ಕಲಬುರಗಿ: ಮಹಾನಗರ ಪಾಲಿಕೆಯಿಂದ ಅನಧಿಕೃತವಾದ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ದ್ವೀತಿಯ ದರ್ಜೆಯ ಸಹಾಯಕ ಪ್ರಭಾರಿ ಕರವಸೂಲಿಗಾರೊಬ್ಬರಿಗೆ ಜಿಲ್ಲಾಧಿಕಾರಿ ವಿವಿ ಜೋತ್ಸ್ನಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನಾಗಪ್ಪ ಬಜಂತ್ರಿ, ಅಮಾನತುಗೊಂಡ ಪ್ರಭಾರಿ ಕರಸೂಲಿಗಾರ. ನಗರದ ಆಜಾದಪೂರ ಗ್ರಾಮದ ಸರ್ವೆ ನಂ.25ರ ನಿವೇಶನ ಸಂಖ್ಯೆ 136 ಮತ್ತು 157 ಗಳಿಗೆ ಅನಧಿಕೃತವಾದ ಪಿಐಡಿ ನಂಬರನ್ನು ನೀಡಿದಕ್ಕೆ ಅಮಾನತು ಮಾಡಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮ 1957ರ ನಿಯಮ 10 (1 (ಡಿ) ರ ಅನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ, ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರೆ ನಿಯಮ 98ರ ಪ್ರಕಾರ ಜೀವನಾಧಾರ ಭತ್ತೆ ಪಡೆಯಲು ಅರ್ಹರಿರುತ್ತಾರೆ, ಹಾಗೂ ಅಮಾನತ್ತಿನಲ್ಲಿನ ಅವಧಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಡಿಸಿ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.