ಹಿರಿಯರ ತ್ಯಾಗ,ಬಲಿದಾನದಿಂದ ಬಿಜೆಪಿ ಉದಯ: ದಂಡಗುಲಕರ್

0
113

ಶಹಾಬಾದ: ಹಿರಿಯರ ತ್ಯಾಗ,ಬಲಿದಾನದಿಂದ ೧೯೮೦ರಲ್ಲಿ ಉದಯವಾದ ಭಾರತೀಯ ಜನತಾ ಪಾರ್ಟಿ ಇಂದು ದೇಶದಲ್ಲಿಯೇ ದೊಡ್ಡ ಪಕ್ಷವಾಗಲು ಕಾರ್ಯಕರ್ತರ ಪರಿಶ್ರಮ ಅಪಾರವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಅವರು ಮಂಗಳವಾರ ನಗರದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬಿಜೆಪಿಯು ಎಲ್ಲ ವರ್ಗದವರ ಹಿತ ರಕ್ಷಣೆಗೆ ಬದ್ಧವಿದೆ.ಬಡವರು,ಕಾರ್ಮಿಕರು,ರೈತರು ಹಾಗೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಿದೆ. ಈ ದಿಸೆಯಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರು ಸವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ನೋಡುತ್ತಿದೆ.ಇದಕ್ಕೆ ಮೋದಿಯವರ ಸಮರ್ಥ ಆಡಳಿತ ಹಾಗೂ ದೂರದೃಷ್ಠಿಯ ನಾಯಕತ್ವವೇ ಕಾರಣವೆಂದು ಹೇಳಿದರು.

Contact Your\'s Advertisement; 9902492681

ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮನೆ ಮೇಲೆ ಧ್ವಜಾರೋಹಣ

ಬಿಜೆಪಿ ಮುಖಂಡ ಬಸವರಾಜ ಬಿರಾದಾರ ಮಾತನಾಡಿ, ೧೯೭೭ರಲ್ಲಿ ಮುರಾರ್ಜಿ ದೇಸಾಯಿ ಸರ್ಕಾರ ಪತನವಾದ ನಂತರ ೧೯೮೦ರಲ್ಲಿ ದೀನ್ ದಯಾಳ ಉಪಧ್ಯಾಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮದ ಫಲವಾಗಿ ಭಾರತೀಯ ಪಕ್ಷ ಉದಯವಾಯಿತೆಂದು ಹೇಳಿದರು.

ಬಿಜೆಪಿ ಉಪಾಧ್ಯಕ್ಷರಾದ ಮಹದೇವ ಗೊಬ್ಬೂರಕರ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ, ಕಾರ್ಯದರ್ಶಿ ಶಂಕರ ಭಗಾಡೆ, ಕೋಶಾಧ್ಷರಾದ ಅಣ್ಣಪ್ಪ ದಸ್ತಾಪುರ, ಪ್ರಮುಖರಾದ ಸುಭಾ? ಜಾಪೂರ, ಸಂಜಯ ಕೋರೆ, ವೀರೆಶ ಬಂದಳ್ಳಿ, ನಗರಸಭೆ ಸದಸ್ಯರಾದ ಜಗದೇವ ಸುಬೆದಾರ, ರಾಮು ಕುಸಾಳೆ, ಯಲ್ಲಪ್ಪ ದಂಡಗುಲಕರ, ದತ್ತು ಘಂಟೆ, ಯುವಮೊರ್ಚಾದ ದೀನೆಶ ಗೌಳಿ, ಶ್ರೀನೀವಾಸ ನೆದಲಗಿ, ಶರಣು ಕೌಲಗಿ, ಸತೀಶ ರಾಪನೂರ, ಸಚಿನ ಹಂಚಾಟೆ, ಭೀಮಯ್ಯ ಗುತ್ತೆದಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here