ಸುರಪುರ: ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೊಣೂರ ಅವರ 33ನೇ ಜನುಮ ದಿನದ ಅಂಗವಾಗಿ ನಗರದ ಮಾತಾಶ್ರಯ ಅನಾಥಾಶ್ರಮದಲ್ಲಿನ ಮಕ್ಕಳಿಗೆ ಹಣ್ಣು ಹಾಲು ಮತ್ತು ಸ್ಲೇಟ್ ಕಾಪಿ ಪೆನ್ನು ಸೇರಿದಂತೆ ಇತರೆ ಕಲಿಕಾ ಸಾಮಗ್ರಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಡೊಣೂರ ಮುಖಂಡ ಸೂಗುರೇಶ ಮಡ್ಡಿ ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಕೇರಿ ಅನಾಥಾಶ್ರಮದ ಮೇಲ್ವಿಚಾರಕ ಮದನಲಾಲ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.