ಟೇಂಗಳಿ ಗ್ರಾಮದಲ್ಲಿ ಮಾಸಿಕ ವಚನೋತ್ಸವ

0
158

ಕಲಬುರಗಿ: ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದಲ್ಲಿ ಲಿಂಗೈಕ್ಯ ನಾಗಣ್ಣಾ ಆಂದೇಲಿ ಅವರ ೩ನೇ ಪುಣ್ಯಸ್ಮರಣೆ ಹಾಗು ಶಿಲಾಭವನ ನಿರ್ಮಾಣ ಉದ್ಘಾಟನೆ ನಿಮಿತ್ತ ಮಾಸಿಕ ವಚನೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ್ ಟೇಂಗಳಿ ಶಾಂತೇಶ್ವರ ಮಠದ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಚನೋತ್ಸವ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡುತ್ತಾ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ತಿಂಗಳಿಗೊಮ್ಮೆ ಮಾಸಿಕ ವಚನೋತ್ಸವ ಎಂಬ ಶಿರ್ಷಿಕೆಯಡಿಯಲ್ಲಿ ಯುವ ಘಟಕದ ವತಿಯಿಂದ ನಡೆಸುವ ಮೂಲಕ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ವಚನ ವಿಶ್ಲೇಷಣೆಯಲ್ಲಿ ಭಾಗವಹಿಸುವ ಮೂಲಕ ಮಕ್ಕಳಿಂದ ವಚನ ಪಠಣ  ಜರುಗುವುದು ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

Contact Your\'s Advertisement; 9902492681

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸರ್ಕಾರಿ ನೌಕರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ

ನಿವೃತ್ತ ಪಿ.ಎಸ್.ಐ ಶರಣಬಸಪ್ಪ ಅವಂಟಿ, ಮಲ್ಲಿನಾಥ ಬೆರನ್, ತೋಟಯ್ಯಾ ಸ್ವಾಮಿ ಸಂಗಾವಿ, ಪ್ರೊ. ಸಿದ್ರಾಮಪ್ಪ ಅಂಡಗಿ, ಡಾ. ಓಂಪ್ರಕಾಶ ಹೆಬ್ಬಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಲಾಭವನ ನಿರ್ಮಾಣ ಮಾಡಿದ 3ಜನ ಅಂದರೆ ಸಕ್ರೆಪ್ಪ ಲಾಳಿ, ಮಹಾದೇವ ವಾರದ ಮತ್ತು ಓಂಪ್ರಕಾಶ ಹೆಬ್ಬಾಳ ಅವರಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಶರಣಬಸಪ್ಪಾ ಆಂದೇಲಿ ಸ್ವಾಗತಿಸಿದರು, ಅಣವೀರಪ್ಪಾ ಆಂದೇಲಿ ವಂದಿಸಿದರು. ವಿನೋದಕುಮಾರ ಜೇನವೆರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಇಂಜಿನಿಯರ ಸಂಗಮೇಶ ಹೆಬ್ಬಾಳ, ಅವಿನಾಶ ಅಂಡಗಿ, ಸಂಗಣ್ಣಾ ಕುರಕುಂಟೆ, ಚಂದ್ರು ಕಡ್ಲಿ, ರವಿ ಶೀಲವಂತ, ಬಸವರಾಜ ಬಿರಾದಾರ, ಶ್ರೀಶೈಲ್ ಬಿರಾದಾರ, ಬಸಲಿಂಗಪ್ಪ ಗೋಗಿ, ಸಕ್ರೆಪ್ಪ ಲಾಳಿ, ಮಹಾದೇವ ವಾರದ, ಪಂಡಿತರಾವ ಅಂಕಲಗಿ, ಸಿದ್ದಪ್ಪ ಆಂದೇಲಿ, ಶಿವಶರಣಪ್ಪ ಶೀಲವಂತ, ನಿಜಲಿಂಗಪ್ಪ ಲಾಳಿ, ಅಮೃತರಾವ ಪಂಚಾಳ, ತಿಪ್ಪಣ್ಣ ಮಾಡಬೂಳ, ಬಾಬುರಾವ ಮರಾಠಾ, ಶರಣಬಸಪ್ಪ ಗೋಗಿ, ಶರಣಯ್ಯ ಬಂಕಲಗಿ, ಮಹಾದೇವ ಮಠಪತಿ, ಚನ್ನಬಸಪ್ಪ ಮದರಿ, ಭೀಮಾಶಂಕರ ಪಡಶೆಟ್ಟಿ, ಸಿದ್ದು ಪಂಚಾಳ, ಶರಣು ಸಾಲಕ್ಕಿ, ಅಣವೀರಪ್ಪ ಶೀಲವಂತ, ಖಾಜಾಪಟೇಲ, ಗುರುಲಿಂಗಯ್ಯಾ ಸ್ವಾಮಿ ಹಾಗು ಇತರರು ಉಪಸ್ಥಿತಿರದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here