ಸುರಪುರ: ತಾಲೂಕಿನ ತಿಂಥಣಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು ಹಾಗು ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯ ಬಿಎಸ್ಸಿ ವಿದ್ಯಾರ್ಥಿಗಳಿಂದ ರೈತರಿಗೆ ಕೃಷಿ ಕುರಿತು ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಲ್ಲಿ ಭಾಗವಹಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರೋ: ಶ್ಯಾಮರಾವ ಕುಲಕರ್ಣಿ ಮಾತನಾಡಿ,ರೈತರು ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.ಅಲ್ಲದೆ ರೈತರು ಮಾರುಕಟ್ಟೆಯಲ್ಲಿ ಕಂಪನಿಗಳಿಂದ ಪರೀಕ್ಷೆಗೊಳಪಟ್ಟಿರುವ ಅಧಿಕೃತ ಲೇಬಲ್‌ನ ಗೊಬ್ಬರ ಮತ್ತು ಬೀಜ ಹಾಗು ಕ್ರಿಮಿನಾಶಕಗಳನ್ನು ಬಳಸುವಂತೆ ಹಾಗು ಕಳಪೆ ಗೊಬ್ಬರ ಮತ್ತು ಬೀಜಗಳನ್ನು ಗುರಿತಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಅನೇಕ ಜನ ವಿದ್ಯಾರ್ಥಿಗಳು ಹಾಗು ಮುಖಂಡರಾದ ಗಂಗಾಧರ ನಾಯಕ ಬಸಣ್ಣ ಚಿಂಚೋಡಿ ಅಯ್ಯಾಳಪ್ಪ ಕುರಕುಂದಿ ಭೀಮಶಪ್ಪಗೌಡ ಮಹಿಬೂಬಸಾಬ್ ಹವಲ್ದಾರ ಭೀಮಣ್ಣ ಕವಲ್ದಾರ ಮಲ್ಲಪ್ಪ ಐದಬಾವಿ ಸೇರಿದಂತೆ ಅನೇಕ ಜನ ರೈತರು ಪಾಲ್ಗೊಂಡಿದ್ದರು.