ಮೂಢ ನಂಬಿಕೆ ಬಿಡಿ ವೈಚಾರಿಕತೆ ರೂಢಿಸಿಕೊಳ್ಳಿ: ಸಿದ್ಧರಾಮಾನಂದಪುರಿ ಸ್ವಾಮಿಜಿ

0
82

ಸುರಪುರ: ಮೂಢ ನಂಬಿಕೆಗಳನ್ನು ಬಿಟ್ಟು ವೈಚಾಅರಿಕತೆಯನ್ನು ರೂಢಿಸಿಕೊಂಡಾಗ ಸಮಾಅಜದ ಅಭಿವೃಧ್ಧಿ ಸಾಧ್ಯ ಎಂದು ತಿಂಥಣಿ ಬ್ರೀಜ್‌ನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮಿಜಿ ನುಡಿದರು.

ನಗರದ ಕುಂಬಾರಪೇಟೆಯ ಕುರುಬರಗಲ್ಲಿಯಲ್ಲಿ ರವಿವಾರ ಸಂತ ಕನಕದಾಸರ ಮೂರ್ತಿ ಅನಾವರ್ಣಗೊಳಿಸಿ ಅವರು ಮಾತನಾಡಿ ಸಮುದಾಯವು ಗುರು ಕನಕರ ಆದರ್ಶಗಳನಿಟ್ಟುಕೊಂಡು ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಂಡು ಸಮಾಜಕ್ಕೆ ಹಾಗೂ ದೇಶದ ಕೀರ್ತಿ ಹೆಚ್ಚಿಸಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಸಮಾಜದ ಅಭಿವೃದ್ದಿಗೆ ಮಕ್ಕಳಿಗೆ ಶಿಕ್ಷಣ ಕಲಿಸುವುದರ ಮುಖಾಂತರ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಹಾಗೂ ನಾನು ಹಿಂದೆ ಶಾಸಕನಾಗಿದ್ದ ಸಮಯದಲ್ಲಿ ಕನಕಭವನ ನಿರ್ಮಾಣ ಮಾಡಲು ೨೫ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಯನ್ನು ಭೊ ಸೇನಾ ನಿಗಮಕ್ಕೆ ವಹಿಸಲಾಗಿತ್ತು, ವಿವಿಧ ಕಾರಣಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿಯು ನೆನೆಗುದಿಗೆ ಬಿದ್ದಿದೆ ತಕ್ಷಣವೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಕಾಮಗಾರಿಯನ್ನು ಪೂರ್ಣಗಳಿಸಲು ಸೂಚಿಸಲಾಗುವುದು ಅಗತ್ಯಬಿದ್ದರೆ ಹೆಚ್ಚುವರಿ ಅನುದಾನವನ್ನು ಕೂಡಲಾಗುವುದು ಎಂದು ತಿಳಿಸಿದರು.ಮೂರ್ತಿ ಅನಾವರಣಕ್ಕೂ ಪೂರ್ವದಲ್ಲಿ ನಗರಸಭೆ ಬಳಿಯ ಸಂಗೊಳ್ಳಿ ರಾಅಯಣ್ಣ ವೃತ್ತದಿಂದ ಕನಕದಾಸರ ಮೂರ್ತಿಯವರೆಗೆ ಭಕ್ತ ಕನಕ ದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಗಂವಾರಮಠದ ಶ್ರೀ ಸೋಪಾನಾಥ ಸ್ವಾಮಿಜಿ, ಹಾಲುಮತ ಗುರುಪೀಠ ಅಗತೀರ್ಥ ಶ್ರೀ ರೇವಣಸಿದ್ದ ಶಾಂತ ಮಹಾ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು, ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ, ಯಲ್ಲಪ್ಪ ಕುರುಕುಂದಿ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ನಿಂಗಣ್ಣ ಚಿಂಚೂಡಿ, ನಗರಸಭೆ ಸದಸ್ಯರಾದ ಅಯ್ಯಪ್ಪ ಶಾಂತಪುರ, ಜುಮ್ಮಣ್ಣ ಕೆಂಗುರಿ, ತಾಪಂ ಸದಸ್ಯ ದೊಡ್ಡಕೊತ್ಲೆಪ್ಪ ಹಾವಿನ, ಮಲ್ಲೇಶಿ ಪಾಟೀಲ, ರಂಗಂನಗೌಡ ದೇವಿಕೇರಿ, ಸೇರಿದಂತೆ ಭೀಮಣ್ಣ ಮಾಸ್ಟರ ಭಪ್ಪರಗಿ, ದೇವು ಹೆಬ್ಬಳ ನೀರುಪೀಸಿ ವಂದಿಸಿದರು, ಧರ್ಮುರಾಜ ಮಂಗಿಹಾಳ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here