ಸುರಪುರ: ತ್ವರಿತವಾಗಿ ಪೈಪ್‌ಲೈನ್ ದುರಸ್ಥಿಗೊಳಿಸಲು ನಗರಸಭೆ ಅಧ್ಯಕ್ಷರ ತಾಕೀತು

0
41

ಸುರಪುರ: ನಗರದ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಮುನ್ನವೆ ತ್ವರಿತವಾಗಿ ಪೈಪ್‌ಲೈನ್ ದುರಸ್ಥಿ ಪೂರ್ಣಗೊಳಿಸುವಂತೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಳ್ಳಂಬೆಳಿಗ್ಗೆ ತಾಲೂಕಿನ ಕವಡಿಮಟ್ಟಿ ಬಳಿಯಲ್ಲಿ ನಡೆದಿರುವ ಪೈಪ್‌ಲೈನ್ ದುರಸ್ಥಿ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾತನಾಡಿ,ಬೇಸಿಗೆಯಿದೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಕೆಲಸ ನಿಧಾನಗೊಳಿಸದೆ ತ್ವರಿತವಾಗಿ ಮುಗಿಸಿ ನಾಳೆಯಿಂದ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಇಂಜಿನಿಯರ್ ಶಾಂತಪ್ಪ ಸೇರಿದಂತೆ ಅನೇಕರಿದ್ದರು.

ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹೆಚ್ಚಿನ‌ ಅನುದಾನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ರ

ನಂತರ ನಗರಸಭೆ ವಿರೋಧ ಪಕ್ಷದ ನಾಯಕರಾದ ರಾಜಾ ಪಿಡ್ಡನಾಯಕ (ತಾತಾ) ಮತ್ತಿತರೆ ಸದಸ್ಯರೊಂದಿಗೆ ಕುಂಬಾರಪೇಟೆಯಲ್ಲಿನ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ಪಿಡ್ಡನಾಯಕ (ತಾತಾ),ಯಾವುದೇ ಕಾರಣಕ್ಕೂ ನೀರು ಸರಬರಾಜಿಗೆ ವ್ಯತ್ಯಾಯವಾಗದಂತೆ ಬೇಗನೆ ಮೋಟರ್ ದುರಸ್ಥಿ ಕಾರ್ಯ ಕೈಗೊಂಡು ಜನರಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡುವಂತೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಸದಸ್ಯರಾದ ನಾಸೀರ್ ಕುಂಡಾಲೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here