ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಕಲ್ಯಾಣ ಅಭಿಯಾನ ಹೋರಾಟದಂತೆ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ವೈಜನಾಥ ಪಾಟೀಲರವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ೩೭೧ನೇ(ಜೆ) ಕಲಂ ಹೋರಾಟದ ಸಂದರ್ಭ ದಲ್ಲಿ ಯಾದಗಿರಿ ಜಿಲ್ಲೆಯ ಉಸ್ತುವಾರಿಯಾಗಿ ಬೆಂಗಳೂರು ಮತ್ತು ದೆಹಲಿ ನಿಯೋಗಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿರುವ ಪಾಟೀಲರನ್ನು ಗುರುತಿಸಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಸದರಿಯವರು ತಕ್ಷಣದಿಂದ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡು ಸಮಿತಿಯ ಸಿದ್ಧಾಂತದಂತೆ ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ.
ಈಗಾಗಲೇ ಕೇಂದ್ರ ಸಮಿತಿ ನಿರ್ಧರಿಸಿರುವಂತೆ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಏಪ್ರಿಲ್ ೨೧ ರಂದು ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಜಾಗೃತಿ ಅಭಿಯಾನ ಕೊರೊನಾ ಮಹಾಮಾರಿಯ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ದಿನಾಂಕ ನಿಗದಿ ಮಾಡಬೇಕೆಂದು ಸ್ಥಳಿಯ ಹಿರಿಯರು ನೀಡಿರುವ ಸಲಹೆಗೆ ಸಮಿತಿ ಸಮ್ಮತಿಸಿ ಆದಷ್ಟು ಶೀಘ್ರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಜಿಲ್ಲಾ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ.
ಯಾದಗಿರ ಜಿಲ್ಲಾ ಅಧ್ಯಕ್ಷರನ್ನಾಗಿ ವೈಜನಾಥ ಪಾಟೀಲರನ್ನು ನೇಮಕ ಮಾಡಿದ ಕೇಂದ್ರ ಸಮಿತಿ ಜಿಲ್ಲಾ ಕೋರ ಕಮಿಟಿಯ ಸದಸ್ಯರನ್ನಾಗಿ ಮಲ್ಲಣ್ಣಗೌಡ ಹಳಿಮನಿ, ಸಿದ್ದರಾಜು ರೆಡ್ಡಿ, ಸಿದ್ದಣಗೌಡ ಪೋಲಿಸ ಪಾಟೀಲ ಕೋಡ್ಲಾ, ಶ್ರೀಮತಿ ಶ್ರೀದೇವಿ ಶೆಟ್ಟಿಹಳ್ಳಿ, ವಿನೋದಕುಮಾರ ನಾಯಕ ಜಾಲಹಳ್ಳಿ, ರಮೇಶ ದೊಡ್ಡಮನಿ, ಸುರೇಶ ಅಲ್ಲಿಪುರೆ, ರಾಜಕುಮಾರ ಕೆ. ಮೇಲಕೇರಿ, ಅಶೋಕ ಕೆ. ಜಾಧವ, ಬಸವಂತರಾಯ ಗೌಡ ನಾಯಕಲ ಇವರುಗಳನ್ನು ನೇಮಕ ಮಾಡಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಆದೇಶ ಹೊರಡಿಸಿರುತ್ತಾರೆ.