ಸುರಪುರ: ನಗರದ ಗೃಹ ರಕ್ಷಕ ದಳದ ಕಚೇರಿಯಲ್ಲಿ ಎಲ್ಲಾ ಗೃಹ ರಕ್ಷಕ ದಳದ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಲ್ಲರಿಗೂ ಸಮವಸ್ತ್ರ ವಿತರಿಸಿದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಮಾತನಾಡಿ,ಜಿಲ್ಲಾ ಕಮಾಂಡೆಂಟ್ ಅವರ ಮಾರ್ಗದರ್ಶನದಂತೆ ತಮಗೆ ಇಂದು ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.ತಾವು ಇವೆಲ್ಲವುಗಳನ್ನು ತೆಗೆದುಕೊಂಡು ಮುಂಬರುವ ನಾಲ್ಕು ರಾಜ್ಯಗಳ ಚುನಾವಣೆ ಕರ್ತವ್ಯಕ್ಕೆ ತಯಾರಾಗುವಂತೆ ತಿಳಿಸಿದರು.
ಸಿಡಿ ಪ್ರಕರಣ ರಾಜಕಾರಣಕ್ಕೆ ಕಪ್ಪು ಚುಕ್ಕೆ: ಬಿಜೆಪಿ ಶಾಸಕ ರಾಜೂಗೌಡ
ಅಲ್ಲದೆ ತಮಗೆಲ್ಲರಿಗೂ ಪ್ರತಿ ಮೂರು ವರ್ಷಕ್ಕೊಮ್ಮೆ ಸಮವಸ್ತ್ರಗಳನ್ನು ವಿತರಿಸಲಾಗುತ್ತಿದ್ದು ಇವುಗಳನ್ನು ಸರಿಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿ ವೆಂಕಟೇಶ ಸುರಪುರ ರಮೇಶ ಅಂಬುರೆ ಭೀಮರಾಯ ಹುಲಿಕಲ್ ಮಾನಯ್ಯ ನಾಯಕ ಕೊಟ್ರಯ್ಯ ಸ್ವಾಮಿ ಶರಣು ಮೇದಾ ಬಸಣ್ಣ ಲಕ್ಷ್ಮೀಪುರ ಚಂದ್ರಕಾಂತ ಲಕ್ಷ್ಮೀಪುರ ಸೂರ್ಯಕಾಂತ ಮಾರ್ಗಲ್ ಸೇರಿದಂತೆ ಅನೇಕ ಸಿಬ್ಬಂದಿಗಳಿದ್ದರು.