ಕಲಬುರ್ಗಿ: ನಗರ ಸರ್ವಜ್ಞ ಪದವಿ ಪೂರ್ವ ಕಾಲೇಜುದಲ್ಲಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಲಬುರ್ಗಿ ಜಿಲ್ಲಾ ಘಟಕವು ನಗರದ ವಿವಿಧ ಕಾಲೇಜುಗಳಲ್ಲಿ ಹಸಿರು ಕ್ರಾಂತಿಯ, ಹರಿಕಾರ ಡಾ,ಬಾಬು ಜಗಜೀವನರಾಮ್ ರವರ 114 ನೇ ಜನ್ಮದಿನ ಮತ್ತು ಭಾರತ ರತ್ನ, ಸಂವಿಧಾನ ಶಿಲ್ಪ, ಬಾಬಾಸಾಹೇಬ್ ಡಾ,ಬಿ ಆರ್ ಅಂಬೇಡ್ಕರ್ ರವರ ಜನ್ಮದಿನದ ” ಸಂಭ್ರಮ ಅಂಗವಾಗಿ ” ವಿಚಾರ ಕ್ರಾಂತಿ ಸಪ್ತಾಹ-2021 ಕಾರ್ಯಕ್ರಮವನ್ನು ದಲಿತ ಪರ ಹೋರಟಗಾರದ ಡಾ,ವಿಠ್ಠಲ್ ದೊಡ್ಡಮನಿ ರವರ ಉದ್ಘಾಟಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಸಿರು ಕ್ರಾಂತಿ ಹರಿಕಾರ ಡಾ,ಬಾಬು ಜಗಜೀವನರಾಮ್ ರವರ ಈ ದೇಶಕ್ಕೆ ಕೃಷಿ ಸಚಿವರಾಗಿ ದೇಶದ ಜನತೆ ಅನ್ನ,ಆಹಾರ ನೀಡಿದ ಮಹಾನ್ ಪುರುಷರು ಅಲ್ಲದೇ ದಲಿತ ಜನಾಂಗದವರು ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತ ರತ್ನ, ಸಂವಿಧಾನ ಶಿಲ್ಪ, ಬಾಬಾಸಾಹೇಬ್ ಡಾ,ಬಿ ಆರ್ ಅಂಬೇಡ್ಕರ್ ರವರ ಈ ದೇಶಕ್ಕೆ ನೀಡಿದ ಕೊಡುಗೆಯನ್ನು ತುಂಬಾ ಅಪಾರ,ಅದರಲ್ಲೂ ಮಹಿಳೆಯರ ಹಕ್ಕುಗಳ, ಮಾನವರ ಹಕ್ಕುಗಳ, ಅಲ್ಲದೆ ದಲಿತ ಸಮುದಾಯದ ಜನರ ಕಷ್ಟದ ಬಗ್ಗೆ ಮತ್ತು ಈ ದೇಶಕ್ಕೆ ನೀಡಿದ ಭಾರತ ಸಂವಿಧಾನ ನೀಡುವ ಮೂಲಕ ಎಲ್ಲರಿಗೂ ಹಕ್ಕನ್ನು ನೀಡಿದ ಮಹಾನ್ ಪುರುಷ,ಈ ಮಹಾನ್ ಪುರುಷರು ನೀಡಿದ ಯೋಜನೆಗಳು ಹಾಗೂ ಸಂವಿಧಾನ ಉಳಿಸಿಕೊಳ್ಳಲು ನಾವು ಹೋರಾಟ ಮಾಡುವ ಅವಶ್ಯಕತೆ ಇದೆ.ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಕಾಲೇಜಿನ ಉಪನ್ಯಾಸಕರಾದ ಡಾ,ಗಾಂಧೀ ಜಿ ಮೂಳೆ ರವರ ಮಾತನಾಡಿ ಬಾಬುಜೀ ಮತ್ತು ಬಾಬಾಸಾಹೇಬ್ ರವರ ಜೀವನ ಚರಿತ್ರೆಯನ್ನು ಮತ್ತು ರವರ ನಡೆದ ಬಂದ ದಾರಿ ಬಗ್ಗೆ ಕಾಲೇಜುಗಳಲ್ಲಿ ಇಂದು ಕರವೇ ಸಾರಥ್ಯದಲ್ಲಿ ಈ ಸಪ್ತಾಹದಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅಭಿನಂದನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೋ,ಎಮ್,ಸಿ ಕಿರದಹಳ್ಳಿ ರವರ ಮಾತನಾಡಿ ಈ ಕಾರ್ಯವನ್ನು ನಮ್ಮ ಕಾಲೇಜುದಲ್ಲಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಈ ಮಹಾನ್ ಪುರುಷರ ಜಾಗೃತಿ ಮಾಡಿದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ರಾಜ್ಯ ಸಂಚಾಲಕರಾದ ಮಂಜುನಾಥ ಶ ನಾಲವಾರಕರ್ ರವರ ಮಾತನಾಡಿ ಏಪ್ರಿಲ್ ತಿಂಗಳಲ್ಲಿ ದಲಿತ ಮಹಾನ್ ಪುರುಷರ ಜನ್ಮದಿನದ ಅಂಗವಾಗಿ ಸಂಭ್ರಮದ “. ವಿಚಾರ ಕ್ರಾಂತಿ ಸಪ್ತಾಹ -2021 ಕಾರ್ಯವನ್ನು ಆಯೋಜಿಸಿದ, ಸಂತೋಷವಾಗಿದೆ.ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಿಗೆ ಧನ್ಯವಾದಗಳು ಸಲ್ಲಿಸಿದರು. ಈ ಚಿತ್ರದಲ್ಲಿ ಹೋರಾಟಗಾರ ಸಚೀನ ಫರತಾಬಾದ್, ಕಾಲೇಜಿನ ಶಿಕ್ಷಕರಾದ ಗಂಗಧರ ಬಡಿಗೇರ ರವರ ನಿರೂಪಣೆ ಮಾಡಿದರು.