ಕಲಬುರಗಿ: ಜಿಲ್ಲಾಡಳಿತ ಕೋವಿಡ್ ಮಹಾಮಾರಿ ಎಚ್ಚರಿಕೆ ವಹಿಸಲು ಸಾಕಷ್ಟ ಪ್ರಯತ್ನ ನಡೆಸುತ್ತಿದ್ದು, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಆಸಕ್ತಿ ತೊರದಿರುವ ಹಲವು ಘಟನೆಗಳು ಜಿಲ್ಲಾದ್ಯಂತ ನಡೆಯುತ್ತಿದೆ.
ಇಲ್ಲಿನ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯತಿಯಲ್ಲಿ ಕಾಲುವೆಗಳ ನೀರು ತುಂಬಿ ಕೊಳಚೆ ನೀರು ಹರಿದು ಬಂದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುವಂತ ಭೀತಿ ಉಂಟುಮಾಡುತ್ತಿದೆ.
ಗ್ರಾಮದ ವಾರ್ಡ್ 1ರಲ್ಲಿ ಮನೆಯ ಬಾಗಿಲ ಮುಂದೆ ಗಲಿಜು ನೀರು ನಿಂತು ದುರ್ವಾಸನೆ ನಾರುತ್ತಿದೆ. ಈ ಕುರಿತು ಹಲವಾರು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ರೀತಿಯ ಕ್ರಮ ಕೈಗೊಳದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಕುಡಿಯುವ ನೀರು ಕೊಳವೆ ಬಾವಿಯಿ ಸುತ್ತಲೂ ಕೊಜ್ಜು ನೀರು ಅದೆ ಬೊರವೆಲ್ ನಿಂದ ನೀರು ಕುಡಿಯೊಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಸಾಲಿಮಠ ರಾಜು ಸೊಂತ ಚಂದ್ರಕ ತಿಳಿಸಿದ್ದಾರೆ.