ಕುರಿತು ಎರಡು ದಿನಗಳ ಅಂತರ್ಜಾಲ ರಾಷ್ಟೀಯ ವೆಬಿನಾರ್ ಸಮಾರೋಪ

0
68

ಚಿಂಚೋಳಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ “ಜನಪದ ಸಮಾಜ ಮತ್ತು ಮಹಿಳೆ ” ಕುರಿತು ಎರಡು ದಿನಗಳ ಅಂತರ್ಜಾಲ ರಾಷ್ಟೀಯ ವೆಬಿನಾರ್ ಇಂದು ಎರಡನೇ ದಿನದಂದು  ಗೋಷ್ಟಿ ಮತ್ತು ಸಮಾರೋಪ ಸಮಾರಂಭ ಜರುಗಿತು.

ಇಂದು “ಸಮಾಜ ಮತ್ತು  ಮಹಿಳೆಯ ಸ್ಥಿತಿಗತಿ”  ಕುರಿತು ಜರುಗಿದ ಗೋಷ್ಟಿಯಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ರು ಡಾ. ಸೋಮಶೇಖರ ಸಾಮಾಜಿಕ ರಚನೆಯಲ್ಲಿ ಮಹಿಳಾ ಪಾತ್ರದ ಕುರಿತು ತಿಳಿಸಿದರು. ಚಿತ್ತಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕರು ಡಾ. ಎ ಜಿ ಖಾನ್  ಆವರು ಸಮಾಜ ಮತ್ತು ಮಹಿಳಾ ಸಬಲೀಕರಣ ಕುರಿತು ತಮ್ಮ ಮೌಲಿಕ ವಿಚಾರಗಳನ್ನು ಮಂಡಿಸಿದರು.

Contact Your\'s Advertisement; 9902492681

ಗುಲಬರ್ಗಾ ವಿಶ್ವವಿದ್ಯಾಲಯ ದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರು ಡಾ. ಜಗನ್ನಾಥ ಸಿಂಧೆ ಯವರು ಅಧ್ಯಕ್ಷ್ಟತೆ ವಹಿದ್ದರು. ನಂತರದಲ್ಲಿ ಸಮಾರೋಪ ಜರುಗಿತು  ಮಹಾವಿದ್ಯಾಲಯ ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ರಾಥೋಡ್ ಅವರು ಕಾರ್ಯಕ್ರಮ ಕ್ಕೆ ಎಲ್ಲರನ್ನು ಸ್ವಾಗತಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗಿಶ್ವರಗೆ ಶಾಸಕ ಬಸವರಾಜ ಮತ್ತಿಮಡು ಸನ್ಮಾನ

ಕಾಲೇಜಿನ ನ್ಯಾಕ್ ಕೋಶದ ಸಂಯೋಜಕರು ಗ್ರಾಮೀಣ ಅಭಿವೃದ್ಧಿ ವಿಭಾಗದ  ಮುಖ್ಯಸ್ಥ ಡಾ. ಸಿ ವಿ ಕಲಬುರ್ಗಿ ಅವರು ಕಾರ್ಯಕ್ರಮದ ವರದಿಯನ್ನು ಸಾದರ ಪಡಿಸಿದರು,.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಗೌರವಾನ್ವಿತ ಸದಸ್ಯ  ಡಾ. ಮಹಾದೇವಪ್ಪ, ವಿದ್ಯಾಸಾಗರ ರಾಂಪುರೆ ಅವರು ಸಮಾರೋಪ ಭಾಷಣ ಮಾಡಿ, ಜನಪದ ಎಲ್ಲ ಸಾಹಿತ್ಯ ಸಂಸ್ಕೃತಿ ಕಲೆ ಗಳ ಮೂಲ ಅದು ಸಾಮಾನ್ಯ ಜನರ ಬದುಕಿನ ಜೀವಂತ ಅನುಭವ ಗಳನ್ನು ಕಲೆ ಸಾಹಿತ್ಯ ಸಂಗೀತ ಹಾಡು ಕಥೆ ಗಾದೆ ಮುಂತಾದವುಗಳ ಮೂಲಕ ಅಭಿವ್ಯಕ್ತಿ ಹಿಂದೆ  ಈ ಅಭಿವ್ಯಕ್ತಿ ಹಿಂದೆ  ಪುರುಷ ನಷ್ಟೇ ಪಾತ್ರ ಮಹಿಳೆ ಯದ್ದೂ ಇದೆ ಹಿಂದಿಗಿಂತಲೂ ಇದು ಜಾನಪದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ವಾಂಸರು ಯುವಕರು ಅಧ್ಯಯನ ಸಂಶೋಧನೆ  ಪರಾಮರ್ಶೆ ನಡೆಸಿ ಜಾನಪದದ ಮಹತ್ವವನ್ನು ಎತ್ತಿ ತೋರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕನ್ನಡ ಜಾನಪದ ಹೆಚ್ಚು ಶ್ರೀಮಂತವಾಗಿದೆ  ಹನ್ನೆರಡನೆಯ ಶತಮಾನದ ಶಿವ ಶರಣರು ಶರಣೆಯರು ಜನಪದ ನೆಲೆಯಿಂದ ಬಂದವರು ಎಂಬುದನ್ನು ಈ ಸಂದರ್ಭದಲ್ಲಿ ಹನ್ನೆರಡನೆಯ ಶತಮಾನದ ಸಮಾಜೋಧಾರ್ಮಿಕ ಹೋರಾಟ ವನ್ನು ತಮ್ಮ ಭಾಷಣದಲ್ಲಿ ಹೇಳುತಾ ಇಂಥದೊಂದು ಅರ್ಥಪೂರ್ಣ ಚಿಂತನಶೀಲ ವಿಚಾರ ಸಂಕಿರಣ ಹಮ್ಮಿಕೊಂಡ ಮಹಾವಿದ್ಯಾಲಯ ದ ಪ್ರಾಚಾರ್ಯರು ಪ್ರಾಧ್ಯಾಪಕರು ಸಿಬ್ಬಂದಿ ಯವರನ್ನು ಕಾರ್ಯಕ್ರಮ ಸಂಯೋಜಕರು ಎಲ್ಲರನ್ನು ಪ್ರಶಂಸಿಸಿದರು.

ಶಹಾಬಾದನಲ್ಲಿ ಎಪ್ರಿಲ್ 7 ರಿಂದ 9ರವರೆಗೆ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ-ಸುರೇಶ ವರ್ಮಾ

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಅವರು ಸಮಾರೋಪ ಸಮಾರಂಭದ ಅಧ್ಯಕ್ಷೆ ವಹಿಸಿದರು .ಕನ್ನಡ ಅಧ್ಯಾಪಕರಾದ ಡಾ. ಸಿದ್ದಣ್ಣ ಕೊಳ್ಳಿ ಅವರು ವಂದನೆ ಸಲ್ಲಿಸಿದರು. ಸಮಾರೋಪ ಸಮಾರಂಭದಲ್ಲಿ  ಪ್ರೊ. ಶಿವರಾಜ ಜಿ ಮಠ   ಎಂ ಎನ್ ಪಾಟೀಲ ಶಿವರಾಜ ಹೀರಣ್ಣ ಎಸ್ ಆರ್ ಬಡಾ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here