ವಾಡಿ: ಪ್ರಪಂಚದ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ಎದುರಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆ ಪಡೆಯಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾಹೆರಾ ಮಝರ್ ಹೇಳಿದರು.
ಪಟ್ಟಣದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾದ ಕೋವಿಶೀಲ್ಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಒಂದು ವರ್ಷಗಳ ಕಾಲ ಕಾಡಿದ ಕೊರೊನಾ ಎಂಬ ಸಾಂಕ್ರಾಮಿಕ ರೋಗ ಮತ್ತೊಮ್ಮೆ ತಲ್ಲಣ ಉಂಟುಮಾಡಿದೆ. ಎರಡನೇ ಅಲೆ ಸುನಾಮಿಯಂತೆ ವೇಹವಾಗಿ ಹರಡುತ್ತಿದೆ. ಸೋಂಕಿಗೆ ತುತ್ತಾದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ಲಸಿಕೆ ಪಡೆದರೂ ಸೋಂಕಿನೊಂದಿಗೆ ಬದುಕಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಕೆಮ್ಮು, ನೆಗಡಿ, ಜ್ವರ, ಸೀತ ಹೇಗೆ ಶತ ಶತಮಾನಗಳಿಂದ ಜೀವನ ಸಂಗಾತಿಗಳಾಗಿ ನಮ್ಮ ಜತೆಗಿವೆಯೋ ಹಾಗೆಯೇ ಕೊರೊನಾ ಸೊಂಕು ಕೂಡಾ ನಮ್ಮ ಜತೆಗಿರಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಮೂಲಕ ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದರು.
ಸ್ತ್ರೀ ವಾದದ ಪ್ರತೀಕ ಮತ್ತು ಪ್ರಥಮ ಮಹಿಳಾ ವಚನಗಾರ್ತಿ ಮಹಾಶಿವಶರಣೆ ಅಕ್ಕಮಹಾದೇವಿ..!
ಅಡ್ಡ ಪರಿಣಾಮ ಉಂಟಾಗುವ ಆತಂಕದಿಂದ ಕೋವಿಶೀಲ್ಡ್ ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯ ಮಹತ್ವ ಅರಿತ ಬಹುತೇಕ ಹಿರಿಯರು ಆಸ್ಪತ್ರೆಗೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಬಡಾವಣೆಗಳಿಗೆ ತೆರಳಿ ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಪುರಸಭೆ ನೀಡಿರುವ ವಾಹನ ವ್ಯವಸ್ಥೆಯ ಲಾಭ ಪಡೆದುಕೊಂಡು ಆಸ್ಪತ್ರೆಗೆ ಬರಲು ಅವಕಾಶ ಒದಗಿಸಿದ್ದೇವೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ರೈಲ್ವೆ ಆಸ್ಪತ್ರೆ ಹಾಗೂ ಎಸಿಸಿ ಆಸ್ಪತ್ರೆಗಳಲ್ಲಿ ರವಿವಾರವೂ ಸೇರಿದಂತೆ ಪ್ರತಿದಿನ ಬೆಳಗ್ಗೆ ೧೦:೦೦ ರಿಂದ ಸಂಜೆ ೦೪:೩೦ ವರೆಗೆ ಲಸಿಕೆ ನೀಡಲಾಗುತ್ತಿದೆ. ೪೫ ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಆಧಾರ್ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ಅಲ್ಲದೆ ಮಹಾರಾಷ್ಟ್ರದಿಂದ ರೈಲು ಮೂಲಕ ಬರುತ್ತಿರುವ ಪ್ರಯಾಣಿಕರನ್ನು ನಿಲ್ದಾಣದಲ್ಲೇ ತಡೆದು ಕೋವಿಡ್ ಸೋಂಕು ಪರೀಕ್ಷೆಗಾಗಿ ಸ್ಯಾಂಪಲ್ ಪಡೆಯಲಾಗುತ್ತಿದೆ ಎಂದು ವಿವರಿಸಿದರು.
ಕೂಡ್ಲು ಗ್ರಾಮದಲ್ಲಿ ಬಡವರ ಮನೆ ಕೆಡವಿದ ಜಿಲ್ಲಾಡಳಿತ: ಬೀದಿಗೆ ಬಿದ್ದ ನೂರಾರು ಕುಟುಂಬ
ಶುಶ್ರೂಷಕ ಅಧಿಕಾರಿ ರೇಣುಕಾ ಛಲವಾದಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ, ಲ್ಯಾಬ್ ಟೆಕ್ನಿಷನ್ ಅಶ್ವಿನಿ ಗುತ್ತೇದಾರ,ಸೈಯ್ಯದ್ ಅಶ್ಫಾಕ್ ಅಲಿ, ಸ್ಟಾಪ್ ನರ್ಸ್ ನೀಲಮ್ಮಾ ಪಾಲ್ಗೊಂಡಿದ್ದರು.