ದೃಷ್ಟಿಕೋನ ಬದಲಾವಣೆ ಮಾಡುವುದೇ ಶಿಕ್ಷಣದ ಉದ್ದೇಶ: ಬಡಶೇಷಿ

0
30

ಕಲಬುರಗಿ: ದೃಷ್ಟಿಕೋನವನ್ನು ಬದಲಾವಣೆ ಮಾಡುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ನಿವೃತ್ತ ಪ್ರಾಶುಂಪಾಲ ನರೆಂದ್ರ ಬಡಶೇಷಿ ಅಭಿಪ್ರಾಯಪಟ್ಟರು.

ನಗರದ ಕಲಾಮಂಡಳದಲ್ಲಿ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ ಏರ್ಪಡಿಸಿದ್ದ ೨೦೧೯-೨೦ ನೆಯ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಜ್ಞಾನದ ಸಂಕೇತವಾಗಿದ್ದು, ಅದನ್ನು ಬಳಸಿಕೊಳ್ಳುವಲ್ಲಿ ನಮ್ಮ ಹಿಡಿತವನ್ನು ಸಾಧಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವೇ (೧ರಿಂದ೫) ಪ್ರಧಾನ. ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಕಲಿತುಕೊಳ್ಳುವ ಶಿಕ್ಷಣವನ್ನು ಒದಗಿಸುವ ಕೇಂದ್ರ. ಹೀಗಾಗಿ ಅಲ್ಲಿಂದಲ್ಲೇ ಸಂಸ್ಕಾರಗಳು ಹುಟ್ಟಲು ಕಾರಣ ಎಂದು ಅವರು ಹೇಳಿದರು.

ರಸಗೊಬ್ಬರ ಬೆಲೆ ಏರಿಕೆ ಪೀರ ಪಾಶಾ ಆಕ್ರೋಶ

ಪರಂಪರೆ, ಶಿಕ್ಷಣ ನೀತಿ, ಶಿಕ್ಷಣ ಮೌಲ್ಯಗಳು ನಮ್ಮನ್ನು ಆಳುತ್ತವೆ ಎಂದ ಅವರು, ಸಣ್ಣ ಸಮುದಾಯದಲ್ಲಿ ದೊಡ್ಡ ಸಾಧನೆಗಳು ಗಮನಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಜಾಗತಿಕ ಮಟ್ಟದಲ್ಲಿ ವಿಚಾರ ಸಂಪಾದಿಸಿದರೆ, ಸ್ಥಳೀಯ ಮಟ್ಟದಲ್ಲಿ ಕಾರ್ಯಗತಗೊಳಿಸುವ ಕ್ರಿಯೆ ಕುರಿತು ವಿವರಿಸಿದ ಅವರು, ಶಿಕ್ಷಣ ಮೂಲಕ ಸ್ಪರ್ಧೆ ಕೈಗೊಂಡು ಉನ್ನತ ಮಟ್ಟಕ್ಕೆ ಜ್ಞಾನವನ್ನು ತೆಗೆದುಕೊಂಡು ಹೋಗುವ ಕೆಲಸವಾಗಬೇಕು. ಜ್ಞಾನವು ಶ್ರೀಮಂತಿಕೆಗೆ ಸಮಾನ ಎಂದು ಹೇಳಬಹುದು. ತಂತ್ರಜ್ಞಾನದಿಂದ ಕೆಲ ಸಂದರ್ಭಗಳಲ್ಲಿ ವೈಯುಕ್ತಿಕ ಬುದ್ಧಿವಂತಿಕೆ ಶೂನ್ಯವಾಗುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಪರಾವಲಂಬನೆಯಾಗುವುದು ಬೇಡ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಭಾವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕ ವಿಜೇತ ಶಿವಲಿಂಗಪ್ಪ ಎಂ.ಸಿಂಗಶೆಟ್ಟಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಆರಂಭದಲ್ಲಿ ಕು.ಸೃಜನಾ ಮತ್ತು ಕು.ಸಂಪದಾ ಅವರು ಪ್ರಾರ್ಥನೆ ಹಾಡಿದರು. ಸಂಘದ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಸ್ವಾಗತಿಸಿದರು. ಪತ್ರಕರ್ತ ಸಂಗಮನಾಥ ರೇವತಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ರಾವಬಹಾದ್ದೂರ ರೂಗಿ ವಂದಿಸಿದರು.

ಬಸವಕಲ್ಯಾಣ ಬೈ ಎಲೆಕ್ಷನ್: ವೈದಿಕಶಾಹಿ ಮತ್ತು ಶರಣರ ನಡುವಿನ ಸಂಘರ್ಷ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಪಡೆದ ಕಲಬುರಗಿ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ನಗದು, ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here