ಸಿಯುಕೆಯಲ್ಲಿ ಯಶಸ್ವಿ ಪ್ರದರ್ಶನ ಕಂಡ ‘ಸರ್ವರಿಗೂ ಸಂವಿಧಾನ’ ನಾಟಕ

0
41

ಕಲಬುರಗಿ: ಇಂದು ನಮ್ಮ ಕೇಂದ್ರೀಯ ವಿಶ್ವವಿದ್ಯಾಲಯ ಒಂದು ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗುತ್ತಿದೆ ಎಂದು ನಾನು ಭಾವಿಸಿದ್ದೇನೆ. ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ರಂಗಾಯಣದ ಜೊತೆಗೂಡಿ ಇಂತಹ ಅದ್ಭುತವಾದ ವಿಷಯದ ಬಗ್ಗೆ ನಾಟಕವೊಂದನ್ನು ರಚಿಸಿದೆ.

ಸಂವಿಧಾನವನ್ನು ಅರಿಯುವುದು ಮತ್ತು ಅದನ್ನು ಅನುಷ್ಠಾನ ಮಾಡುವುದು ವ್ಯಕ್ತಗತ ಹಾಗು ಸಾಮೂಹಿಕ. ಇದನ್ನು ಜನಸಾಮ್ಯಾನರಿಗೆ ಅರಿಯುವಂತೆ ಮಾಡಿದರೆ ಈ ನಾಟಕದ ಗುರಿ ತಲುಪಿದಂತೆ. ಸಂವಿಧಾನದ ಎಲ್ಲಾ ಅಂಶಗಳಿಗೆ ಈ ನಾಟಕ ಹೇಗೆ ಒತ್ತು ನೀಡುತ್ತದೆ ಎಂಬುದು ಈ ನಾಟಕದ ಪ್ರಾಮುಖ್ಯತೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ವಿ ಅಲಗವಾಡಿ ಹೇಳಿದರು.

Contact Your\'s Advertisement; 9902492681

ಕೋವಿಡ್ ಲಸಿಕೆ ಪಡೆದ ಹೈಕೋರ್ಟ್ ಪೀಠದ ನ್ಯಾಯಾಧೀಶರು

ಅವರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರವು ರಂಗಾಯಣ ಕಲಬುರಗಿಯ ಸಹಯೋಗದೊಂದಿಗೆ ಪ್ರಸ್ತುತಪಡಿಸಿದ ‘ಸರ್ವರಿಗೂ ಸಂವಿಧಾನ’ ಎಂಬ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಭಾರತೀಯ ಪ್ರಜೆಯೆಂದು ಹೇಳಲು ನಾವು ಹೆಮ್ಮೆ ಪಡುವುದು ನಮ್ಮ ಸಂವಿಧಾನದಿಂದ. ಅದರ ನಿರ್ಮಾಣ ಮಾಡಿದವರಿಗೆ ನಾವು ಯಾವತ್ತಿಗೂ ಚಿರಋಣಿಯಾಗಿರಬೇಕು. ಸಮಾನ ಹಕ್ಕು ಸಂವಿಧಾನದ ಮಹತ್ವ ಸಾರುತ್ತದೆ. ಸಂವಿಧಾನ ಇಡೀ ಭಾರತೀಯರಿಗೆ ಮಾಡಿರುವಂತದ್ದು ಯಾವುದೇ ಒಂದು ಸಮುದಾಯಕ್ಕಾಗಿ ಅಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ವಿದ್ಯಾರ್ಥಿಗಳಿಗೆ ರುವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮೊದಲ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಮನೆ ಮನೆಗೆ ತೆರಳಿ ಕೊರೋನಾ ಲಸಿಕೆ ಹಾಕಲು ಶಿವರಾಜ ಅಂಡಗಿ ಆಗ್ರಹ

ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಸರ್ವರಿಗೂ ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿ ಬರೆದಿಲ್ಲ ಬದಲಾಗಿ ಎಲ್ಲಾ ಭಾರತೀಯದ ಹಿತಾಸಕ್ತಿ ಇದರಲ್ಲಿ ಅಡಗಿದೆ. ನಾವು ಆಡುವ ಮಾತು, ಬರಹ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಅದರಂತೆಯೇ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಸಂವಿಧಾನದ ಮೂಲಕ ವ್ಯಕ್ತವಾಗಿದೆ. ನಾವು ಯಾವತ್ತು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆಯೋ ಅಂದು ಅದಕ್ಕೆ ಅರ್ಥ ಬರಲಿದೆ. ಇಂದು ಯಾರು ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ಪ್ರಶಂಸಿಸುವ ಬದಲಾಗಿ ಟೀಕೆ ಮಾಡಲಾಗುತ್ತಿದೆ, ಈ ನಡೆ ಬದಲಾಗಬೇಕು. ನನ್ನ ಪ್ರಕಾರ ಇಡಿಯ ಭಾರತೀಯ ಸಾಹಿತ್ಯದಲ್ಲಿ ಸಂವಿಧಾನದ ಬಗ್ಗೆ ನಾಟಕ ಬಂದಿರುವುದು ಇದೇ ಮೊದಲು. ಈ ಕೀರ್ತಿ ನಾಟಕದ ಕರ್ತೃ ಅಪ್ಪಗೆರೆ ಸೋಮಶೇಖರ್ ಅವರಿಗೆ ಸಲ್ಲುತ್ತದೆ ಎಂದರು.

ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು ಮಾತನಾಡಿ, ಸರ್ವರಿಗೂ ಸಂವಿಧಾನ ನಮ್ಮ ರಂಗಾಯಣದ ಕನಸಿನ ಕೂಸು ಇದನ್ನು ಅಪ್ಪಗೆರೆ ಸೋಮಶೇಖರ್ ಅವರು ಚೆನ್ನಾಗಿ ರಚಿಸಿ ಕೊಟ್ಟಿದ್ದಾರೆ. ಯಾರೂ ಮುಟ್ಟದ ವಿಷಯನ್ನು ಕಲಬುರಗಿಯ ರಂಗಾಯಣ ಕೈಗೆತ್ತಿಕೊಂಡಿದೆ ಹಾಗು ಅದರಲ್ಲಿ ಯಶಸ್ವಿಯಾಗಿದೆ ಎಂದರು.

ನಿಧನ ವಾರ್ತೆ: ಸುಭಾಶ್ಚಂದ್ರ ಸುಲೇಗಾಂವ ನಿಧನ

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಂಗಾಯಣ ಕಲಬುರಗಿಯ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಾಯಣದ ಮಹತ್ವಾಕಾಂಶೆ ಯೋಜನೆಯಾದ ಸಂವಿಧಾನದ ಬಗೆಗಿನ ನಾಟಕವನ್ನು, ಕರ್ನಾಟಕದ ಯಾವುದೇ ರಂಗಾಯಣ ಕೈಗೆತ್ತಿಕೊಳ್ಳಲಿಲ್ಲ ಆದರೆ ನಾವು ಕೈಹೆತ್ತಿಕೊಂಡು ಅದು ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಧನ್ಯವಾದ ತಿಳಿಸಿ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಈ ನಾಟಕ ಸಿದ್ಧಪಡಿಸಿದ್ದು ಬಹಳ ಸಾಂಧರ್ಭಿಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕರಾದ ಅನಿಲ್ ರೇವೂರ, ನಾಟಕ ತಂಡದ ಸಂಚಾಲಕರಾದ ಹರಿಕೃಷ್ಣ ಎಸ್. ಬಿ, ಸಿಯುಕೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೋವಿಡ್-19ರ ನಿಯಮಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here