ಶಹಾಪುರ: ಪ್ರಸ್ತುತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಗೌರವಯುತವಾಗಿ ಬಾಳ್ವೆ ನಡೆಸುತ್ತಿದ್ದರೆ ಅದಕ್ಕೆ ಮೂಲ ಕಾರಣಕರ್ತರು ಬಾಬಾ ಸಾಹೇಬ ಅಂಬೇಡ್ಕರರು. ಅವರು ಬರೆದ ಸಂವಿದಾನದಿAದ ಇಂದು ನಾವೆಲ್ಲರು ಸೇರಿ ಸಮಾನ ವೇದಿಕೆ ಹಂಚಿಕೊAಡಿದ್ದೆವೆ ಎಂದು ಶಂಕರಗೌಡ ಮಾಲಿ ಪಾಟೀಲ ಹೇಳಿದರು.
ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ ಭವನದಲ್ಲಿ ಅಂಬೇಡ್ಕರವರ ೧೩೦ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶತಮಾನದಿಂದ ಸೌಲಭ್ಯ ವಂಚಿತ ಎಲ್ಲ ವರ್ಗದವರಿಗೂ ಸಂವಿಧಾನದ ಮೂಲಕ ನ್ಯಾಯ ವದಗಿಸಿ, ಅವರ ಬಾಳಿನ ಭಾಗ್ಯವಿದಾತರಾದವರು ಅಂಬೇಡ್ಕರರು ಎಂದು ಅವರು ನುಡಿದರು.
ನಂತರ ಗ್ರಾಮ ಪಂಚಾಯತಿಯ ಸದಸ್ಯರಾದ ಸಂಗಪ್ಪ ಮ್ಯಾಗಿನಮನಿ ಮಾತನಾಡಿ, ಜಾತಿ, ಧರ್ಮದ ಹೆಸರಲ್ಲಿ ಕೊಟ್ಯಾಂತರ ಜನರಿಂದ ವಂಚಿತವಾದ ಹಕ್ಕುಗಳನ್ನು ನೀಡಿ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ತಂದವರು ಅಂಬೇಡ್ಕರವರು ಎಂದರು.
ಇದೇ ಸಂಧರ್ಭದಲ್ಲಿ ಹೋತಪೇಠ ಗ್ರಾ. ಪಂ. ಅಧ್ಯಕ್ಷರಾದ ಲಕ್ಷಿö್ಮಕಾಂತ ನಾಟೇಕರ್, ಉಪಾಧ್ಯಕ್ಷರಾದ ಅಶೋಕ ಪ್ಯಾಟಿ, ಸದಸ್ಯರಾದ ದೇವೆಗೌಡ ಹಾಲಬಾವಿ, ಮಹಾಂತೇಶ ದೊಡ್ಡಮನಿ, ಧರ್ಮಣ್ಣ ನಾಯ್ಕೊಡಿ, ಪುರುನಾಯಕ, ಗ್ರಾಮದ ಸಾಹೇಬಗೌಡ ಮಲ್ಲೆದ, ಮಾಂತಗೌಡ ಪೊ.ಪಾ, ಸಂಗಣಗೌಡ ಪ್ಯಾಟಿ, ಮಹಾದೇವ ಹಾಲಬಾವಿ, ಸಂಗನಬಸಪ್ಪ ಹಾದಿಮನಿ, ದೇವಿಂದ್ರಪ್ಪ ಹಳಿಮನಿ, ಗುರುಸಂಗಪ್ಪ ಪೂಜಾರಿ, ಅಂಬ್ಲಪ್ಪ ಮ್ಯಾಗಿನಮನಿ, ಮಹಾದೇವಪ್ಪ ಶೇಖಸಿಂದಿ, ರಾಮಚಂದ್ರಪ್ಪ ಮರಕಲ್, ರಘುಕುಮಾರ ದೊಡ್ಡಮನಿ, ಮರೆಪ್ಪ ಮರಕಲ್, ರಮೇಶ ಹೊಸಮನಿ, ಪ್ರಭುಲಿಂಗ ಏವೂರ, ಅಂಬ್ರೇಶ್ ಕಾಟವiಗೇರಾ, ಶೇಖಪ್ಪ ಗುಡಿಮನಿ, ಚನ್ನಬಸಪ್ಪ ದೊಡ್ಡಮನಿ, ಚನ್ನಬಸಪ್ಪ ಕಾಡಮಗೆರಾ, ವಿಶ್ವರಾಧ್ಯ ಕೊಡ್ಡಿನ್, ಶ್ರೀಶೈಲ ದೊಡ್ಡಮನಿ, ಈರಣ್ಣ ಹಳಿಮನಿ, ರಾಜು ಕೊಡ್ಡಿನ್, ಪರಶುರಾಮ ಮರಕಲ್, ಅಂಬ್ರೇಶ ಹಳಿಪೇಟಿ ಸೇರಿದಂತೆ ಯುವಕರು, ಮಹಿಳೆಯರು, ಮಕ್ಕಳು ಇತರರು ಭಾಗಿಯಾಗಿದ್ದರು.