ಗರುಡಾದ್ರಿಯಲ್ಲಿ ಅಕ್ಷರ ದಾಸೋಹ ನೌಕರರ 3ನೇ ಸಮ್ಮೇಳನ

0
57

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಕ್ಷರ ದಾಸೋಹ ನೌಕರರ 3ನೇ ಸಮ್ಮೇಳನ ನಡೆಸಲಾಯಿತು.

ಸಿಐಟಿಯು ಸಹಯೋಗದಲ್ಲಿ ನಡೆದ ಸಮ್ಮೇಳನದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಿದ್ದಮ್ಮ ಬಾಗಲಕೋಟೆ ಭಾಗವಹಿಸಿ ಉದ್ಘಾಟಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಸಿದ್ದಮ್ಮ ಬಾಗಲಕೋಟೆ,ರಾಜ್ಯದಲ್ಲಿ ಅನೇಕ ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಹೋರಾಟ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಗಳಿಗೆ ಮನವಿ ಮಾಡುತ್ತಿದ್ದರು,ಅಕ್ಷರ ದಾಸೋಹ ನೌಕರರ ಬೇಡಿಕೆಗಳನ್ನು ಸರಕಾರಗಳು ಕಡೆಗಣಿಸುತ್ತಿವೆ,ಇದರಿಂದ ಎಲ್ಲಾ ಅಕ್ಷರ ದಾಸೋಹ ನೌಕರರು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸಬೇಕಿದೆ.ಆದ್ದರಿಂದ ಸರಕಾರ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುತ್ತೇವೆ.

ಅಲ್ಲದೆ ಅಕ್ಷರ ದಾಸೋಹ ನೌಕರರು ಸಿಐಟಿಯು ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈನಾಜ್ ಬೇಗಂ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯ ಮುಖಂಡರಾದ ಶಾಂತಾ ಎನ್.ಗಂಟೆ ಜಿಲ್ಲಾ ಮುಖಂಡರಾದ ಸುನಂದಾ ಶಹಾಪುರ ತಾಲೂಕು ಕಾರ್ಯದರ್ಶಿ ಈರಮ್ಮ ಶಹಾಪುರ ಸಿಐಟಿಯು ಜಿಲ್ಲಾ ಮುಖಂಡರಾದ ಸುರೇಖಾ ಕುಲಕರ್ಣಿ ಅಂಗನವಾಡಿ ನೌಕರರ ಸಂಘದ ಬಸ್ಸಮ್ಮ ಆಲ್ಹಾಳ ರಾಧಾಬಾಯಿ ಲಕ್ಷ್ಮೀಪುರ ದಲಿತಪರ ಹೋರಾಟಗಾರ ಪ್ರಕಾಶ ಆಲ್ಹಾಳ ರೈತ ಹೋರಾಟಗಾರ ಯಲ್ಲಪ್ಪ ಚಿನ್ನಾಕಾರ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಹೋರಾಟಕ್ಕೆ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಸುವರ್ಣಾ, ಕೆಂಭಾವಿ ಅಧ್ಯಕ್ಷರಾಗಿ ಶೈಜಾದಿಬೇಗಂ, ಸುರಪುರ ಉಪಾಧ್ಯಕ್ಷರಾಗಿ ಜಯಶ್ರೀ ಪತ್ತಾರ, ಪಾರ್ವತಿ ಜಮಾದಾರ, ಮೆರಾಜ್ ಶಾಂತ, ಲಕ್ಷ್ಮೀ ದೀವಳಗುಡ್ಡ, ಗೀತಾ ಬೋನಾಳ ಹಾಗು ಪ್ರಧಾನ ಕಾರ್ಯದರ್ಶಿಯನ್ನಾಗಿ ಸುರೇಖಾ ಕುಲಕರ್ಣಿ, ಖಜಾಂಚಿಯನ್ನಾಗಿ ಸೌಭಾಗ್ಯ ಮಾಲಗತ್ತಿಯವರನ್ನು ಮತ್ತು ಸಹಕಾರ್ಯದರ್ಶಿಗಳನ್ನಾಗಿ ಮರಿಲಿಂಗಮ್ಮ ಜಯ, ಮಾಸಾಬಿ ಗಂಗಮ್ಮ ಹೆಗ್ಗಣದೊಡ್ಡಿ, ಗೀತಾ ನಗನೂರ ಭಾಗಿರಥಿ ಆಲ್ಹಾಳ ಅವರನ್ನು ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here