ಮಹಿಳೆಯರ ಸ್ವಾವಲಂಬನೆ ಬದುಕಿಗೆ ಸಂಘಮಿತ್ರ ಸ್ಫೂರ್ತಿ: ಪ್ರಸಾದ್

0
68

ಶಹಾಪುರ : ಸಮಾಜದಲ್ಲಿ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಲ್ಲಿ ಸಂಘ ಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಸ್ಫೂರ್ತಿಯಾಗಿದೆ ಎಂದು ಕಲಬುರಗಿಯ ಎಸ್.ಆರ್.ಎಫ್.ಎಸ್ ಮುಖ್ಯ ವ್ಯವಸ್ಥಾಪಕರಾದ ಎಚ್.ಕೆ.ಪ್ರಸಾದ್ ಹೇಳಿದರು.

ಗೋಗಿ ಗ್ರಾಮದ ಸವಿತಾ ಸಮಾಜ ಕಲ್ಯಾಣ ಮಂಟಪದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಂಘಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಸಂಸ್ಥೆ ವಿವಿಧ ಬಗೆಯ ಸಾಲಗಳ ಜತೆಗೆ ವೈಯಕ್ತಿಕ ಸಾಲವೂ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಲಬುರಗಿ ಸುಂದರ್ ನಗರ ಬಡಾವಣೆ ನಿವಾಸಿಗಳ ಮೇಲೆ ದಾಳಿ: ಬಿಗಿ ಬಂದೋಬಸ್ತ್

ಇನ್ನೊರ್ವ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಯೋಜನಾ ವ್ಯವಸ್ಥಾಪಕರಾದ ಎಚ್.ಎಂ. ಕುಲಕರ್ಣಿಯವರು ಮಾತನಾಡಿ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತ ಮುನ್ನುಗ್ಗುತ್ತಿದ್ದಾರೆ,ಅಲ್ಲದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮಹಿಳೆಯರು ಸಾಧಿಸಿ ತೋರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ, ಜತೆಗೆ ನೀರು ಮಿತವಾಗಿ ಬಳಸಬೇಕು ಏಕೆಂದರೆ ಜೀವಜಲ ಅಮೃತಕ್ಕೆ ಸಮ ಎಂದು ಸಲಹೆ ನೀಡಿದರು.

ಈ ಸಮಾರಂಭದ ವೇದಿಕೆಯ ಮೇಲೆ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಸಿನ್ನೂರ,ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಇಂದಿರಾ,ಗೋಗಿ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಹೇಮಾವತಿ,ಸಂಘಮಿತ್ರ ಏರಿಯಾ ಮ್ಯಾನೇಜರ್ ಬಸವರಾಜ ನಾಟೇಕಾರ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪ್ರವೈಜರ್ ಶ್ರೀಮತಿ ನಂದಾ, ಸಾಲ ನಿರ್ವಹಣಾಧಿಕಾರಿಗಳಾದ ಶಿವಪುತ್ರ,ಶೇಖರಪ್ಪ ಚಲವಾದಿ ಲಿಂಗಸುಗೂರು ಹಾಗೂ ಇತರರು ಉಪಸ್ಥಿತರಿದ್ದರು.ಮಲ್ಲೇಶ್ ಕಟ್ಟಿಮನಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಮಹಿಳಾ ಸಾಧಕಿಯರಾದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಸಲಿಂಗಮ್ಮ,ಗೋಗಿ ಪೋಲಿಸ್ ಠಾಣೆಯ ಮಹಿಳಾ ಎ .ಎಸ್ಸೈ. ಮಡಿವಾಳಮ್ಮ,ಆಶಾ ಕಾರ್ಯಕರ್ತೆ ಕೊಟ್ರಮ್ಮ,ನಸೀಮಾ ಬೇಗಮ್,ಅಂಗನವಾಡಿ ಮೇಲ್ವಿಚಾರಕಿ ಮಲ್ಕಮ್ಮ,ಗಂಗಮ್ಮ ವಿಶ್ವಕರ್ಮ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಲಕ್ಷ್ಮೀ ಎಂ.ಕಟ್ಟಿಮನಿ ಸ್ವಾಗತಿಸಿದರು, ತಸಿರಾ ಬಾನು ನಿರೂಪಿಸಿದರು,ಮಲ್ಲಿಕಾರ್ಜುನ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here