ಕಲಬುರಗಿ: ಜೇವರ್ಗಿ ತಾಲೂಕಿನ ಹಿರಿಯ ರಂಗಕರ್ಮಿ ಅನೇಕ ನಾಟಕಗಳು ರಚನೆ ಮಾಡಿ ಪ್ರದರ್ಶನೆ ಮಾಡಿದ ಕರ್ನಾಟಕ ರಾಜ್ಯ ನೀಡುವ ನಾಟಕರತ್ನ ಗುಬ್ಬಿ ವೀರಣ್ಣನವರ ಪ್ರಶಸ್ತಿ ಪಡೆದ ಏಕೈಕ ಕಲ್ಯಾಣ ಕರ್ನಾಟಕದ ಶ್ರೇಷ್ಠ ನಾಟಕಕಾರ ಮತ್ತು ಕವಿ ಎಲ್.ಬಿ.ಕೆ ಆಲ್ದಾಳ ಅವರ ನಿಧನರಾಗಿದ್ದಾರೆ.
ಹಿರಿಯ ರಂಗಕರ್ಮಿ ಲಾಲ ಮಹ್ಮದ ಬಂದೇನವಾಜ ಖಲೀಫ್ (85)(ಎಲ್ಬಿಕೆ ಆಲ್ದಾಳ) ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ(ಏ.13) ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ನೆರವೇಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು. 125ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು .
ಜೇವರ್ಗಿ ತಾಲೂಕಿನ ಶಾಸಕರಾದ ಹಾಗೂ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕರಾದ ಡಾ. ಅಜಯ್ ಸಿಂಗ್ ರವರು ಎಲ್.ಬಿ.ಕೆ ಆಲ್ದಾಳ ನಿಧಾನಕ್ಕೆ ಕಂಬನಿ ಮಿಡಿದ ಶಾಸಕ ಶ್ರೇಷ್ಠ ರಂಗಕರ್ಮಿ ಕವಿಗಳಾದ ಎಲ್. ಬಿ.ಕೆ ಆಲ್ದಾಳ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.