ಆಳಂದ: ಮಳೆ, ಗಾಳಿಗೆ ತಾಲೂಕಿನ ಅಲ್ಲಲ್ಲಿ ಬಾಗಿನಿಂದ ವಿದ್ಯುತ್ ಕಂಬಂದಿಂದ ಜೋತು ಬಿದ್ದುಕೊಂಡ ತಂತಿಗಳಿಂದಾಗಿ ಯಾವುದೇ ಕ್ಷಣದಲ್ಲೂ ಜನ ಜಾನುವಾರುಗಳಿಗೆಎ ಅಪಾಯ ಎದುರಿಸುವಂತಾಗಿದೆ. ಕೂಡಲೇ ಸಂಬಂಧಿತ ಜೆಸ್ಕಾಂ ಅಧಿಕಾರಿಗಳ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಮರಗಾ, ರಸ್ತೆ, ಕಲಬುರಗಿ ಹೆದ್ದಾರಿಯ ಕೊಡಲಂಗರಗಾ ಹತ್ತಿರದ ಸೂರ್ಯಕಾಂತ ತಟ್ಟಿ ಎಂಬುವರ ಹೊಲದಲ್ಲಿನ ವಿದ್ಯುತ್ ಟ್ರಾನ್ಸಫಾರಂನಿಂದ ಸಾಗಿದ ಕಂಬದ ತಂತಿಯು ಸಣ್ಮೂಖಪ್ಪ ಹಡಪದ ಅವರ ಹೊಲ ಸೇರಿ ಅಲ್ಲಲ್ಲಿ ಬಾಗಿನಿಂತುಕೊಂಡಿದ್ದು, ಅಲ್ಲದೆ ಅದರ ತಂತಿ ನೆಲಕ್ಕೆ ತಾಗುತ್ತಿದ್ದು, ಬಿತ್ತನೆಗೆ ಅಡ್ಡಿಪಸಿದೆ. ಸುವ್ಯವಸ್ಥೆ ಕೈಗೊಳ್ಳದೆ ಹೋದಲ್ಲಿ ಅನಾಹುತ ಸಂಭವಿಸಲಿದೆ ಎಂದು ಷಣ್ಮೂಕ ಹಡಪದ ಅವರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪಟ್ಟಣದಲ್ಲಿನ ಜೆಸ್ಕಾಂ ಸಹಾಯ ಅಭಿಯಂತರರಿಗೆ ಹಾಗೂ ಸಿಬ್ಬಂದಿಗಳಿಗೆ ಮೌಖಿಕ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಪ್ರದೇಶದಲ್ಲಿ ಜನ ಜಾನುವಾರುಗಳಿಗೆ ವಿದ್ಯುತ್ ಹರಿದು ಜೀವ ಹಾನಿಯಾದರೆ ಅಧಿಕಾರಿಗಳೇ ಹೋಣೆಯಾಗುತ್ತಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಬಹುತೇಕ ಕಡೆ ಬಾಗಿ ನಿಂತ ಕಂಬಗಳನ್ನು ದುರಸ್ಥಿ ಕೈಗೊಳ್ಳಬೇಕು. ನೆಲಕ್ಕೆ ತಾಗುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಮೂಲಕ ಮುಂದಾಗುವ ಅನಾಹುತವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.