾಶ್ವತ ಅಂಧತ್ವ ಉಂಟಾಗಲಿದೆ.ಆದ್ದರಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನಗುರು ಹುಸೇನಪಾಷಾ ಮುಲ್ಲಾ ಶಿಕ್ಷಕರಾದ ಸಿದ್ದಪ್ಪ ಹೊಸಗೌಡರ್ ಶ್ರೀಕಾಂತ ಲಾಮಸ್ವಾಮಿ ಅನಿತಾ ಕಿರಿಯ ಆರೋಗ್ಯ ಸಹಾಯಕ ಹಬೀಬ್ ಉಲ್ಲಾ ಸಾಧಿಕ ಆಪ್ತ ಸಮಾಲೋಚಕ ರಾಘವೇಂದ್ರ ಸುನೀಲ್ ಇತರರಿದ್ದರು.ಇದೇ ಸಂದರ್ಭದಲ್ಲಿ ಸಗರನಾಡು ಪ್ರೌಢ ಶಾಲೆ ಪೇಠ ಅಮ್ಮಾಪುರ 4, ಕನ್ನೆಳ್ಳಿ ಪ್ರೌಢ ಶಾಲೆಯ 4,ಲಕ್ಷ್ಮೀಪುರ ಶಾಲೆಯ 3,ಹೆಮನೂರು ಶಾಲೆಯ 3, ಸೂಗುರು ಶಾಲೆಯ 3 ಮತ್ತು ದೇವಾಪುರ ಶಾಲೆಯ 3 ಮಕ್ಕಳು ಸೇರಿದಂತೆ ಒಟ್ಟು 73 ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.