ಕವಿತಾಳ : ಮಸ್ಕಿ ತಾಲೂಕಿನ ಬಹುದಿನಗಳ ಬೇಡಿಕೆ ಹಾಗೂ ಮಸ್ಕಿ ತಾಲ್ಲೂಕಿನ 58 ಹಳ್ಳಿಗಳ ರೈತಾಪಿ ವರ್ಗದ ಜೀವನಾಡಿಯಾದ NRBC5A ನಾಲಾ ಯೋಜನೆ ಯನ್ನು ಜಾರಿ ಮಾಡುವಲ್ಲಿ ವಿಫಲವಾದ ಹಾಗೂ ರೈತರ ಹೋರಾಟ ವನ್ನು ನಿರ್ಲಕ್ಷ್ಯ ಮಾಡಿದ ಅನರ್ಹ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರನ್ನು ಸೋಲಿಸಲು ಹಾಗೂ ಪ್ರಜಾಪ್ರಭುತ್ವ ವನ್ನು ಎತ್ತಿ ಹಿಡಿಯಲು ಮತ ಜಾಗೃತಿ ಕಾರ್ಯಕ್ರಮ ವನ್ನು ನಾಲಾ ಹೋರಾಟ ಸಮಿತಿ ಯಿಂದ ಯೋಜನೆ ವ್ಯಾಪ್ತಿಯ ವಟಗಲ್, ಅಮೀನಗಡ, ಪಾಮನಕಲ್ಲೂರು, ಯಕ್ಲಾಸಾಪುರ ಸೇರಿ ಇತರ ಗ್ರಾಮಗಳಲ್ಲಿ ಜಾಥಾ ಮಾಡಲಾಯಿತು.
ಈ ಜಾಗೃತಿ ಜಾಥ ಕಾರ್ಯಕ್ರಮ ವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಕಳೆದ 13 ವರ್ಷಗಳಿಂದ ಆಡಳಿತ ಮಾಡಿದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ರು ಜನತೆಯ ಆಶೋತ್ತರಗಳನ್ನು ಮತ್ತು ಬೇಡಿಕೆಗಳನ್ನು ಗಾಳಿಗೆ ತೂರಿ ಸ್ವಾರ್ಥಕ್ಕಾಗಿ ಪಕ್ಷ ಬದಲಾಯಿಸಿ ಈಗ ನೈತಿಕತೆಯನ್ನು ಮೀರಿ ಮತ್ತೊಮ್ಮೆ ಚುನಾವಣೆಗೆ ಮುಂದಾಗಿದ್ದಾರೆ.
ಸೋಲಿನ ಹತಾಶೆಗೆ ಒಳಗಾಗಿ ಇಡೀ ರಾಜ್ಯ ಸರ್ಕಾರವನ್ನು ಮಸ್ಕಿಗೆ ಕರೆಯಿಸಿಕೊಂಡು ಗೆಲ್ಲಲು ಶತ ಪ್ರಯತ್ನ ಮಾಡುತ್ತಿದ್ದಾರೆ ಜೊತೆಗೆ ಹಣದ ಹೊಳೆಯನ್ನು ಹರಿಸಿ ಜನತೆಗೆ ಮತ್ತು ಪ್ರಜಾಪ್ರಭುತ್ವ ಕ್ಕೆ ಅಪಮಾನ ಮಾಡಲು ಮುಂದಾಗಿದ್ದಾರೆ ಜನತೆ ಯಾವುದೇ ಅಮೀಷಕ್ಕೆ ಒಳಗಾಗದೆ ವಿರುದ್ಧ ಮತ ಚಲಾವಣೆ ಮಾಡಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ ಜನತೆಯ ಶಕ್ತಿಯನ್ನು ಎತ್ತಿ ತೋರಿಸಬೇಕೆಂದು ಹೇಳಿದರು.
ನಂತರ ಹೋರಾಟ ಸಮಿತಿಯ ಕಾರ್ಯದರ್ಶಿ ನಾಗರೆಡ್ಡೆಪ್ಪ ದೇವರಮನಿ ಮಾತನಾಡಿ 13 ವರ್ಷಗಳ ಹೋರಾಟಕ್ಕೆ ಸ್ಪಂದಿಸದೆ ಪ್ರತಾಪಗೌಡ ಪಾಟೀಲ್ ರನ್ನು ಮನೆಗೆ ಕಳುಹಿಸುವ ಸಮಯ ಬಂದಿದೆ ಕಳುಹಿಸಿ ಎಂದರು.
ನಂತರ ಮಾತನಾಡಿದ ಮತ್ತೊಬ್ಬ ಹೋರಾಟ ಗಾರರಾದ ಮಹಾಂತೇಶ್ ಪಾಟೀಲ್ ಮಾತನಾಡಿ ಪ್ರತಾಪಗೌಡ ಹಾಠವೋ ಮಸ್ಕಿ ಬಚಾವೋ ರೀತಿಯಲ್ಲಿ ಈ ಚುನಾವಣೆ ಯನ್ನು ಎದುರಿಸಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಗೌರಧ್ಯಕ್ಷರಾದ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷರಾದ ಬಸವರಾಜ ಹಾರ್ವಾಪುರ, ಕಾರ್ಯದರ್ಶಿ ಶಿವನಗೌಡ ವಟಗಲ್, ಮೊಹಮ್ಮದ್ ರಫಿ, ವೆಂಕಟೇಶ, ಅಯ್ಯಣ್ಣ ಸೇರಿದಂತೆ ಅನೇಕರಿದ್ದರು.