ಭೂಮಿ ಕಳೆದುಕೊಂಡು ರಂಗಭೂಮಿ ಕಟ್ಟಿದ ಸಂತ ಆಲ್ದಾಳ: ಅಗಲಿದ ರಂಗಕರ್ಮಿಗೆ ಶ್ರದ್ಧಾಂಜಲಿ

0
31

ವಾಡಿ: ಎಷ್ಟೋ ಜನ ರಂಗಭೂಮಿ ಕಲಾವಿದರು ದುಶ್ಚಟಗಳಿಗೆ ದಾಸರಾಗಿ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೆ ದಿ.ಎಲ್.ಬಿ.ಕೆ.ಆಲ್ದಾಳ ಅವರು ರಂಗಭೂಮಿ ಕಟ್ಟಿ ಬೆಳೆಸಲು ತಮಗಿದ್ದ ಮೂರು ಎಕರೆ ಭೂಮಿಯನ್ನೇ ಕಳೆದುಕೊಂಡ ರಂಗ ಸಂತ ಎಂದು ಘಜಲ್ ಕವಿ ಡಾ.ಮಲ್ಲಿನಾಥ ಎಸ್.ತಳವಾರ ಹೇಳಿದರು.

ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಹಾಗೂ ಕಸಾಪ ವಲಯ ಘಟಕಗಳ ವತಿಯಿಂದ ನಗರದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ರಂಗಕರ್ಮಿ ದಿ:ಎಲ್.ಬಿ.ಕೆ.ಆಲ್ದಾಳ ಅವರ ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಶರಣರ ನಾಡಿನ ಪರಿಸರ ಅಧ್ಯಯನ ಮಾಡುವ ಮೂಲಕ ಕವಿ ಆಲ್ದಾಳರು ಸಂತರು ನಡೆದಾಡಿದ ನೆಲದಲ್ಲಿ ವಾಸ್ತವ್ಯ ಹೂಡಿ ಅರ್ಥಪೂರ್ಣ ೧೨೦ಕ್ಕೂ ಹೆಚ್ಚು ಪೌರಾಣಿಕ ನಾಟಕಗಳನ್ನು ನಾಡಿಗೆ ಕೊಟ್ಟಿದ್ದಾರೆ.

Contact Your\'s Advertisement; 9902492681

ಕೆ.ಕೆ.ಆರ್.ಡಿ.ಬಿಯಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ

ದುಡ್ಡಿನ ಹಿಂದೆ ಹೋಗದ ಆಲ್ದಾಳರ ಹಿಂದೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಪ್ರಚಾರಕ್ಕಾಗಿ ಹಾತೊರೆಯದ ಸರಣ ವ್ಯಕ್ತಿತ್ವದ ರಂಗ ಸಾಹಿತಿ ಪ್ರತಿಯೊಬ್ಬರ ಹೃದಯವನ್ನು ತಟ್ಟಿದ್ದಾರೆ. ಸಾಹಿತ್ಯ ಅಕಾಡೆಮಿ ಕವಿ ಆಲ್ದಾಳರ ಸಾಹಿತ್ಯವನ್ನು ಪ್ರಕಟಿಸಿ ಜನರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಮಾತನಾಡಿ, ನಮ್ಮನ್ನು ಗಲಿದ ಹಿರಿಯ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳರು ತಾವೊಬ್ಬ ಮುಸ್ಲೀಮ ಎಂದು ಗುರುತಿಸಿಕೊಳ್ಳದೆ ಕೋಮು ಸೌಹಾರ್ದತೆ ಮೆರೆದ ಆದರ್ಶ ಬರಹಗಾರರಾಗಿದ್ದಾರೆ. ನಾಟಕ ಕ್ಷೇತ್ರಕ್ಕೆ ಸಂಪತ್ಭರಿತ ಸಾಹಿತ್ಯ ಕೊಟ್ಟ ಕವಿ ಆಲ್ದಾಳರನ್ನು ಸರಕಾರ ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಪರಿಚಯಿಸುವಲ್ಲಿ ವಿಫಲವಾಗಿದೆ. ಆಲ್ದಾಳರು ಒಂದುವೇಳೆ ದಕ್ಷಿಣ ಕನ್ನಡ ಸಾಹಿತಿಯಾಗಿದ್ದರೆ ಇಷ್ಟೊತ್ತಿಗೆ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದ್ದರು.

ಶಾಸಕ ಮತ್ತಿಮುಡ, ಅಸ್ಟಗಿ ಅವರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಆ ಭಾಗದಲ್ಲಿ ಕವಿ ಕಲಾವಿದರಿಗೆ ಸಿಗುವ ಪ್ರೋತ್ಸಾಹ ನಮ್ಮ ಕಲ್ಯಾಣ ನಾಡಿನಲ್ಲಿ ಸಿಗುವುದಿಲ್ಲ ಎಂಬುದಕ್ಕೆ ತೆರೆಮರೆಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿರುವ ಅನೇಕ ಸಾಹಿತಿಗಳು ಉದಾಹರಣೆಯಾಗಿದ್ದಾರೆ. ಚಿತ್ತಾಪುರದಲ್ಲಿ ಕೋಟಿ ರೂ. ವೆಚ್ಚದ ರಂಗಮಂಟಪ ನಿರ್ಮಿಸುವ ಮೂಲಕ ಕವಿ ಎಲ್.ಬಿ.ಕೆ.ಆಲ್ದಾಳ ಹೆಸರಿಡುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದರು.

ಬರಹಗಾರ ಮಲ್ಲೇಶ ನಾಟೀಕಾರ ಮಾತನಾಡಿದರು. ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ, ಪ್ರಧಾನ ಕಾರ್ಯದರ್ಶಿ ಶ್ರವಣಕುಮಾರ ಮೊಸಲಗಿ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಸಂಚಲನ ಸಾಹಿತ್ಯ ವೇದಿಕೆ ನಿಕಟಪೂರ್ವ ಅಧ್ಯಕ್ಷ ಮಡಿವಾಳಪ್ಪ ಹೇರೂರ, ಮಲಿಕಪಾಶಾ ಮೌಜನ್, ರಾಯಪ್ಪ ಕೊಟಗಾರ, ವೀರಣ್ಣ ಯಾರಿ, ದೇವಿಂದ್ರ ದೊಡ್ಡಮನಿ, ರವಿಕುಮಾರ ಕೋಳಕೂರ ಪಾಲ್ಗೊಂಡಿದ್ದರು. ಇದಕ್ಕೂ ಮುಂಚೆ ಮೌನ ಆಚರಿಸಿ ಅಗಲಿದ ಹಿರಿಯ ಕವಿ ದಿ.ಎಲ್.ಬಿ.ಕೆ.ಆಲ್ದಾಳ ಅವರಿಗೆ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here