ಅಂಬೇಡ್ಕರ್ ಅವೈeನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿದ ಕಾಂತ್ರಿಕಾರಿ: ಅಂಜಲಿ ಗಿರೀಶ ಕಂಬಾನೂರ

0
52

ಶಹಾಬಾದ : ಶಹಾಬಾದ: ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈeನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದಂತಹ ಮಹಾನ್ ವ್ಯಕ್ತಿ ಡಾ. ಬಿ.ಆರ್.ಅಂಬೇಡ್ಕರ್ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಬುಧವಾರ ಅಂಬೇಡ್ಕರ್ ಪ್ರತಿಮೆಯ ಆವರಣದಲ್ಲಿ ಅಂಬೇಡ್ಕರ್ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಡಾ|ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ ಎಂದರು. ತಹಸೀಲ್ದಾರ ಸುರೇಶ ವರ್ಮಾ ಧ್ವಜಾರೋಹಣ ನೇರವೇರಿಸಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಕೃಷ್ಣಪ್ಪ ಕರಣಿಕ್, ಪೂಜಾರಿ ಮೇತ್ರೆ, ಪ್ರವೀಣ ರಾಜನ್, ಬಸವರಾಜ ಮಯೂರ, ಗೌತಮ ಬಿದನಕರ್, ಸತೀಶ ಕೋಬಾಳಕರ್,ರಾಜೇಶ ಯನಗುಂಟಿಕರ್, ಶಿವರಾಜ ಕೋರೆ, ತಿಪ್ಪಣ್ಣ ಧನ್ನೇಕರ, ಶರಣು ಧನ್ನೇಕರ್, ಮಹಾದೇವ ತರನಳ್ಳಿ, ನಾಗರಾಜ ಕರಣಿಕ್ ಇತರರು ಇದ್ದರು.

ಪೊಲೀಸ್ ಇಲಾಖೆ:ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಯಲ್ಲಮ್ಮ ಡಾ.ಬಿಆರ್.ಅಂಬೇಡ್ಕರ್ ಅವರ  ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಎಸ್‌ಐ ತಿರುಮಲೇಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಶಹಾಬಾದ ಪತ್ತಿನ ಸಹಕಾರಿ ಸಂಘ : ಶಹಾಬಾದ ಪತ್ತಿನ ಸಹಾಕಾರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷರಾದ ಶರಣು ವಸ್ತ್ರದ್, ಲೋಹಿತ್‌ಕಟ್ಟಿ, ಡಾ.ಅಹ್ಮದ್ ಪಟೇಲ್, ನಿಂಗಣ್ಣ ಸಂಗಾವಿಕರ್, ನಾಗಣ್ಣಗೌಡ, ಶರಣಬಸಪ್ಪ ತುಂಗಳ, ಶಾಂತರೆಡ್ಡಿ ದಂಡಗುಲಕರ್, ಸಾಹೇಬಗೌಡ ಬೋಗುಂಡಿ ಉಪಸ್ಥಿತರಿದ್ದರು.

ಶಿವಯೋಗಿ ಸ್ವಾಮಿ ಪ್ರೌಢಶಾಲೆ: ಮುಖ್ಯಗುರುಗಳಾದ ಶಿವಯೋಗಿ ಕಟ್ಟಿ ಪೂಜೆ ಸಲ್ಲಿಸಿ ಮಾತನಾಡಿದರು. ಶಿಕ್ಷಕರು ಸುಧಾಬಾಯಿ, ಗಣೇಶ ಜಾಯಿ, ಮಹೇಂದ್ರಕುಮಾರ ದೊಡ್ಡಮನಿ,ಸುರೇಶ ಕುಲಕರ್ಣಿ ಉಪಸ್ಥಿತರಿದ್ದರು.

ಎಸ್.ಜಿ.ವರ್ಮಾ ಶಾಲೆ : ಮುಖ್ಯಗುರುಗಳಾದ ದಮಯಂತಿ ಸೂರ್ಯವಂಶಿ,ಅನಿತಾ ಶರ್ಮಾ ಪೂಜೆ ಸಲ್ಲಿಸಿದರು. ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here