ಗುವಿವಿ ಹೊರಡಿಸಿದ ಸುತ್ತೋಲೆಯೂ ದ್ವಂದ ನಿಲುವಿಂದ ಕೂಡಿದೆ: ಕೆಂಭಾವಿ

0
14

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಹೊರಡಿಸಿದ ಸುತ್ತೋಲೆಯೂ ಸಂಪೂರ್ಣ ದ್ವಂದ ನಿಲುವಿಂದ ಕೂಡಿದೆ ಎಂದು ಶ್ರೀರಾಮ ಸೇನೆ ಜಿಲ್ಲಾ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಮಹೇಶ ಕೆಂಭಾವಿ ಅವರು ಖಂಡಿಸಿದ್ದಾರೆ.

ಐದನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಒಂದನೇ ಸೆಮಿಸ್ಟರ್ ನ ಎಲ್ಲ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕೆಂಬ ನಿಯಮ ಕಾನೂನು ಬಾಹೀರವಾಗಿದೆ. ಅಲ್ಲದೇ ಸ್ಟೂಡೆಂಟ್ ಪೋರ್ಟಲ್ ಬ್ಲಾಕ್ ಮಾಡಿರುವುದನ್ನು ಕೆಂಭಾವಿ ಖಂಡಿಸಿದ್ದಾರೆ.

Contact Your\'s Advertisement; 9902492681

ವಿಶ್ವವಿದ್ಯಾಲಯ ಕೂಡಲೇ ಸುತ್ತೋಲೆ ಹಿಂಪಡೆಯವೇಕು. ಅಲ್ಲದೇ ಸ್ಟೂಡೆಂಟ್ ಪೋರ್ಟಲ್ ಅನ್ ಬ್ಲಾಕ್ ಮಾಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಸೇರಿ ಹೋರಾಟ ಮಾಡಬೇಕಾಗುತ್ತದೆ  ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here