ಶಹಾಬಾದ: ಸಾರ್ವಜನಿಕರಿಗೆ ಕೋವಿಡ್ ಲಸಿಕೆ

0
67

ಶಹಾಬಾದ: ಹಳೆಶಹಾಬಾದನ ಜನರು ಕೋವಿಡ್ ಲಸಿಕೆಯನ್ನು ಪಡೆಯಲು ಶಹಾಬಾದ ನಗರಕ್ಕೆ ಹೋಗಬೇಕಿಲ್ಲ. ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿಯೇ ಲಸಿಕೆಯನ್ನು ನೀಡಲಾಗುತ್ತಿದ್ದು, ಅದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ನಗರಸಭೆ ಸದಸ್ಯ ಮಲ್ಲಿಕಾರ್ಜುನ ವಾಲಿ ಹೇಳಿದರು.

ಅವರು ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ  ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಮಾದಿಗ ಸಮಾಜಕ್ಕೆ ಕಾಟಮಳ್ಳಿ ಅಧ್ಯಕ್ಷ

ಕೆಲವು ದಿನಗಳಿಂದ ಕೊರೊನಾ ನಿಯಂತ್ರಿಸಲು ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ಸರ್ಕಾರದಿಂದ ಹಾಕಲಾಗುತ್ತಿದೆ.ಅದಕ್ಕಾಗಿ ಇಲ್ಲಿನ ಜನರು  ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಹೋಗಬೇಕಾಗಿತ್ತು. ಶಹಾಬಾದನ ಸಮುದಾಯ ಆರೋಗ್ಯ ಕೇಂದ್ರ ಸುಮಾರು ೪ ಕಿಮೀ ದೂರದಲ್ಲಿದೆ.ಅಲ್ಲಿ ಸಾಕಷ್ಟು ಜನರು ಸರದಿಯಲ್ಲಿ ನಿಂತುಕೊಳ್ಳುತ್ತಿರುವುದರಿಂದ ಇಲ್ಲಿನ ಜನರಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಹಳೆಶಹಾಬಾದನಲ್ಲಿ ಒಂದು ದಿನವಾದರೂ ಲಸಿಕೆ ಹಾಕುವುದಕ್ಕೆ ಮುಂದಾದರೆ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದಾಗ, ಅಧಿಕಾರಿಗಳು ಸ್ಪಂದಿಸಿ, ಲಸಿಕೆ ನೀಡಲು ಮುಂದಾಗಿದ್ದಾರೆ.ಆದ್ದರಿಂದ ಸಾರ್ವಜನಿಕರು ಯಾವುದಕ್ಕೂ ಭಯ ಪಡದೇ ಲಸಿಕೆಯನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಇನ್‌ಟ್ಯಾಕ್‌ನಿಂದ “ಹೊಳಕುಂದಾ ದರ್ಶನ”

ಮುಖಂಡರಾದ ಶಿವಕುಮಾರ ನಾಟೇಕಾರ,ರೇವಣಸಿದ್ದ ಮತ್ತಿಮಡು, ಸೋಮಶೇಖರ ಕರಿಬಾವಿ, ಆರೋಗ್ಯ ಸಿಬ್ಬಂದಿಗಳಾದ ಜಯಶ್ರೀ, ವಾಣಿಶ್ರೀ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ,ಲಕ್ಷ್ಮಿಬಾಯಿ, ಆಶಾಕಾರ್ಯಕರ್ತೆ ಈರಮ್ಮ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here