ಆಳಂದ: ಕಲ್ಯಾಣ ಕರ್ನಾಟಕದ ಐತಿಹಾಸಿಕ ಪುಣ್ಯಕ್ಷೇತ್ರ ಜಿಡಗಾ ಸುಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿಕ ನಿವಾಸ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಪ್ರವಾಸೋದ್ಯಮ ಮತ್ತು ಜೀವವೈವಿಧ್ಯ ಮತ್ತು ಪರಿಸರ ಖಾತೆ ಸಚಿವ ಸಿ ಪಿ ಯೋಗೇಶ್ವರ ಅವರಿಗೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಮನವಿ ಮಾಡಿದರು.
ಶತಮಾನಗಳ ಪರಂಪರೆ ಹೊಂದಿರುವ ಶ್ರೀಮಠವು ಅಪಾರ ಭಕ್ತ ವೃಂದವನ್ನು ಹೊಂದಿದೆ. ನೆರೆಯ ರಾಜ್ಯಗಳಾದ ಸೀಮಾಂಧ್ರ, ತೆಲಾಂಗಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಭಕ್ತರನ್ನು ಶ್ರೀಮಠವು ಹೊಂದಿದೆ. ಭಕ್ತರ ಅನೂಕೂಲಕ್ಕಾಗಿ ಯಾತ್ರಿಕ ನಿರ್ಮಾಣವು ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಸಚಿವರು ಸರ್ಕಾರದ ಜೊತೆ ಚರ್ಚಿಸಿ ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.
ವಾಲ್ಮೀಕಿ ಕನಸು ಈಡೇರಿಸಲು ಪಣ ತೊಡಿ: ಡಾ.ಜಾಧವ
ಸಚಿವರು ಮಾತನಾಡಿ, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ನೀಡಲು ಯತ್ನಿಸಲಾಗುವುದು ಎಂದರು.