ಕೂಡ್ಲು ಗ್ರಾಮದಲ್ಲಿ ಬಡವರ ಮನೆ ಕೆಡವಿದ ಜಿಲ್ಲಾಡಳಿತ: ಬೀದಿಗೆ ಬಿದ್ದ ನೂರಾರು ಕುಟುಂಬ

1
140

ಬೆಂಗಳೂರು: ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದಲ್ಲಿ ಬಡವರು ಕಟ್ಟಿಕೊಂಡಿದ್ದ ಜಾಗವನ್ನು ಕೆಡವಿ ಹೋರಾಟಗಾರರನ್ನು ಬಂಧಿಸುವ ಘಟನೆ ಇಂದು ನಡೆದಿದೆ.

ಕೂಡ್ಲು ಗ್ರಾಮ ಸರ್ವೆ ನಂ.೧೪೮ರ ೪-೨೭ ಗುಂಟೆ ಜಾಗದಲ್ಲಿ ಸ್ಥಳೀಯರು ಮೂರುವರೆ ಎಕರೆ ಜಾಗದಲ್ಲಿ ಗ್ರಾಮದ ವಸತಿ ರಹಿತರು ಮೆನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ೧೫೦ ಮನೆಗಳಲ್ಲಿ ಮುನ್ನೂರರಿಂದ ನಾಲ್ಕುನೂರು ಜನ ವಾಸ ಮಾಡಿತ್ತಿದ್ದರು. ಇಂದು ಬೆಳಗ್ಗೆ ಎಂಟು ಗಂಟೆ ಸಮಯಕ್ಕೆ ಸ್ತಳಕ್ಕೆ ಬಂದ ಐದು ನೂರಕ್ಕೂ ಹೆಚ್ಚು ಜನ ಪೊಲೀಸರು ನಿವಾಸಿಗಳನ್ನು ಬಲವಂತವಾಗಿ ಹೊರಗೆಳೆದು ಜೆಸಿಬಿ ಮೂಲಕ ಮನೆಗಳನ್ನು ಕೆಡವಿಹಾಕಿದ್ದಾರೆ.

Contact Your\'s Advertisement; 9902492681

ಇದನ್ನು ವಿರೋಧಿಸಿ ಸ್ಥಳೀಯರು ಹಾಗೂ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ೧೦೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಆಡುಗೋಡಿ ಮೈದಾನದಲ್ಲಿ ಕೂಡಿಹಾಖಿದ್ದಾರೆ.

ಸ್ಟಾಂಡ್ ಅಪ್ ಇಂಡಿಯಾ ಯೋಜನೆ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕ :ಅಂಬಾರಾಯ ಅಷ್ಠಗಿ

ಪ್ರೊ. ಬಿ.ಕೆ. ಚಂದ್ರಶೇಖರ್ ಅವರು ಈ ಜಾಗದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರಿಗಡೆ ಸೇರದ ಟ್ರಸ್ಟ್‌ಗೆ ಸರ್ಕಾರ ಹಲವು ಪ್ರದೇಶಗಳಲಿ ಜಾಗ ನೀಡಿದ್ದರೂ ಸಹ ಚಂದ್ರಶೇಖರ್ ಅವೆಲ್ಲವನ್ನೂ ನಿರಾಕಸಿ ಬಡವರು ವಆಸಿಸುತ್ತಿರುವ ಜಾಗದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ ಚಂದ್ರಶೇಖರ್ ಕಡೆಯವರೆನ್ನಲಾದ ೨೦೦ಜನ ಬಾಡಿಗೆ ಗೂಂಡಾಗಳ ಉಸಹ ಸ್ಥಳಕ್ಕೆ ಬಂದು ಬೆಳಗಿನಿಂದ ಸ್ಥಳೀಯರನು ಬೆದರಿಸುತ್ತಿದ್ದಾರೆ. ಪೊಲೀಸರು ಸಹ ಸಥಳೀಯರಲ್ಲದ ಇವರನು ಮಾತನಾಡಿಸದೆ ಪ್ರತಿಭಟಿಸುದಿವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕೋವಿಡ್ ಲಸಿಕೆ ಪಡೆದ ಹೈಕೋರ್ಟ್ ಪೀಠದ ನ್ಯಾಯಾಧೀಶರು

ಹಲವಾರು ವರ್ಷಗಳಿಂದ ಇಲ್ಲಿ ಸ್ಥಳೀಯರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕಳೆದ ಹನ್ನೆರಡು ಹದಿಮೂರು ವರ್ಷಗಳಿಂದ ಸ್ಥಳೀಯರು ತಮಗೆ ನಿವೇಷನ ನೀಡುವಂತೆ ಹೋರಾಟ ಮಾಡುತ್ತಿದ್ದಾರೆ. ಬೆಂಗಖುರು ನಗರದ ಹಲವು ಜಿಲ್ಲಾಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ ಮನೆ ಕಟ್ಟಿಕೊಳ್ಳಲು ಜಾಗ ಸಹ ನಿಗದಿ ಮಾಡಿದ್ದರು. ಬಿ.ಕೆ. ಚಂದ್ರಶೇಖರ್ ಸಹ ನನಗೆ ಈ ಜಾಗ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರೂ. ಆದರೆ ಈಗ ಈ ಜಾಗ ಕೋಟ್ಯಾಂತರ ರೈಪಾಯಿ ಬೆಲೆ ಬಾಳುತ್ತದೆ ಎಂಬ ಕಾರಣಕ್ಕೆ ಬಡವರನ್ನು ಇಲ್ಲಿಂದ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇಲ್ಲಿನ ಜನರ ಪರವಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ. ಹಲವು ಭಾರಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಿದೆ. ಇಂದೂ ಕೂಡಾ ಹೋರಾಟ ಮಾಡುತ್ತಿದ್ದ ದಸಂಸ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here