ಶಹಾಬಾದ: ಈಗಾಗಲೇ ರೈತ ವಿರೋಧಿ ಕಾಯ್ದೆ ಜಾರಿ ಮಾಡಿದಲ್ಲದೇ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿರುವಾಗ ಈಗ ಕೇಂದ್ರ ಸರಕಾರ ಏಕಾಏಕಿ ರಸಗೊಬ್ಬರ ಬೆಲೆ ಏರಿಕೆ ಮಾಡಿ ರೈತರ ಬೆನ್ನಿಗೆ ಬರೆ ಹಾಕಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಪೀರ ಪಾಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಎಪಿ ರಸಗೊಬ್ಬರ ಬೆಲೆ 1250 ಇದ್ದದ್ದು ಸುಮಾರು 1800 ರೂಗಳಿಗೆ ಏರಿಕೆ ಮಾಡಲಾಗಿದೆ.ಇದರಿಂದ ರೈತರಿಗೆ ಹೊಡೆತ ಬಿದ್ದಿದೆ.ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಇನ್ನು ಇಫ್ಕೋ ಗೊಬ್ಬರ 1185 ಇದ್ದದ್ದು 1800 ರೂಪಾಯಿಗೆ ಏರಿಕೆಯಾಗಿದೆ.20-20 ರಸಗೊಬ್ಬರವನ್ನು 925ಕ್ಕೆ ಮಾರಾಟವಾಗುತ್ತಿತ್ತು.ಈಗ ಅದರ ಬೆಲೆ 1350 ರೂಗೆ ಏರಿಕೆ ಮಾಡಲಾಗಿದೆ.ಇದರಿಂದ ರೈತರಿಗೆ 425 ಹೆಚ್ಚು ಹಣ ಪಾವತಿಸಬೇಕು.ಕಳೆದ ಹಲವು ವರ್ಷಗಳಿಂದ ಈ ಪ್ರಯಾಣದ ಬೆಲೆ ಏರಿಕೆ ಕಂಡಿಲ್ಲ.ಧಿಡೀರನೆ ಬೆಲೆ ಹೆಚ್ಚಳಕ್ಕೆ ಸರಕಾರದ ರೈತ ವಿರೋಧಿ ನೀತಿಯೇ ಕಾರಣವಾಗಿದೆ.
ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ.ಕೃಷಿ ಕೂಲಿ ಕಾರ್ಮಿಕರ ವೇತನ ಹೆಚ್ಚಾಗಿದೆ.ಬೀಜಗಳ ಬೆಲೆ ಸೇರಿದಂತೆ ರಸಗೊಬ್ಬರ ಬೆಲೆ ಏರಿಕೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.
ಹಸಿರು ಶಾಲು ಹೊದ್ದುಕೊಂಡು ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಂಗಾಲಾಗೊದ್ದಾನೆ.ಅಲ್ಲದೇ ಕೊರೊನಾ ಮಹಾಮಾರಿ ಹೊಡೆತದಿಂದ ನಲುಗಿ ಹೋಗಿರುವಾಗ ದಿಡೀರನೆ ರಸ ಗೊಬ್ಬರಗಳ ಬೆಲೆ ಏರಿಕೆ ಮಾಡಿರುವುದು ನ್ಯಾಯಯುತವಲ್ಲ.ರೈತ ಪರವಾದ ಸರ್ಕಾರ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲವಾದರೆ ರೈತರೊಡನೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.