ದೇಶದ ಪ್ರತಿಯೊಬ್ಬರು ಡಾ.ಅಂಬೇಡ್ಕರ ಅವರ ಋಣದ ಮಕ್ಕಳು: ಡಾ.ಅಪ್ಪಗೇರೆ ಸೋಮಶೇಖರ

0
24

ಕಲಬುರಗಿ: ನಗರದ ಡಾ.ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಗುರುವಾರ ಡಾ. ಬಿ.ಆರ್. ಅಂಬೇಡ್ಕರ ಅವರ ೧೩೦ನೇ ಜಯಂತೋತ್ಸವ ಕಾರ್ಯಾಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪುಗೇರೆ ಸೋಮಶೇಕರ ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಅವರು, ದೇಶದ ಎಲ್ಲಾ ಸಮುದಾಯದವರು ಡಾ. ಅಂಬೇಡ್ಕರ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಮಹಿಳಾ ಮತ್ತು ಜನಾಂಗೀಯ ವಿರೋಧಿಯಾದ ಮನೋಧರ್ಮ ಸುಟ್ಟು ಅದರ ಪರ್ಯಾಯವಾಗಿ ಸವಿಂಧಾನ ರಚನೆ ಮಾಡಿದ್ದಾರೆ. ಇದರ ಮೂಲಕ ಡಾ. ಅಂಬೇಡ್ಕರರವರು ಎಲ್ಲಾ ಸಮುದಾಯದವರಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕೃಷಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಡಾ. ಅಂಬೇಡ್ಕರವರನ್ನು ಈ ದೇಶದ ಸಂಪ್ರದಾಯವಾದಿಗಳು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೆಪಿಇ ಸಂಸ್ಥೆ ಪ್ರಧಾನ ಕಾರ್ಯಾದರ್ಶಿ ಡಾ. ಮಾರುತಿರಾವ ಡಿ. ಮಾಲೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯರಾದ ನಾವುಗಳು ಮನಸ್ಸನ್ನು ಬದಲಾವಣೆ ಮಾಡಿಕೊಂಡು ವೈಚಾರಿಕ ಕ್ರಾಂತಿಯನ್ನು ಕೈಗೊಳ್ಳಬೇಕು. ಭಾರತ ದೇಶದ ಪ್ರತಿಯೊಬ್ಬರು ಬಾಬಾಸಾಹೇಬ ಡಾ. ಅಂಬೇಡ್ಕರವರು ರಚನೆ ಮಾಡಿದ ಸಂವಿಧಾನ ಮೂಲಕ ನಡೆದರೆ ಜಗತ್ತಿನಲ್ಲಿ ಮಾದರಿ ರಾಷ್ಟ್ರವಾಗುತ್ತದೆ ಎಂದರು.

ಪ್ರಾಚಾರ್ಯಾರಾದ ಡಾ.ಐ.ಎಸ್.ವಿದ್ಯಾಸಾಗರ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ, ದೇಶದಲ್ಲಿ ಸಂವಿಧಾನ ಜಾರಿಯಾಗಿ ೭೦ ವಸಂತಗಳು ಕಳೆದರು ಕೂಡ ಡಾ. ಅಂಬೇಡ್ಕರವರ ತತ್ವಗಳಲ್ಲಿ ಮುಖ್ಯವಾದ ರಾಜ್ಯ ಸಮಾಜವಾದ ಜಾರಿಯಾಗಿಲ್ಲ. ಅದನ್ನು ಜಾರಿಯಾಗುವಂತೆ ನಮ್ಮ ಸರ್ಕಾರಗಳು ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಳೇಜಿನ ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರರವರ ಜಯಂತಿಯ ನಿಮಿತ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೆಪಿಇ ಸಂಸ್ಥೆಯ ವಿವಿಧ ಶಾಲಾ ಕಾಲೇಜಿನ ಮುಖ್ಯಸ್ಥರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಾ. ಅಂಬೇಡ್ಕರ ವಿಚಾರ ವೇದಿಕೆಯ ಸಂಯೋಜಕ ಡಾ. ಗಾಂಧೀಜಿ ಮೋಳಕೇರೆ ನಿರೂಪಿಸಿದರು. ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ. ಚಂದ್ರಶೇಖರ ಎಸ್. ಸ್ವಾಗತಿಸಿದರು. ಡಾ. ಹರ್ಷವರ್ಧನ ಬಿ. ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here