ಎಚ್‌ಸಿಜಿ ಕ್ಯಾನ್ಸರ್ ಕೇಂದ್ರ: ಏ.೧೧ ರಿಂದ ಉಚಿತ ಕ್ಯಾನ್ಸರ್ ತಪಾಸಣೆ

0
56

ಕಲಬುರಗಿ: ನಗರದ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಲ್ಲಿ ಏಪ್ರಿಲ್ ೧೧ ರಿಂದ ೩೦ ರವರೆಗೆ ಬಾಯಿ ಮತ್ತು ಕುತ್ತಿಗೆ ಕ್ಯಾನ್ಸರ್ ಉಚಿತ ತಪಾಸಣೆ (ಸ್ಕ್ರೀನಿಂಗ್) ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕ್ಯಾನ್ಸರ್ ತಜ್ಞ ವೈದ್ಯ ಡಾ.ಶಾಂತಲಿಂಗ ನಿಗುಡ್ಗಿ ಅವರು ತಿಳಿಸಿದರು.

ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಬಾಯಿ ಕ್ಯಾನ್ಸರ್ ವಿಶ್ವದ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇದು ಪ್ರಚಲಿತದಲ್ಲಿರುವ ಮೊದಲ ಮೂರು ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಕ್ಯಾನ್ಸರ್ ಪತ್ತೆ ಹಚ್ಚುವುದು ಮತ್ತು ಆರಂಭಿಕ ಚಿಕಿತ್ಸೆಗೆ ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ. ಸಾರ್ವಜನಿಕ ಜಾಗೃತಿಯೊಂದಿಗೆ ಜೀವಗಳನ್ನು ಉಳಿಸುವುದು ನಮ್ಮ ಸಂಸ್ಥೆಯ ಏಕೈಕ ಗುರಿಯಾಗಿದೆ. ಪ್ರತಿ ತಿಂಗಳು ನಮ್ಮ ಆಸ್ಪತ್ರೆ ವತಿಯಿಂದ ಉಚಿತ ತಪಾಸಣೆ ಮತ್ತು ಜಾಗೃತಿ ಶಿಬಿರಗಳು ಆಯೋಜಿಸುತ್ತ ಬರಲಾಗುತ್ತಿದೆ ಎಂದರು.

Contact Your\'s Advertisement; 9902492681

ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕನಿಷ್ಟ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

ಬಾಯಿ ಕ್ಯಾನ್ಸರ್ ಪತ್ತೆಗೆ ಸಿ ಟೆಸ್ಟ್: ಕಲಬುರಗಿಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಾಯಿ ಕ್ಯಾನ್ಸರ್ ರೋಗ ನಿರ್ಣಯ ಮಾಡಲು ಸಿ-ಟೆಸ್ಟ್ (ಸ್ವಿವೆಲ್ ಬಯಾಪ್ಸಿ ಟೆಸ್ಟ್) ಅನ್ನು ಪರಿಚಯಿಸುತ್ತಿದೆ ಎಂದು ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಶರಣಕುಮಾರ್ ಶೆಟ್ಟಿ ಅವರು ತಿಳಿಸಿದರು.

ಈ ಪರೀಕ್ಷೆ ಆರಂಭಿಕ ಹಂತದ ಬಾಯಿ ಕ್ಯಾನ್ಸರ್ ಪತ್ತೆ ಮಾಡುತ್ತದೆ. ಇದು ಸರಳ, ನೋವು ರಹಿತ ಮತ್ತು ಬಳಸಲು ಸುಲಭವಾಗಿದ್ದು ಅರಿವಳಿಕೆ ಅಥವಾ ಹೊಲಿಗೆಯ ಅಗತ್ಯವಿಲ್ಲ. ಎಲ್ಲ ವರ್ಗದವರಿಗೆ ಸುಲಭವಾಗಿ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಿದೆ. ಉಚಿತ ತಪಾಸಣೆ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಸಿ ಟೆಸ್ಟ್ ಅನ್ನು ಉಚಿತವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸೋಮನಾಥ ರಾಯಕೋಡಿ, ವೀರೇಶ ಕುಮಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here