ಕಾಣೆಯಾದ ಯುವತಿಯ ಪತ್ತೆಗೆ ಮನವಿ

1
23

ಕಲಬುರಗಿ: ಜೇವರ್ಗಿ ತಾಲೂಕಿನ ಹಾಲಗಡ್ಲಾ ಗ್ರಾಮದ ಭೀಮಾಶಂಕರ ಹೂಗಾರ ಇವರ 19 ವರ್ಷದ ಮಗಳಾದ ಪೂಜಾ ಅವರು 2021ರ ಮಾರ್ಚ್ 22 ರಂದು ಬೆಳಿಗ್ಗೆ 11.30 ಗಂಟೆಗೆ ಜೇವರ್ಗಿಯ ಬಸವೇಶ್ವರ ನಗರದ ಮನೆಯಿಂದ ಹೊರಗೆ ಹೋಗಿ ಮರಳಿ ಮನೆ ಬಾರದೇ ಕಾಣೆಯಾಗಿದ್ದಾರೆ ಎಂದು ಜೇವರ್ಗಿ ಪೊಲೀಸ್ ಠಾಣೆಯ ಅರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಪೂಜಾ ಇವರು ಎತ್ತರ 4 ಅಡಿ ಇದ್ದು, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಇದ್ದು, ನೀಲಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಚೂಡಿದಾರ್ ಲಗಿನ್ಸ್ ಹಾಗೂ ಕಪ್ಪು ಬಣ್ಣದ ವೇಲು ಧರಿಸಿದ್ದು, ಕನ್ನಡ ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.

Contact Your\'s Advertisement; 9902492681

ಕಾಣೆಯಾದ ಕುರಿತು ಸಂಬಂಧಿಕರಲ್ಲಿ ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಯುವತಿ ಬಗ್ಗೆ ಸುಳಿವು ಸಿಕ್ಕಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ತಿಳಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here